Sri Lanka Crisis: ಗೋಟಬಯ ರಾಜಪಕ್ಸ ವಿರುದ್ಧದ ಅವಿಶ್ವಾಸಕ್ಕೆ ಸೋಲು

ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದಕ್ಕೆ ರಾಜಪಕ್ಸ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆಯೂ ಅವರಿಗೆ ಜಯ ಸಿಕ್ಕಂತಗಾಗಿದೆ.

Written by - Zee Kannada News Desk | Last Updated : May 17, 2022, 09:29 PM IST
  • ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ವಿರುದ್ಧ ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತ
  • ಅವಿಶ್ವಾಸ ನಿರ್ಣಯದ ವಿರುದ್ಧ 119 ಮತ್ತು ಪರವಾಗಿ 68 ಸದಸ್ಯರು ಮತ ಚಲಾಯಿಸಿದ್ದಾರೆ
  • ಶ್ರೀಲಂಕಾ ಸಂಸತ್ತಿನ ಉಪಾಧ್ಯಕ್ಷರಾಗಿ ಆಡಳಿತ ಪಕ್ಷದ ಸದಸ್ಯ ಅಜಿತ್ ರಾಜಪಕ್ಸ ಆಯ್ಕೆಯಾಗಿದ್ದಾರೆ
Sri Lanka Crisis: ಗೋಟಬಯ ರಾಜಪಕ್ಸ ವಿರುದ್ಧದ ಅವಿಶ್ವಾಸಕ್ಕೆ ಸೋಲು title=
ಗೋಟಬಯ ವಿರುದ್ಧದ ಅವಿಶ್ವಾಸಕ್ಕೆ ಸೋಲು

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಪ್ರಕ್ಷುಬ್ಧಗೊಂಡಿದೆ. ಹಣದುಬ್ಬರದ ಹೊಡೆತಕ್ಕೆ ಸಿಲುಕಿ ಲಂಕಾ ಜನತೆ ದಿಕ್ಕೆಟ್ಟು ಹೊಗಿದ್ದಾರೆ. ದಿನೇ ದಿನೇ ಸಿಂಹಳ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ವಿರುದ್ಧ ಸಂಸತ್ತಿನಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ.

ಹೌದು, ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದಕ್ಕೆ ರಾಜಪಕ್ಸ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆಯೂ ಅವರಿಗೆ ಜಯ ಸಿಕ್ಕಂತಗಾಗಿದೆ. ವಿಪಕ್ಷ ತಮಿಳು ನ್ಯಾಷನಲ್ ಅಲೈಯನ್ಸ್‌ (TNA) ಸದಸ್ಯ ಎಂ.ಎ.ಸುಮಂತಿರನ್‌ ಅವಿಶ್ವಾಸ ನಿರ್ಣಯ ಮಂಡಿಸಿದರು. ಒಟ್ಟು 119 ಸದಸ್ಯರು ಇದರ ವಿರುದ್ಧ ಮತ ಚಲಾಯಿಸಿದರೆ 68 ಸದಸ್ಯರು ಪರವಾಗಿ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಹೆಚ್ಚುತ್ತಿರುವ ಕೊರೊನಾ: ಇಡೀ ಜಗತ್ತಿಗೆ ಕಾದಿದೆ ಗಂಡಾಂತರ..!

ವಿಪಕ್ಷ ಸಮಗಿಜನ ಬಲವೆಗಯ (SJP) ಸದಸ್ಯ ಲಕ್ಷ್ಮಣ್ ಕಿರಿಲ್ಲಾ ನಿರ್ಣಯವನ್ನು ಬೆಂಬಲಿಸಿದರು ಎಂದು ವರದಿಯಾಗಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಲಂಕಾ ಅಧ್ಯಕ್ಷರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ. ರಾಜಪಕ್ಷ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸುವ ನಿರ್ಣಯ ಕುರಿತು ಚರ್ಚೆಯಾಗಬೇಕೆಂದು ಆಗ್ರಹಿಸಲಾಗಿತ್ತು.

ಶ್ರೀಲಂಕಾ ಪ್ರಧಾನಿಯಾಗಿದ್ದ ರಾಜಪಕ್ಷ ಅವರ ತಮ್ಮ ಮಹಿಂದಾ ರಾಜಪಕ್ಷ ಮೇ 9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸರ್ವಪಕ್ಷಗಳ ಮಧ್ಯಂತರ ಸರ್ಕಾರ ರಚನೆಯಾಗಿತ್ತು. ರಾನಿಲ್‌ ವಿಕ್ರಮಸಿಂಘೆ ಪ್ರಧಾನಿಯಾಗಿ ನೇಮಕಗೊಂಡಿದ್ದರು.

ಇದನ್ನೂ ಓದಿ: Shocking Video : ಹುಲಿಯನ್ನು ಸಾಕು ನಾಯಿಯಂತೆ ಸುತ್ತಾಡಿಸುತ್ತಾಳೆ ಈ ಯುವತಿ, ನೀವೂ ನೋಡಿ

ಈ ನಡುವೆ ಶ್ರೀಲಂಕಾ ಸಂಸತ್ತಿನ ಉಪಾಧ್ಯಕ್ಷರಾಗಿ ಆಡಳಿತ ಪಕ್ಷದ ಸದಸ್ಯ ಅಜಿತ್ ರಾಜಪಕ್ಸ ಆಯ್ಕೆಯಾಗಿದ್ದಾರೆ. ಸರ್ವಪಕ್ಷಗಳ ಸರ್ಕಾರ ರಚನೆಯ ನಂತರ ಇದೇ ಮೊದಲ ಬಾರಿಗೆ ಸಂಸತ್‌ ಅಧಿವೇಶನ ನಡೆಯಿತು. ಗೋಪ್ಯ ಮತದಾನದಲ್ಲಿ ಆಡಳಿತ ಪಕ್ಷ ಶ್ರೀಲಂಕಾ ಪೊಡುಜನ ಪೆರಮುನ ಪಾರ್ಟಿ(SLPP)ಗೆ ಸೇರಿದ 48 ವರ್ಷದ ಅಜಿತ್ ಆಯ್ಕೆಯಾದರು. ಅಜಿತ್ ಪರವಾಗಿ 109 ಮತಗಳು, ಪ್ರತಿಪಕ್ಷದ ಸಮಗಿ ಜನ ಬಲವೆಗಯ ಪಕ್ಷದ ರೋಹಿಣಿ ಕವಿರತ್ನರಿಗೆ 78 ಮತಗಳು ಬಂದಿದ್ದವು ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News