ನವದೆಹಲಿ: ಇಂಗ್ಲೆಂಡಿನ ಪೋರ್ಟ್ಸ್ ಲ್ಯಾಂಡ್(Portland)ನ ಕಾಡಿನಲ್ಲಿ ಯುವತಿಯೊಬ್ಬಳ ಶವವೊಂದು ಪತ್ತೆಯಾಗಿತ್ತು. ಈ ಹುಡುಗಿಯನ್ನು 20 ವರ್ಷದ ಆಮಿ ಸ್ಪ್ರಿಂಗರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಈ ಯುವತಿ ವಾಟ್ಸಾಪ್ ಗ್ರೂಪ್‌(Whatsapp Suicide Group)ಗೆ ಸೇರಿಕೊಂಡಿದ್ದಳು. ಈ ಗ್ರೂಪ್‌ನಲ್ಲಿ ಆತ್ಮಹತ್ಯೆಯ ‘ಉತ್ತಮ ಮಾರ್ಗ’ಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂಬುದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

ವಾಟ್ಸಾಪ್ ಗ್ರೂಪ್‌ನಲ್ಲಿ ಏನಾಯಿತು?


ಆಮಿಯನ್ನು ಹೊರತುಪಡಿಸಿ ಇನ್ನೂ ಮೂವರ ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ತನಿಖೆ ವೇಳೆ ಈ ಮೂವರೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇವರೆಲ್ಲರೂ ಕೂಡ ಒಂದೇ ವಾಟ್ಸಾಪ್ ಗ್ರೂಪ್‌ನ ಸದಸ್ಯರಾಗಿದ್ದರಂತೆ. ಆಮಿ ಸ್ಪ್ರಿಂಗರ್(Amy Springer) ಜೊತೆಯಲ್ಲಿಯೇ ಅವರು ವಾಟ್ಸಪ್ ಗ್ರೂಪ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಚರ್ಚಿಸಿದರಂತೆ. ವಾಟ್ಸಾಪ್ ಚರ್ಚೆಯ ನಂತರ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದೀಗ ಪೊಲೀಸರನ್ನೇ ಅಚ್ಚರಿಗೊಳಿಸಿದೆ.


ಇದನ್ನೂ ಓದಿ: Weird News: ಬೆಡ್ರೂಮಲ್ಲಿ ದೊರೆತ ಸಿಕ್ರೆಟ್ ಲಿಸ್ಟ್ ನೋಡಿ ಬೆಚ್ಚಿಬಿದ್ದಪತ್ನಿ, ಗರ್ಲ್ ಫ್ರೆಂಡ್ ಜೊತೆ...!


ಸೂಸೈಡ್ ಗ್ರೂಪ್‌ನ ಉದ್ದೇಶವೇನು?


ಆತ್ಮಹತ್ಯೆ(Commits Suicide)ಗೆ ಮುನ್ನವೇ ಆಮಿ ತನ್ನ ಜೀವನವನ್ನು ಹೇಗೆ ಕೊನೆಗೊಳಿಸಬೇಕು ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ಚರ್ಚಿಸುತ್ತಿದ್ದಳು ಎಂದು ತನಿಖೆಯಲ್ಲಿ ಪೊಲೀಸರಿಗೆ ತಿಳಿದುಬಂದಿದೆ. ಇದರ ನಂತರ ಆಕೆಯ ಶವವು ಪೋರ್ಟ್ಸ್ ಲ್ಯಾಂಡ್ ನ ಬೆನ್ ಫೀಲ್ಡ್ ವ್ಯಾಲಿ ಕ್ರಿಕೆಟ್ ಕ್ಲಬ್ ಬಳಿಯ ಅರಣ್ಯದಲ್ಲಿ ಪತ್ತೆಯಾಗಿದೆ. ಈ ಆತ್ಮಹತ್ಯೆ ಗ್ರೂಪ್‌ನಲ್ಲಿನ ಸದಸ್ಯರ ಆನ್‌ಲೈನ್ ಸಂಭಾಷಣೆಗಳ ಬಗ್ಗೆ ಪೊಲೀಸರು ಈಗ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.


ಆಮಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು


ಡೈಲಿ ಮೇಲ್ ವರದಿಯ ಪ್ರಕಾರ, ಆಮಿ ದೀರ್ಘಕಾಲದವರೆಗೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ತಿಳಿದು ಬಂದಿದೆ. ಅವರ ಕಿರಿಯ ಸಹೋದರ ಬಾಲ್ಯದಲ್ಲಿ ತೀರಿಕೊಂಡಿದ್ದನಂತೆ. ಇದರ ನಂತರ ಕುಟುಂಬದ ಪರಿಸ್ಥಿತಿಯಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳಂತೆ. ಕಳೆದ ಕೆಲವು ದಿನಗಳಿಂದ ಆಕೆಯ ಮಾನಸಿಕ ಆರೋಗ್ಯ ಸುಧಾರಿಸಿದ್ದರೂ, ಇದ್ದಕ್ಕಿದ್ದಂತೆ ವಾಟ್ಸಾಪ್ ಗ್ರೂಪ್‌ನ ಚರ್ಚೆಯ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾಳೆಂದು ತಿಳಿದುಬಂದಿದೆ.


ಇದನ್ನೂ ಓದಿ: World's Luckiest House: ಇದು ವಿಶ್ವದ ಅದೃಷ್ಟಶಾಲಿ ಮನೆಯಂತೆ..! ಕಾರಣ ಏನು ಗೊತ್ತೇ..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.