Happiest Country in the World: ಭಾರತದ ನೆರೆಯ ರಾಷ್ಟ್ರಗಳಲ್ಲಿ ಭೂತಾನ್ ಕೂಡ ಒಂದು. ಇದು ಜಗತ್ತಿನ ಅತೀ ಹೆಚ್ಚು ಸಂತೋಷವಾಗಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದ ಜನಸಂಖ್ಯೆ 140 ಕೋಟಿ ಇದ್ದರೆ. ಭೂತಾನ್ ಜನಸಂಖ್ಯೆ 8 ಲಕ್ಷಕ್ಕಿಂತ ಕಡಿಮೆಯಿದೆ. ಇಲ್ಲಿನ ಜನರು ಇಂದಿಗೂ ಕೂಡ ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ.


COMMERCIAL BREAK
SCROLL TO CONTINUE READING

ಭೂತಾನ್ ಸರ್ಕಾರ ಅಲ್ಲಿ ವಾಸಿಸುವ ಎಲ್ಲರಿಗೂ ಮನೆಯನ್ನು ನೀಡುತ್ತದೆ. ಜೊತೆಗೆ ಆ ದೇಶದಲ್ಲಿ ಊಟ ಕೂಡ ಉಚಿತವಾಗಿ ನೀಡಲಾಗುತ್ತದೆ. ಬಿಕ್ಷುಕರಾಗಲಿ, ನಿರಾಶ್ರಿತರಾಗಲಿ ಇಲ್ಲಿ ಕಾಣಸಿಗುವುದಿಲ್ಲ. ಎಲ್ಲರಿಗೂ ಸ್ವಂತ ಮನೆಗಳಿವೆ ಇವೆ. ಇಲ್ಲಿ ವೈದ್ಯಕೀಯ ವೆಚ್ಚಗಳು ಕೂಡ ಉಚಿತವಾಗಿದೆ. ಏಷ್ಯಾದ ಯಾವುದೇ ದೇಶಗಳಲ್ಲಿ ಇಂತಹ ದೇಶ ಸಿಗಲಾರದು.  


ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!


ಇನ್ನು ನಿಮಗೆ ವಿಶೇಷ ವಿಷಯವೊಂದನ್ನು ತಿಳಿಸಲಿದ್ದೇವೆ. ವಿಶ್ವದಲ್ಲೇ ಟೆಲಿವಿಜನ್ ಅನ್ನು ಪ್ರಾರಂಭಿಸಿದ ಕೊನೆಯ ದೇಶ ಎಂದರೆ ಅದು ಭೂತಾನ್. ಇಲ್ಲಿ 1999ರ ವರೆಗೆ ಟಿವಿಯಾಗಲಿ ಇಂಟರ್ನೆಟ್ ಆಗಲಿ ಬಳಕೆ ಮಾಡುವಂತಿರಲಿಲ್ಲ. ಇದನ್ನು ನಿಷೇಧಿಸಲಾಗಿತ್ತು. ವಿದೇಶಿ ಸಂಸ್ಕೃತಿ ಇಲ್ಲಿನ ಜನರ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂಬ ಭಯದಿಂದ ಹೀಗೆ ಮಾಡಲಾಗಿತ್ತು. ಆದರೆ 1999 ರಲ್ಲಿ ಭೂತಾನ್ ದಿನ ಈ ನಿಷೇಧವನ್ನು ತೆಗೆದುಹಾಕಲಾಯಿತು,


ಇನ್ನು 2008 ರಲ್ಲಿ ಈ ದೇಶದ ಜನರ ಆಂತರಿಕ ಶಾಂತಿಯನ್ನು ಕಾಪಾಡಲು ಸ್ಥೂಲ ರಾಷ್ಟ್ರೀಯ ಸಂತೋಷ ಸಮಿತಿಯೊಂದನ್ನು ರಚಿಸಲಾಯಿತು. ಇದರ ಜನಸಂಖ್ಯೆ ಗಣತಿಯ ಪ್ರಶ್ನೆಪತ್ರಿಕೆಯಲ್ಲಿ ಪ್ರತಿಯೊಬ್ಬರನ್ನು ನಿಮ್ಮ ಜೀವನದಿಂದ ತೃಪ್ತಿ ಹೊಂದಿದ್ದೀರಾ ಎಂಬ ಪ್ರಶ್ನೆಯನ್ನು ಕೇಳಲಾಗುತ್ತದೆ. ಇಲ್ಲಿನ ಜನರ ಆರ್ಥಿಕ, ಮಾನಸಿಕ ಮೌಲ್ಯಗಳನ್ನು ಗಣನೆಗೆ ತೆಗೆದುಕೊಂಡು ಜೀವನಶೈಲಿಯನ್ನು ನಿರ್ಧಾರ ಮಾಡಲಾಗುತ್ತದೆ.


