Viral Video: ರೀಲ್ಸ್‌ಗಾಗಿ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಹುಚ್ಚಾಟ!

Trending Viral Video: ಟ್ರಾಫಿಕ್ ನಿಲುಗಡೆ ಸಮಯದಲ್ಲಿ ವಾಹನಗಳು ನಿಂತಿರುವಾಗ ಯುವತಿ ಡ್ಯಾನ್ಸ್ ಮಾಡಿದ್ದಾಳೆ. ವಿಡಿಯೋ ನೋಡಿದ ಬಹುತೇಕರು ಯುವತಿಯ ನಡೆ ಖಂಡಿಸಿದ್ದು, ಈ ರೀತಿಯ ಹುಚ್ಚಾಟ ಮಾಡುವುದನ್ನು ನಿಲ್ಲಿಸಬೇಕು. ಇಂತವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Written by - Puttaraj K Alur | Last Updated : Dec 26, 2023, 06:54 PM IST
  • ಸಂಚಾರ ದಟ್ಟಣೆಯ ರಸ್ತೆಯ ಮಧ್ಯೆಯೇ ಯುವತಿಯ ಡಾನ್ಸ್
  • ಟ್ರಾಫಿಕ್ ಸಿಗ್ನಲ್ ಬಳಿ ನೃತ್ಯ ಮಾಡಿದ ಯುವತಿ ವರ್ತನೆಗೆ ಖಂಡನೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ
Viral Video: ರೀಲ್ಸ್‌ಗಾಗಿ ಸಂಚಾರ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಹುಚ್ಚಾಟ! title=
ಯುವತಿ ವರ್ತನೆಗೆ ಖಂಡನೆ!

ನವದೆಹಲಿ: ಇಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ರಾತ್ರೋ ರಾತ್ರಿ ಸ್ಟಾರ್ ಆಗಲು ಇನ್ನಿಲ್ಲದ ಹುಚ್ಚಾಟವನ್ನು ನಡೆಸುತ್ತಾರೆ. ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡವರು ಅನೇಕರಿದ್ದಾರೆ. ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡು ಜೈಲು ಸೇರಿದವರು ಸಹ ಇದ್ದಾರೆ. ಇದೀಗ ಯುವತಿಯೊಬ್ಬಳ ರೀಲ್ಸ್ ಹುಚ್ಚಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಯುವತಿಯೊಬ್ಬಳು ಸಂಚಾರ ದಟ್ಟಣೆ ಇರುವ ಟ್ರಾಫಿಕ್ ಸಿಗ್ನಲ್ ಬಳಿ ಬಂದು ರಸ್ತೆ ಮಧ್ಯೆ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿದ ಬಹುತೇಕರು ಯುವತಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಸುರಕ್ಷತೆ ಬಗ್ಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅರಿವು ಮೂಡಿಸುತ್ತಿರುವ ಸಂದರ್ಭದಲ್ಲಿ ಯುವತಿ ಈ ರೀತಿ ಮಾಡಿರುವುದು ಅನೇಕರನ್ನು ಕೆರಳಿಸಿದೆ.

ಇದನ್ನೂ ಓದಿ: ಜಿರಳೆಗೂ ‘ಬಂಗಾರದ ಬೆಲೆ’... ಈ ಮಾರ್ಕೆಟ್’ನಲ್ಲಿ ಜಿರಳೆ ಮಾರಿದ್ರೆ ಸಿಗುತ್ತೆ ಲಕ್ಷ ಲಕ್ಷ ದುಡ್ಡು!

Raja Babu (@GaurangBhardwa1) ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಯುವತಿ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾಳೆ. ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳು ಸಾಗುತ್ತಿರುವ ರಸ್ತೆಯಲ್ಲಿ ತನ್ನ ಬ್ಯಾಗ್‍ಅನ್ನು ಪಕ್ಕಕ್ಕೆ ಎಸೆದು ರಸ್ತೆಯ ಮೇಲೆ ನೃತ್ಯ ಮಾಡಲು ಶುರುಮಾಡುತ್ತಾಳೆ.

ಟ್ರಾಫಿಕ್ ನಿಲುಗಡೆ ಸಮಯದಲ್ಲಿ ವಾಹನಗಳು ನಿಂತಿರುವಾಗ ಯುವತಿ ಡ್ಯಾನ್ಸ್ ಮಾಡಿದ್ದಾಳೆ. ಇದು ಯಾವ ಪ್ರದೇಶದಲ್ಲಿ ನಡೆದಿದೆ ಅನ್ನೋದು ತಿಳಿದುಬಂದಿಲ್ಲ. ಆದರೆ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.  ವಿಡಿಯೋ ನೋಡಿದ ಬಹುತೇಕರು ಯುವತಿಯ ನಡೆಯನ್ನು ಖಂಡಿಸಿದ್ದು, ಈ ರೀತಿಯ ಹುಚ್ಚಾಟ ಮಾಡುವುದನ್ನು ನಿಲ್ಲಿಸಬೇಕು. ಇಂತವರ ವಿರುದ್ಧ ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊನೆಗೂ 280 ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಬಂದಿಳಿದ ಫ್ರಾನ್ಸ್ ವಶದಲ್ಲಿದ್ದ ವಿಮಾನ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News