Tax Free Gold: ಕೇವಲ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ! ಇಲ್ಲಿ ಬಂಗಾರಕ್ಕೆ ಸುಂಕ ಕೊಂಚವೂ ಇಲ್ಲ…

Tax Free Gold: ಭೂತಾನ್, ಫುಯೆನ್‌ ಶೋಲಿಂಗ್ ಅಥವಾ ಥಿಂಪುಗೆ ಭೇಟಿ ನೀಡುವ ಭಾರತೀಯರಿಗೆ ತೆರಿಗೆ ಮುಕ್ತ ಚಿನ್ನವನ್ನು ಖರೀದಿಸಲು ಅವಕಾಶ ನೀಡಿದೆ. ಇದು ಭೂತಾನ್’ನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Written by - Bhavishya Shetty | Last Updated : Apr 1, 2023, 03:36 PM IST
    • ದೇಶವು ತನ್ನ ಚಿನ್ನದ ಬೇಡಿಕೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚನ್ನು ಆಮದುಗಳ ಮೂಲಕ ಪೂರೈಸಿಕೊಳ್ಳುತ್ತದೆ.
    • 2022 ರಲ್ಲಿ ವಿದೇಶದಿಂದ ಸುಮಾರು 706 ಟನ್ ಚಿನ್ನವನ್ನು ತರಲಾಗಿತ್ತು.
    • 2022 ರಲ್ಲಿ ಸಾಗರೋತ್ತರ ಚಿನ್ನದ ಖರೀದಿಗೆ ಸುಮಾರು $36.6 ಶತಕೋಟಿ ಖರ್ಚು ಮಾಡಲಾಗಿದೆ
Tax Free Gold: ಕೇವಲ 30 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ! ಇಲ್ಲಿ ಬಂಗಾರಕ್ಕೆ ಸುಂಕ ಕೊಂಚವೂ ಇಲ್ಲ…  title=
gold price today

Tax Free Gold: ಭಾರತೀಯರಿಗೆ ಚಿನ್ನ ಎಂಬುದು ಸಾಂಪ್ರದಾಯಿಕವಾಗಿ ತೊಡುವ ಆಭರಣ, ಜೊತೆಗೆ ಭವಿಷ್ಯದಲ್ಲಿ ಉಳಿತಾಯ ಮಾಡುವ ಪ್ರಮುಖ ಸಾಧನ ಎನ್ನಬಹುದು. ದೇಶವು ತನ್ನ ಚಿನ್ನದ ಬೇಡಿಕೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚನ್ನು ಆಮದುಗಳ ಮೂಲಕ ಪೂರೈಸಿಕೊಳ್ಳುತ್ತದೆ. 2022 ರಲ್ಲಿ ವಿದೇಶದಿಂದ ಸುಮಾರು 706 ಟನ್ ಚಿನ್ನವನ್ನು ತರಲಾಗಿತ್ತು. 2022 ರಲ್ಲಿ ಸಾಗರೋತ್ತರ ಚಿನ್ನದ ಖರೀದಿಗೆ ಸುಮಾರು $36.6 ಶತಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ತೆರಿಗೆ ಪ್ರಮಾಣ ಕೂಡ ಸೇರಿದೆ. ಈ ಹಿನ್ನೆಲೆಯಲ್ಲಿ ಭೂತಾನ್, ಫುಯೆನ್‌ ಶೋಲಿಂಗ್ ಅಥವಾ ಥಿಂಪುಗೆ ಭೇಟಿ ನೀಡುವ ಭಾರತೀಯರಿಗೆ ತೆರಿಗೆ ಮುಕ್ತ ಚಿನ್ನವನ್ನು ಖರೀದಿಸಲು ಅವಕಾಶ ನೀಡಿದೆ.

ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!

ಭೂತಾನ್ ಸರ್ಕಾರವು ಫೆಬ್ರವರಿ 21 ರಂದು, ಎರಡು ಮಂಗಳಕರ ದಿನವಾದ “ಹಿಸ್ ಮೆಜೆಸ್ಟಿ ದಿ ಕಿಂಗ್” ಮತ್ತು “ಲೋಸರ್ ಅವರ ಜನ್ಮ ವಾರ್ಷಿಕೋತ್ಸವ ಅಂದರೆ, ಭೂತಾನ್ ಹೊಸ ವರ್ಷದ ದಿನದಂದು ತೆರಿಗೆ ಮುಕ್ತ ಚಿನ್ನವನ್ನು ಭಾರತೀಯರಿಗೆ ಮಾರಾಟ ಮಾಡಲು ಮುಂದಾಗಿತ್ತು. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಭೂತಾನ್ ತೆಗೆದುಕೊಂಡ ಕ್ರಮವಾಗಿದೆ.

