ಬೆಂಗಳೂರು: ಟಿಕ್‍ಟಾಕ್ ಸ್ಟಾರ್ ಗಳು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಕೆಲವೇ ಕೆಲವು ಸೆಕೆಂಡುಗಳ ವಿಡಿಯೋ ಶೂಟ್ ಮಾಡಲು ಟಿಕ್‍ಟಾಕ್ ಸ್ಟಾರ್ ಗಳು ದೊಡ್ಡ ದೊಡ್ಡ ಅನಾಹುತ ಮಾಡಿರುವ ಸುದ್ದಿಗಳನ್ನು ನೀವು ಕೇಳಿರಬಹುದು. ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರು ಅನೇಕರಿದ್ದಾರೆ. ಟಿಕ್‍ಟಾಕ್ ಮಾಡಲು ಹೋಗಿ ಪಾಕಿಸ್ತಾನಿ ಟಿಕ್‍ಟಾಕ್ ಸ್ಟಾರ್ ಒಬ್ಬಳು ದೊಡ್ಡ ಎಡವಟ್ಟು ಮಾಡಿದ್ದಾಳೆ. ಇದೀಗ ಆಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟಿಜನ್‍ಗಳ ಕಣ್ಣು ಕೆಂಪಗಾಗಿಸಿದೆ.
ಅಷ್ಟಕ್ಕೂ ಏನು ಮಾಡಿದ್ದಾಳೆ ಟಿಕ್‍ಟಾಕ್ ಸ್ಟಾರ್..?
ಚಿತ್ರ-ವಿಚಿತ್ರ ಟಿಕ್‍ಟಾಕ್ ವಿಡಿಯೋ ಮಾಡುತ್ತಲೇ ಪ್ರಸಿದ್ಧಿಯಾಗಿರುವ ಪಾಕಿಸ್ತಾನದ ಟಿಕ್‍ಟಾಕ್ ಸ್ಟಾರ್ ಹುಮೈರಾ ಅಸ್ಗರ್ ಇತ್ತೀಚೆಗೆ ಶೂಟ್ ಮಾಡಿರುವ ವಿಡಿಯೋವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಕೆಯ ವಿಡಿಯೋ ನೋಡಿದ ಅನೇಕರು ಕಿಡಿಕಾರಿದ್ದು, ಛೀಮಾರಿ ಹಾಕಿದ್ದಾರೆ. ಅಷ್ಟಕ್ಕೂ ಹುಮೈರಾ ಮಾಡಿದ ತಪ್ಪಾದರೂ ಏನು ಅಂತೀರಾ..?
ಇದನ್ನೂ ಓದಿ: Shocking Video : ಹುಲಿಯನ್ನು ಸಾಕು ನಾಯಿಯಂತೆ ಸುತ್ತಾಡಿಸುತ್ತಾಳೆ ಈ ಯುವತಿ, ನೀವೂ ನೋಡಿ
This tiktoker from Pakistan has set fire to the forest for 15 sec video.
Government should make sure that culprits are punished and the tiktoker along with the brand should be penalised. #Pakistan #TikTok pic.twitter.com/76ad77ULdJ
— Discover Pakistan 🇵🇰 | پاکستان (@PakistanNature) May 17, 2022
ಟಿಕ್‍ಟಾಕ್‍ನಲ್ಲಿ ಸುಮಾರು 11 ಮಿಲಿಯನ್‍ಗಿಂತಲೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ಹುಮೈರಾ ಇತ್ತೀಚೆಗೆ ವಿಡಿಯೋ ಶೂಟ್ ಮಾಡಿಸಿದ್ದಾಳೆ. ಕೇವಲ 15 ಸೆಕೆಂಡುಗಳ ವಿಡಿಯೋಗೆ ಆಕೆ ಗುಡಕ್ಕೇ ಬೆಂಕಿ ಇಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ಸದ್ಯ ವೈರಲ್ ಆಗಿರುವ ಟಿಕ್‌ಟಾಕ್ ವಿಡಿಯೋದಲ್ಲಿ ಹುಮೈರಾ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ನಡೆದುಕೊಂಡು ಬರುತ್ತಿರುವಾಗ ಹಿಂದೆ ಬೆಟ್ಟದಲ್ಲಿ ಬೆಂಕಿ ಉರಿಯುತ್ತಿರುವುದು ಕಾಣುತ್ತದೆ. ‘ನಾನು ಎಲ್ಲಿಗೆ ಹೋದರೂ ಅಲ್ಲಿ ಬೆಂಕಿ ಇರುತ್ತದೆ’ ಎಂದು ಈ ವಿಡಿಯೋಗೆ ಆಸ್ಗರ್ ಕ್ಯಾಪ್ಶನ್ ನೀಡಿದ್ದಾಳೆ. ಕೇವಲ 15 ಸೆಕೆಂಡುಗಳ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವ ಹುಮೈರಾಳಿಗೆ ಛೀಮಾರಿ ಹಾಕಿರುವ ಅನೇಕರು ಆಕೆಯನ್ನು ಅನ್‌ಫಾಲೋ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ವಿಡಿಯೋ ಕ್ಲಿಪ್ ವೈರಲ್ ಆದ ನಂತರ ಇಂತಹ ಟಕ್‍ಟಾಕರ್‌ಗಳನ್ನು ಶಿಕ್ಷಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ವಿಡಿಯೋ ಶೋಕಿಗಾಗಿ ಪರಸರಕ್ಕೆ ಬೆಂಕಿ ಇಟ್ಟಿರುವ ಹುಮೈರಾಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅಮ್ಮನ ಫೋನ್ ನಿಂದ 31 ಬರ್ಗರ್ ಆರ್ಡರ್ ಮಾಡಿ, ಟಿಪ್ಸ್ ಕೂಡಾ ಕೊಟ್ಟ ಎರಡು ವರ್ಷದ ಪೋರ
ವಿಡಿಯೋ ವೈರಲ್ ಆದ ನಂತರ ಟೀಕೆಗೆ ಗುರಿಯಾಗಿರುವ ಹುಮೈರಾ ಆಸ್ಗರ್ ಮಾತನಾಡಿ, ‘ಈ ಕಾಡ್ಗಿಚ್ಚು ನನ್ನಿಂದ ಉಂಟಾಗಿಲ್ಲ. ವಿಡಿಯೋ ಮಾಡುವುದರಿಂದ ನಾನು ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ’ವೆಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಈ ವಿಡಿಯೋವನ್ನು ಟಿಕ್‍ಟಾಕ್‍ನಿಂದ ತೆಗೆದುಹಾಕಿದ್ದರೂ ಹುಮೈರಾ ವಿರುದ್ಧ ನೆಟಿಜನ್‍ಗಳು ಸೋಷಿಯಲ್ ಮೀಡಿಯಾದಲ್ಲಿ ಕೋಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.