ಸ್ಯಾನ್ಫ್ರಾನ್ಸಿಸ್ಕೋ: ವಾಟ್ಸಪ್ ಈಗ ತನ್ನ ಒಂದು ಬಿಲಿಯನ್ ಬಳಕೆದಾರರಗೆ  ಅನ್ ಬ್ಲಾಕ್ ಮಾಡಿ ಖಾಸಗಿ ಮೆಸೇಜನ್ನು ಗ್ರೂಪ್ ನ ಸದಸ್ಯರಿಗೆ ಮಾಡುವ ಆಯ್ಕೆಯನ್ನು ನೀಡುತ್ತಿದೆ.ಆ ಮೂಲಕ ವಾಟ್ಸಪ್ ತನ್ನ ಹೊಸ ಅಪ್ ಡೇಟ್ ಗಳ ಮೂಲಕ ಬಳಕೆದಾರರನ್ನು ಹೆಚ್ಚಿಸುವಲ್ಲಿ ವಾಟ್ಸಪ್ ಯಶಸ್ವಿಯಾಗಿ ದಾಪುಗಾಲು ಇಟ್ಟಿದೆ.


COMMERCIAL BREAK
SCROLL TO CONTINUE READING

ಇನ್ನು ಮುಂದೆ ಗ್ರೂಪ್ ನಲ್ಲಿ  ಬ್ಲಾಕ್ ಮಾಡಿರುವ ಸದಸ್ಯರನ್ನು ಅನ್ ಬ್ಲಾಕ್ ಮಾಡಿ ಖಾಸಗಿ ಸಂದೇಶವನ್ನು ಕಳುಹಿಸಬಹುದು.ಈ ಹಿಂದೆ ಬಳಕೆದಾರರಿಗೆ ಈ ಆಯ್ಕೆ ಇದ್ದಿರಲಿಲ್ಲ ಈಗ ಈ ಆಯ್ಕೆ ಇನ್ನು ಮುಂದೆ ಗ್ರೂಪ್ ನಲ್ಲಿಯೇ ಲಭ್ಯವಾಗಲಿದೆ ಎಂದು ಬೀಟಾ ತನ್ನ ವೆಬ್ಸೈಟ್ ನಲ್ಲಿ ತಿಳಿಸಿದೆ.


ಈ ಹಿಂದೆ ವಾಟ್ಸಪ್ ಗ್ರೂಪ್ ನ ಮಾಹಿತಿಗಾಗಿ ಹೊಸ ಶಾರ್ಟ್ ಕಟ್ ಆಯ್ಕೆಯನ್ನು  ಈ ಮೊದಲು  iOS  ಬಳಕೆದಾರರಿಗೆ ಮಾತ್ರ ಸಿಗುತಿತ್ತು ಈಗ ಅದನ್ನು ಎಲ್ಲರಿಗೂ ವಿಸ್ತರಿಸಲಾಗುತ್ತದೆ . ಆದರೆ ಗ್ರೂಪ್ ಅಡ್ಮಿನ್ ಗೆ ಮಾತ್ರ ಈ ಆಯ್ಕೆ ಕಾಣುತ್ತದೆ. ಇನ್ನು ಮುಂದಿನ ದಿನಗಳಲ್ಲಿ  iOS ಗ್ರೂಪ್ ಕಾಲ್ ಮಾಡುವ ಅವಕಾಶ ಹಾಗೂ ಪಿಚ್ಚರ್ ಇನ್ ಪಿಚ್ಚರ್  ಹೊಸ ಆಯ್ಕೆಯನ್ನು ಕೂಡ ವಾಟ್ಸಪ್ ನೀಡುತ್ತಿದ್ದು ಅದರ ಮೂಲಕ  ವಿಡಿಯೋ ಚಾಟ್ ಮತ್ತು ಮೆಸೇಜ್ ಅನ್ನು ಒಮ್ಮೆಗೆ ಮಾಡಬಹುದು.


ಇನ್ನು ಏಷ್ಯಾದ ವಾಣಿಜ್ಯ ಬಳಕೆದಾರರ ದೃಷ್ಟಿಯಲ್ಲಿಟ್ಟುಕೊಂಡು ಅವರಿಗಾಗಿಯೇ ಹೊಸ ಆಪ್ ಅನ್ನು ಕೂಡ ಬಿಡುಗಡೆ ಮಾಡಲು ವಾಟ್ಸಪ್ ಚಿಂತನೆ ನಡೆಸಿದೆ.