ವಾಷಿಂಗ್ಟನ್: Russia-Ukraine Crisis Updates - ರಷ್ಯಾ (Russia) ಜೊತೆಗೆ ಭಾರತ (India) ಹೊಂದಿರುವ ಸಂಬಂಧ ಅಮೆರಿಕ (America) ಮತ್ತು ರಷ್ಯಾ ನಡುವಿನ ಸಂಬಂಧಕ್ಕಿಂತ ಭಿನ್ನವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ (US President Joe Biden) ಆಡಳಿತ ಹೇಳಿದೆ. ಇದರೊಂದಿಗೆ, ರಷ್ಯಾದೊಂದಿಗೆ (Russia) ಸಂಬಂಧ ಹೊಂದಿರುವ ಪ್ರತಿಯೊಂದು ದೇಶಕ್ಕೂ ತನ್ನ ಪ್ರಭಾವವನ್ನು ನಿಯಮಾಧಾರಿತ ಅಂತರಾಷ್ಟ್ರೀಯ ಕ್ರಮವನ್ನು ರಕ್ಷಿಸಲು ಕೇಳಿಕೊಳ್ಳಲಾಗಿದೆ ಎಂದು ಯುಎಸ್ (US) ಹೇಳಿದೆ.

COMMERCIAL BREAK
SCROLL TO CONTINUE READING

ಭಾರತದೊಂದಿಗೆ ಅಮೇರಿಕಾ ಹಲವು ಹಿತಾಸಕ್ತಿಯ ಸಂಬಂಧಗಳನ್ನು ಹೊಂದಿದೆ (Ukraine Russia War Latest Updates)
ಈ ಕುರಿತು ಮಾತನಾಡಿರುವ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಭಾರದದೊಂದಿಗೆ ಅಮೆರಿಕಾದ ಪ್ರಮುಖ ಹಿತಾಸಕ್ತಿಗಳು ಮತ್ತು ಮೌಲ್ಯಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರೈಸ್, 'ನಮಗೆ ಭಾರತದೊಂದಿಗೆ ಪ್ರಮುಖ ಹಿತಾಸಕ್ತಿಗಳನ್ನು ಹೊಂದಿದ್ದೇವೆ ಮತ್ತು  ನಾವು ಭಾರತದೊಂದಿಗೆ ಪ್ರಮುಖ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ. ರಷ್ಯಾದೊಂದಿಗಿನ ಭಾರತ ಹೊಂದಿರುವ ಸಂಬಂಧವು ರಷ್ಯಾದೊಂದಿಗೆ ನಾವು ಹೊಂದಿರುವ ಸಂಬಂಧಕ್ಕಿಂತ ಭಿನ್ನವಾಗಿದೆ ಎಂಬುದು ನಮಗೆ ತಿಳಿದಿದೆ. ಇದರಲ್ಲಿ ಯಾವುದೇ ಅಡಚಣೆ ಅಥವಾ ತೊಂದರೆ ಇಲ್ಲ' ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-Ukraine-Russia War: ಭಾರತಕ್ಕೆ ಧನ್ಯವಾದ ಹೇಳಿದ ರಷ್ಯಾ, ಕಾರಣ ಇಲ್ಲಿದೆ

ಭಾರತವು ರಷ್ಯಾದೊಂದಿಗೆ ಬಲಿಷ್ಠ ಸಂಬಂಧವನ್ನು ಹೊಂದಿದೆ
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಭಾರತವು ರಷ್ಯಾದೊಂದಿಗೆ ಬಲಿಷ್ಠ  ಸಂಬಂಧವನ್ನು ಹೊಂದಿದೆ ಮತ್ತು ಖಂಡಿತವಾಗಿಯೂ ಕೂಡ ನಾವು ಆ ರೀತಿಯ ಸಂಬಂಧವನ್ನು. ಭಾರತ ಮತ್ತು ರಷ್ಯಾ ರಕ್ಷಣೆ ಮತ್ತು ಭದ್ರತೆ ಕ್ಷೇತ್ರದಲ್ಲಿ ಸಂಬಂಧ ಹೊಂದಿದ್ದು, ನಮ್ಮಲ್ಲಿ ಇಲ್ಲ. ಸಂಬಂಧಗಳನ್ನು ಹೊಂದಿರುವವರಿಗೆ ಮತ್ತು ಲಾಭವನ್ನು ಪಡೆದುಕೊಳ್ಳುವವರಿಗೆ ರಚನಾತ್ಮಕವಾಗಿ ಬಳಸಲು ನಾವು ಪ್ರತಿ ದೇಶವನ್ನು ಕೋರುತ್ತೇವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Ukraine President : ಉಕ್ರೇನ್ ಬಿಟ್ಟು ಓಡಿ ಹೋದರಾ ಅಧ್ಯಕ್ಷ ಝೆಲೆನ್ಸ್ಕಿ? ವಿಡಿಯೋ ಮೂಲಕ ಹೊರಬಿತ್ತು ಸತ್ಯ 

ರಷ್ಯಾ ಎಲ್ಲೆಡೆ ಟೀಕೆಗೆ ಗುರಿಯಾಗಿದೆ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಪೂರ್ವ ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ್ದರು ಮತ್ತು ಅಂದಿನಿಂದ ಉಭಯ ದೇಶಗಳ ನಡುವಿನ ದಾಳಿಗಳು ಮುಂದುವರೆದಿದೆ. ಈ ದಾಳಿಗೆ ರಷ್ಯಾವನ್ನು ಟೀಕಿಸಲಾಗುತ್ತಿದ್ದು, ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿವೆ. ಅಮೆರಿಕವು ಭಾರತದೊಂದಿಗೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿದೆ ಎಂದು ಪ್ರೈಸ್ ಹೇಳಿದ್ದಾರೆ.


ಇದನ್ನೂ ಓದಿ-ಉಕ್ರೇನ್-ರಷ್ಯಾ ಯುದ್ಧದ 2ನೇ ದಿನ ಏನಾಯಿತು? ಉಕ್ರೇನ್ ನಾಗರಿಕರಿಂದ ಭಾರತ ಏನು ಕಲಿಯಬಹುದು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