ಕರಾಚಿ: Imran Khan Corona Positive - ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ ಕೊರೊನಾ ಸೋಂಕಿಗೆ (Corona Positive)ಗುರಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ ಬಂದ ವೈದ್ಯರ ವರದಿಯಲ್ಲಿ ಪಾಕ್ ಪ್ರಧಾನಿ ಕಳೆದ ಗುರುವಾರ ಅಂದರೆ ಮಾರ್ಚ್ 18ರಂದು ಕೊರೊನಾ ವ್ಯಾಕ್ಸಿನ್ ನ ಮೊದಲ ಡೋಸ್ ಹಾಕಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ವ್ಯಾಕ್ಸಿನೆಶನ್ ಬಳಿಕ ಅವರು ಕೊರೊನಾ ಮಹಾಮಾರಿಯ ದಾಳಿಗೆ ತುತ್ತಾಗಿದ್ದಾರೆ.
ಇದನ್ನೂ ಓದಿ- Corona Vaccine: ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಮತ್ತೆ ಸಹಾಯ ಹಸ್ತ ಚಾಚಿದ ಭಾರತ
ಹೋಮ್ ಕ್ವಾರಂಟೀನ್ ಗೆ ಒಳಗಾದ ಇಮ್ರಾನ್ ಖಾನ್
ಪಾಕಿಸ್ತಾನದ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ತಾವು ಕೊರೊನಾ ಪಾಸಿಟಿವ್ ಎಂಬುದು ಅರಿವಿಗೆ ಬರುತ್ತಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imaran Khan) ಹೋಮ್ ಕ್ವಾರಂಟೀನ್ ಗೆ ಒಳಗಾಗಿದ್ದಾರೆ. ಇದಲ್ಲದೆ ಅವರು ಕಳೆದ ಕೆಲದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದ ಜನರಿಗೆ ಆದಷ್ಟು ಬೇಗ ಕೊರೊನಾ ಪರೀಕ್ಷೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕಳೆದ 24 ಗಂಟೆಗಳ ಕುರಿತು ಮಾತನಾಡುವುದಾದರೆ, ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 3876 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದು ಈ ವರ್ಷದ ಅತಿದೊಡ್ಡ ಅಂಕಿ ಸಂಖ್ಯೆಯಾಗಿದೆ.
ಇದನ್ನೂ ಓದಿ-ಭಾರತ ವಿರೋಧಿ China ಪರಿಸ್ಥಿತಿ ಕಂಡು ಬೆಚ್ಚಿಬಿದ್ದ Pakistan, ಅಮೆರಿಕಕ್ಕೆ ಮಾಡಿರುವ ಮನವಿ ಏನು ಗೊತ್ತೇ?
ಈ ವರ್ಷದ ಅತ್ಯಧಿಕ ಪ್ರಕರಣಗಳು ಇಂದು ವರದಿಯಾಗಿವೆ
ಇಡೀ ದೇಶದ ಅಂಕಿ ಸಂಖ್ಯೆಗಳ ಕುರಿತು ವರದಿ ಮಾಡಿರುವ ಆರೋಗ್ಯ ಸಚಿವಾಲಯ ಇದುವರೆಗೆ ದೇಶದಲ್ಲಿ 623,135 ಜನರು ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 40 ರೋಗಿಗಳು ಅಸುನೀಗಿದ್ದಾರೆ ಮತ್ತು ಈ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ 13,799ಕ್ಕೆ ತಲುಪಿದೆ. ಇದಲ್ಲದೆ 579,760 ಜನರು ಇದುವರೆಗೆ ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಪ್ರಸ್ತುತ 2122 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ಸೋಂಕು ಹರಡುವ ದರ ಶೇ.9.4 ರಷ್ಟಿದೆ.
ಇದನ್ನೂ ಓದಿ - Pak Economic Crisis: ಸಂಪೂರ್ಣ ದಿವಾಳಿಯತ್ತ ಪಾಕಿಸ್ತಾನ, ಜಿನ್ನಾ ಕೊನೆಯ ಗುರುತಿನ ಹರಾಜಿಗೆ ಮುಂದಾದ ಇಮ್ರಾನ್ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.