Indonesia Earthquake: ಇಂದು ಮುಂಜಾನೆ ಇಂಡೋನೇಷ್ಯಾದ ತಲೌಡ್ ದ್ವೀಪಗಳಲ್ಲಿ 6.7 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ 09 ಜನವರಿ 2024ರ ಮುಂಜಾನೆ 2.18ರ ಸುಮಾರಿಗೆ ಭೂಕಂಪ ಸಂಭವಿಸಿದೆ. 


COMMERCIAL BREAK
SCROLL TO CONTINUE READING

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ X  (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ, ಭೂಕಂಪದ ಕೇಂದ್ರಬಿಂದುವು ಭೂಮಿಯ ಅಡಿಯಲ್ಲಿ 80 ಕಿ.ಮೀ ಆಳದಲ್ಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 2.18ರ ಸುಮಾರಿಗೆ ಭೂಕಂಪದ ಅನುಭವವಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ. 


Baba Vanga: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು?


ನ್ಯಾಶನಲ್ ಸೆಂಟರ್ ಫಾರ್ ಸೆಸ್ಮಾಲಜಿ (ಎನ್‌ಸಿಎಸ್), ಎಕ್ಸ್‌ನಲ್ಲಿ ಪೋಸ್ಟ್ ಮಾಡುವಾಗ (ಹಿಂದಿನ ಟ್ವಿಟರ್), ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ 80 ಕಿಮೀ ಕೆಳಗೆ ಇದೆ ಎಂದು ಮಾಹಿತಿ ನೀಡಿದೆ. ಕಳೆದ ವಾರ ಗುರುವಾರ ಇಂಡೋನೇಷ್ಯಾದ ಬಲೈ ಪುಂಗಟ್‌ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.


ಇಂಡೋನೇಷ್ಯಾದಲ್ಲಿ ಸಂಭವಿಸಿದ 6.7 ತೀವ್ರತೆಯ ಪ್ರಬಲ ಭೂಕಂಪನ ಹೊರತಾಗಿಯೂ, ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಬಗ್ಗೆ ಇಡುವರೆಗೂ ಯಾವುದೇ ವರದಿಯಾಗಿಲ್ಲ. 


ಇದನ್ನೂ ಓದಿ- Viral Video: ರೀಲ್ಸ್‌ಗಾಗಿ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಹುಚ್ಚಾಟ!


ಗಮನಾರ್ಹವಾಗಿ, ಇಂಡೋನೇಷ್ಯಾ ಪೆಸಿಫಿಕ್ ಮಹಾಸಾಗರದ ರಿಂಗ್ ಆಫ್ ಫೈರ್‌ನಲ್ಲಿದೆ. ಹಾಗಾಗಿಯೇ, ಈ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತಲೇ ಇರುತ್ತದೆ. ರಿಂಗ್ ಆಫ್ ಫೈರ್ ಪೆಸಿಫಿಕ್, ಕೊಕೊಸ್, ಇಂಡಿಯನ್-ಆಸ್ಟ್ರೇಲಿಯನ್, ಜುವಾನ್ ಡಿ ಫುಕಾ, ನಜ್ಕಾ, ಉತ್ತರ ಅಮೇರಿಕಾ ಮತ್ತು ಫಿಲಿಪೈನ್ ಟೆಕ್ಟೋನಿಕ್ ಪ್ಲೇಟ್‌ಗಳನ್ನು ಸಂಪರ್ಕಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.