ವಾಷಿಂಗ್ಟನ್: ಯುಎಸ್ ಮಿಲಿಟರಿ ನೆಲೆಗಳ ಮೇಲೆ ಇರಾನ್(Iran) ದಾಳಿ ಬಳಿಕ ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ದಾಳಿ ನಡೆಸಿದ್ದರೂ, ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ದಾಳಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ ನಾನು ಅಮೆರಿಕದ ಅಧ್ಯಕ್ಷನಾಗಿರುವವರೆಗೂ ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇರಾನ್‌ನ ಆಸೆ ಈಡೇರುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.


COMMERCIAL BREAK
SCROLL TO CONTINUE READING

"ಕಳೆದ ರಾತ್ರಿಯ ದಾಳಿಯಲ್ಲಿ ಎಲ್ಲಾ ನಾಗರಿಕರು ಮತ್ತು ಸೈನಿಕರು ಸುರಕ್ಷಿತರಾಗಿದ್ದಾರೆ. ನಮ್ಮ ಮಿಲಿಟರಿ ಯಾವುದೇ ಸವಾಲಿಗೆ ಸಿದ್ಧವಾಗಿದೆ. ಇರಾನ್‌ನ ಹಿಮ್ಮೆಟ್ಟುವಿಕೆ ಇಡೀ ಜಗತ್ತಿಗೆ ಉತ್ತಮ ಸಂಕೇತವಾಗಿದೆ" ಎಂದು ಟ್ರಂಪ್ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಇರಾನ್‌ನ ಧೈರ್ಯಕ್ಕೆ ನಾನು ವಂದಿಸುತ್ತೇನೆ. ಇರಾನ್ ಭಯೋತ್ಪಾದನೆಯ ಕೇಂದ್ರವಾಗಿದ್ದು, ಪರಮಾಣು ದಾಳಿಯಿಂದ ಜಗತ್ತಿಗೆ ಬೆದರಿಕೆ ಹಾಕುತ್ತಲೇ ಇದೆ. ನಾವು ಅದನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದೇವೆ. ನನ್ನ ಸೂಚನೆಯ ಮೇರೆಗೆ ಯು.ಎಸ್. ಸಾರ್ಡ್ ಯಶಸ್ವಿಯಾಯಿತು. ಅವುಗಳ ಮೇಲೆ ಅನೇಕ ದುಷ್ಕೃತ್ಯಗಳ ಆರೋಪಗಳಿವೆ. ಅವರು ಸಾಕಷ್ಟು ಅಮೆರಿಕನ್ನರನ್ನು ಹತ್ಯೆಗೈದಿದ್ದಾರೆ" ಎಂದು ಟ್ರಂಪ್ ತಿಳಿಸಿದರು.


ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ಸೂಚಿಸಿದ ಟ್ರಂಪ್, "ಇರಾನ್ ಮೇಲೆ ನಿರ್ಬಂಧಗಳು ಮುಂದುವರಿಯಲಿವೆ. ಹೊಸ ಆರ್ಥಿಕ ನಿರ್ಬಂಧಗಳನ್ನು ಸಹ ವಿಧಿಸಲಾಗುವುದು. ಇರಾನ್ ಶಾಂತಿಯ ಹಾದಿಯಲ್ಲಿ ಸಾಗುವವರೆಗೆ ಈ ನಿರ್ಬಂಧಗಳು ಮುಂದುವರೆಯಲಿವೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಬೇಕಾಗುತ್ತದೆ. ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ಜಗತ್ತನ್ನು ಹೆಚ್ಚು ಸುರಕ್ಷಿತ ಮತ್ತು ಶಾಂತಿಯುತವಾಗಿಸಲು ನಾವು ಒಟ್ಟಾಗಿ ಇರಾನ್ ವಿರುದ್ಧ ಹೋರಾಡಬೇಕಾಗಿದೆ. ಇಂದು ನಾನು ನ್ಯಾಟೋ ಜೊತೆ ಮಾತನಾಡಲಿದ್ದೇನೆ" ಎಂದವರು ವಿವರಿಸಿದರು.


"ನನ್ನ ಅಧಿಕಾರಾವಧಿಯಲ್ಲಿ, ಯುಎಸ್ ಮಿಲಿಟರಿ ಬಲಶಾಲಿಯಾಗಿದೆ ಎಂದು ಉಲ್ಲೇಖಿಸಿದ ಡೊನಾಲ್ಡ್ ಟ್ರಂಪ್ ನಾವು ಅದಕ್ಕಾಗಿ ಎರಡೂವರೆ ಟ್ರಿಲಿಯನ್ ಡಾಲರ್ಗಳನ್ನು ಖರ್ಚು ಮಾಡಿದ್ದೇವೆ. ನಮ್ಮಲ್ಲಿ ಪರಮಾಣು ಶಸ್ತ್ರಾಸ್ತ್ರಗಳಿವೆ. ಆದರೆ ನಾವು ಅವುಗಳನ್ನು ಬಳಸಲು ಬಯಸುವುದಿಲ್ಲ. ನಮ್ಮ ಮಿಲಿಟರಿ ಶಕ್ತಿ ಮತ್ತು ಆರ್ಥಿಕ ಬಲ ನಮ್ಮ ದೊಡ್ಡ ಅಸ್ತ್ರ. ಕೆಲವು ವಾರಗಳ ಹಿಂದೆ, ನಾವು ಅಬೂಬಕರ್ ಅಲ್ ಬಾಗ್ದಾದಿಯನ್ನೂ ಕೊಂದಿದ್ದೇವೆ" ಎಂದರು.


ಇದೇ ಸಂದರ್ಭದಲ್ಲಿ "ನಮಗೆ ಮಧ್ಯಪ್ರಾಚ್ಯದಿಂದ ತೈಲ ಅಗತ್ಯವಿಲ್ಲ ಎಂದು ತಿಳಿಸಿದ ಅಧ್ಯಕ್ಷ ಟ್ರಂಪ್, ಇರಾನ್ ಪರಮಾಣು ಹಾದಿಯಲ್ಲಿ ಸಾಗಬೇಕಾಗುತ್ತದೆ. ಇರಾನ್ ಭಯೋತ್ಪಾದನೆಯನ್ನು ತೊರೆದರೆ, ಅಮೆರಿಕ ಶಾಂತಿಗೆ ಸಿದ್ಧವಾಗಿದೆ. ಇರಾನ್ ಅದನ್ನು ದ್ವೇಷಿಸುತ್ತಿದೆ, ಇರಾನ್ ವರ್ತನೆ ಬಹಳ ಹಿಂದಿನಿಂದಲೂ ಹೀಗೆ ಇದೆ" ಎಂದವರು ತಿಳಿಸಿದರು.