ಪ್ರಸ್ತುತ, ಅನೇಕ ಭಾರತೀಯರು ದುಬೈಗೆ ಭೇಟಿ ನೀಡುತ್ತಾರೆ. ಅಲ್ಲಿ ಕಡಿಮೆ ತೆರಿಗೆ ಕಾರಣದಿಂದ ಚಿನ್ನವನ್ನು ಖರೀದಿಸುತ್ತಾರೆ.

ಭೂತಾನ್‌’ನಲ್ಲಿ ಭಾರತೀಯರಿಗೆ ಎಷ್ಟು ದರದಲ್ಲಿ ಸಿಗುತ್ತೆ ಚಿನ್ನ?

ಇತ್ತೀಚಿನ ಬೆಲೆಗಳ ಪ್ರಕಾರ, ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 58,9500 ರೂ. ಇದೆ. ಆದರೆ ಭೂತಾನ್‌’ನಲ್ಲಿ ಪ್ರಸ್ತುತ ಚಿನ್ನದ ದರವು ಭೂತಾನ್‌ ನಗುಲ್ಟ್ರಮ್‌ನಲ್ಲಿ (BTN) BTN 37,588.49 ಆಗಿದೆ. ಒಂದು BTN ಸರಿಸುಮಾರು ಭಾರತೀಯ ರೂಪಾಯಿಗೆ ಸಮನಾಗಿರುತ್ತದೆ. ಭಾರತೀಯರು ಇದನ್ನು ಸುಮಾರು ರೂ. 37,588.49 ನಲ್ಲಿ ಖರೀದಿಸಬಹುದು.

ಇನ್ನು ಸುಂಕ-ಮುಕ್ತ ಚಿನ್ನದ ಪ್ರಯೋಜನವನ್ನು ಪಡೆಯಲು, ಭಾರತೀಯರು 1,200-1,800 ರೂಗಳ ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು (SDF) ಪಾವತಿಸಬೇಕಾಗುತ್ತದೆ. ಭೂತಾನ್ ಸರ್ಕಾರದಿಂದ ಪ್ರಮಾಣೀಕರಿಸಿದ ಪ್ರವಾಸಿ ಹೋಟೆಲ್‌’ನಲ್ಲಿ ನೀವು ಕನಿಷ್ಟ ಒಂದು ರಾತ್ರಿ ತಂಗಬೇಕು.

ಪ್ರವಾಸಿಗರು ಚಿನ್ನವನ್ನು ಖರೀದಿಸಲು ಯುಎಸ್ ಡಾಲರ್’ಗಳನ್ನು ತರಬೇಕಾಗುತ್ತದೆ. ಏಕೆಂದರೆ ಭೂತಾನ್ ಅದೇ ಡಾಲರ್ ಅನ್ನು ಶೂನ್ಯ ಲಾಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ತೆರಿಗೆ ಮುಕ್ತ ಚಿನ್ನವನ್ನು ಖರೀದಿಸಲು ಬಳಸುತ್ತದೆ.

ಭೂತಾನ್‌’ಗೆ ಪ್ರವೇಶಿಸುವ ಪ್ರವಾಸಿಗರು, SDF ಎಂದು ಕರೆಯಲ್ಪಡುವ ಪ್ರವಾಸೋದ್ಯಮ ತೆರಿಗೆಯನ್ನು ಪಾವತಿಸುವುದು  ಕಡ್ಡಾಯವಾಗಿದೆ. ಈ ಕಾನೂನನ್ನು ಅದರ ರಾಷ್ಟ್ರೀಯ ಅಸೆಂಬ್ಲಿ ಜಾರಿಗೊಳಿಸಿದ ನಂತರ 2022 ರಲ್ಲಿ ಭೂತಾನ್‌’ನಲ್ಲಿ SDF ಅನ್ನು ಕಡ್ಡಾಯಗೊಳಿಸಲಾಯಿತು. ಭಾರತೀಯರು ಪ್ರತಿ ವ್ಯಕ್ತಿಗೆ ದಿನಕ್ಕೆ 1,200-1,800 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಇತರ ದೇಶಗಳ ಸಂದರ್ಶಕರು $ 65 ರಿಂದ $ 200 ರ ನಡುವೆ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯುಳ್ಳ ಯುವತಿಯರೇ  ಹಾಗೂ ನಟಿಯರೇ ಹುಷಾರ್ !‌  

ಚಿನ್ನವು ಮಾರ್ಚ್ 1 ರಿಂದ ಥಿಂಪು ಮತ್ತು ಫುಯೆನ್‌ ಶೋಲಿಂಗ್‌ನಲ್ಲಿ ಖರೀದಿಗೆ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News