ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ದಿನಗಳಲ್ಲಿ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಒಂದೆಡೆ, ಪ್ರತಿಪಕ್ಷಗಳು ಪಾಕ್ ಪ್ರಧಾನಿ ವಿರುದ್ಧ ದಾಳಿ ನಡೆಸುತ್ತಿವೆ. ಮತ್ತೊಂದೆಡೆ ಮೂಲಭೂತವಾದಿ ಸಂಘಟನೆಯಾದ ತೆಹ್ರೀಕ್-ಎ-ಲ್ಯಾಬ್‌ಬೈಕ್ ಪಾಕಿಸ್ತಾನ  (Tehreek-e-Labbaik Pakistan) ಕೂಡ  ಪ್ರಧಾನಿ ವಿರುದ್ಧ ಸಿಡಿದೆದ್ದಿದೆ. ಈ ಪರಿಸ್ಥಿತಿಯಲ್ಲಿ ತನ್ನ ನೋವನ್ನು ವ್ಯಕ್ತಪಡಿಸಲು ಇಮ್ರಾನ್ ಖಾನ್ ಬಾಲಿವುಡ್ ಚಿತ್ರದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಟ್ರೋಲ್‌ಗೆ ಒಳಗಾಗಿದ್ದಾರೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ತನ್ನ ವಿರುದ್ಧದ ಪಿತೂರಿಯನ್ನು ಬಹಿರಂಗಪಡಿಸಲು ಬಾಲಿವುಡ್ ಚಲನಚಿತ್ರ ಇಂಕ್ವಿಲಾಬ್ನ ಕಡೇರ್ ಖಾನ್ (Kader Khan) ತಮ್ಮ ಪಕ್ಷದ ಮುಖಂಡರಿಗೆ ಅಧಿಕಾರ ಪಡೆಯಲು ಷಡ್ಯಂತ್ರ ರೂಪಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಶೀರ್ಷಿಕೆಯಲ್ಲಿ  ಇಮ್ರಾನ್ ಖಾನ್ (Imran Khan), ಭ್ರಷ್ಟ ಮಾಫಿಯಾ ತನ್ನ ಸರ್ಕಾರವನ್ನು ಕೆಡವಲು ಮೊದಲ ದಿನದಿಂದಲೂ ಸಂಚು ರೂಪಿಸುತ್ತಿದೆ ಎಂದು ಬರೆದಿದ್ದಾರೆ.  ಈ ಮೂಲಕ ತಮ್ಮ ಸರ್ಕಾರದ ವಿರುದ್ಧ ವಿರೋಧಿಗಳ ಪಿತೂರಿಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.


Imran Khan: ಕರೋನಾ ನಿಯಮಗಳನ್ನು ಉಲ್ಲಂಘಿಸಿ ನೆಟ್ಟಿಗರ ಟೀಕೆಗೆ ಗುರಿಯಾದ ಪಾಕ್ ಪ್ರಧಾನಿ


ವೀಡಿಯೊ ತುಣುಕಿನಲ್ಲಿ ಏನಿದೆ? 
ಪಾಕಿಸ್ತಾನ ಪ್ರಧಾನಿ ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರುವ ವಿಡಿಯೋ ತುಣುಕಿನಲ್ಲಿ, ಕಡೇರ್ ಖಾನ್, 'ಆಡಳಿತದಲ್ಲಿರುವ ಸರ್ಕಾರವೇ ಯಾವಾಗಲೂ ಮುಂದುವರೆಯಬೇಕು ಎಂದು ಯಾವ ಗೀತೆಯಲ್ಲೂ ಬರೆದಿಲ್ಲ. ನಮಗೂ ಸರ್ಕಾರ ರಚಿಸುವ ಎಲ್ಲ ಹಕ್ಕಿದೆ. ಇದಕ್ಕಾಗಿ ನಾವು ಚುನಾವಣೆಯಲ್ಲಿ ಗೆಲ್ಲಬೇಕು. ಅದಕ್ಕೂ ಮೊದಲು ನಾವು ಸಾರ್ವಜನಿಕರ ವಿಶ್ವಾಸವನ್ನು ಗಳಿಸಬೇಕು. ಜನರ ವಿಶ್ವಾಸವನ್ನು ಗೆಲ್ಲಲು, ನಾವು ಸರ್ಕಾರದ ಮೇಲಿನ ಜನರ ನಂಬಿಕೆಯನ್ನು ಕೆಡವಬೇಕು.  ನಾವು ಕೂಡ ಅಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ, ಜನರು ದಣಿದ ನಂತರ ಬೇರೆ ಯಾರನ್ನಾದರೂ ಆ ಜಾಗದಲ್ಲಿ ಕೂರಿಸಲು ಸಿದ್ಧರಾಗುತ್ತಾರೆ' ಎಂದು ಹೇಳುವ ದೃಶ್ಯ ಇದರಲ್ಲಿದೆ.


ಇದನ್ನೂ ಓದಿ - Pakistanಕ್ಕೆ ಬ್ಲಾಂಕ್ ಚೆಕ್ ಆಫರ್ ನೀಡಿದ ರಷ್ಯಾ ಅಧ್ಯಕ್ಷ Vladimir Putin! ಪಾಕ್ ನಲ್ಲಿ ಕೋಲಾಹಲ


ಪಾಕಿಸ್ತಾನ ಪ್ರಧಾನಿಯನ್ನು ಟ್ರೋಲ್ ಮಾಡಿದ ಸೋಶಿಯಲ್ ಮೀಡಿಯಾ ಬಳಕೆದಾರರು:
ಇಮ್ರಾನ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಆದರೆ ಈ ದೃಶ್ಯವನ್ನು ಕಂಡು ಜನರು ತನ್ನನ್ನು ಗೇಲಿ ಮಾಡಬಹುದು ಎಂದು  ಬಹುಶಃ ಅವರು ನಿರೀಕ್ಷಿಸಿರಲಿಕ್ಕಿಲ್ಲ.  ಕೆಲವು ಸೋಷಿಯಲ್ ಮೀಡಿಯಾ ಬಳಕೆದಾರರು ಪಾಕಿಸ್ತಾನದ ಪ್ರಧಾನ ಮಂತ್ರಿ ಕೆಲವು ದಿನಗಳ ಹಿಂದೆ ಬಾಲಿವುಡ್‌ನ ನೈತಿಕ ಕುಸಿತದ ಬಗ್ಗೆ ಮಾತನಾಡುತ್ತಿದ್ದರು ಮತ್ತು ಈಗ ಅವರು ಅದೇ ಬಾಲಿವುಡ್ ಚಿತ್ರಣ ತುಣುಕನ್ನು ತಮ್ಮ ವಿರೋಧಿಗಳ ಮೇಲೆ ಆಕ್ರಮಣ ಮಾಡಲು ಬಳಸುತ್ತಿದ್ದಾರೆ ಎಂದು ನೆನಪಿಸಿದರು. ಇಂತಹ ಹಲವು ಟ್ರೋಲ್ ಗಳನ್ನು ಕಂಡ ಇಮ್ರಾನ್ ಖಾನ್ ತಾವು ಪೋಸ್ಟ್ ಮಾಡಿದ ವಿಡಿಯೋವನ್ನು ಕೆಲ ಸಮಯದ ಬಳಿಕ ಡಿಲೀಟ್ ಮಾಡಿದ್ದಾರೆ.  ಆದಾಗ್ಯೂ, ಅದರ ನಂತರವೂ ಹಲವರು ಇಮ್ರಾನ್ ಖಾನ್ ಅವರನ್ನು ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.