ಈ ದೇಶದಲ್ಲಿ ಯಾವುದೇ ವ್ಯಕ್ತಿ ಮನೆ ಕಳೆದುಕೊಂಡರೆ, ಅವನಿಗೆ ರಾಜನೇ ಮನೆ ಕಟ್ಟಲು ಮತ್ತು ಕೃಷಿಗಾಗಿ ಸ್ವಲ್ಪ ಭೂಮಿಯನ್ನು ಕೊಡುತ್ತಾರೆ. ಇದೇ ಕಾರಣದಿಂದ ಇಲ್ಲಿನ ಜನರು ಸಂತೋಷವಾಗಿ, ತೃಪ್ತಿಕರವಾಗಿ ಬದುಕುತ್ತಿದ್ದಾರೆ. ಪ್ರತಿ ಭೂತಾನ್ ನಿವಾಸಿಗಳಿಗೆ ಉಚಿತ ವೈದ್ಯಕೀಯ ಸೌಲಭ್ಯವೂ ಇದೆ. ಇಲ್ಲಿ ಮಹಿಳೆಯರಿಗೆ ಮಹತ್ತರವಾದ ಗೌರವವನ್ನು ನೀಡಲಾಗುತ್ತದೆ.


ಇದರ ಹೊರತಾಗಿ ಭೂತಾನ್ ಜನರು ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ತೊಡುತ್ತಾರೆ. ಪುರುಷರು ಮೊಣಕಾಲುವರೆಗೆ ಬರುವ ಬಟ್ಟೆಗಳನ್ನು ಧರಿಸಿದರೆ, ಸ್ತ್ರೀಯರು ಉದ್ದನೆಯ ಬಟ್ಟೆಗಳನ್ನು ತೊಡುತ್ತಾರೆ. ಇನ್ನು ಸಾಮಾನ್ಯ ಜನರು ಬಿಳಿ ಶಾಲು ಉಪಯೋಗಿಸಿದರೆ, ಗಣ್ಯರು ಹಳದಿ ಧಿರಿಸುಗಳನ್ನು ಉಪಯೋಗ ಮಾಡುತ್ತಾರೆ.


ಪರಿಸರ ಕ್ಷೇತ್ರದಲ್ಲಿ ಭೂತಾನ್ ಕೊಡುಗೆ ಅಗ್ರವಾಗಿದೆ. 1999 ರಿಂದ ಇಲ್ಲಿ ಪ್ಲಾಸ್ಟಿಕ್​ಗಳನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ಧೂಪಮಾನ​ ಬಹುತೇಕ ಕಾನೂನು ವಿರುದ್ಧವಾಗಿದೆ. ಇಲ್ಲಿನ ಕಾನೂನಿನ ಪ್ರಕಾರ ದೇಶದಲ್ಲಿ ಶೇ.60ರಷ್ಟು ಭಾಗ ಕಾಡುಗಳು ಇರಬೇಕು. ಇದು ಪುಟ್ಟ ರಾಷ್ಟ್ರವಾದರೂ, ಭಾರತಕ್ಕೆ ಜಲವಿದ್ಯುತ್‌ ಮಾರಾಟ ಮಾಡುತ್ತಿದೆ.  


ಇದನ್ನೂ ಓದಿ: ಕೊನೆ ಕ್ಷಣದಲ್ಲಿ ದೊಡ್ಡ ನಿರ್ಧಾರ: ಐಪಿಎಲ್ ಆರಂಭಕ್ಕೂ ಮುನ್ನ ಕ್ಯಾಪ್ಟನ್ ಬದಲಿಸಿದ ಈ ತಂಡ!


ಇನ್ನೊಂದೆಡೆ ಇಲ್ಲಿನ ಮಹಿಳೆಯರು ಅತೀವ ಗೌರವವನ್ನು ಪಡೆಯುತ್ತಾರೆ. ಇದೇ ಕಾರಣದಿಂದ ಮಗನ ಬದಲಾಗಿ ಸಂಪೂರ್ಣ ಆಸ್ತಿ ಮಗಳ ಪಾಲಿಗೆ ಹೋಗುತ್ತದೆ. ಆದರೆ ಇಲ್ಲಿ ವಿದೇಶಿಯರನ್ನು ಮದುವೆಯಾಗುವುದು ನಿಷೇಧ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.