ಕಾರ್ಮಿಕರ ಹಿತದೃಷ್ಟಿಯಿಂದ ಸೌದಿ ಅರೇಬಿಯಾ ದೊಡ್ಡ ಹೆಜ್ಜೆ ಇಟ್ಟಿದ್ದು ವಿವಾದಾತ್ಮಕ 'ಕಫಾಲಾ ವ್ಯವಸ್ಥೆಯನ್ನು' ರದ್ದುಗೊಳಿಸಿದೆ. ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಬುಧವಾರ ಇದನ್ನು ಪ್ರಕಟಿಸಿದೆ. ಹೊಸ ವ್ಯವಸ್ಥೆ ಮಾರ್ಚ್ 2021 ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಈಗ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಒಪ್ಪಂದವನ್ನು ಕೊನೆಗೊಳಿಸುವ ಮೂಲಕ ಕೆಲಸವನ್ನು ಬದಲಾಯಿಸಲು ಅವಕಾಶ ನೀಡಲಾಗುವುದು. ಜೊತೆಗೆ ಅವರು ಕಡಿಮೆ ವೇತನದ ಮೇಲೆ ಕಡ್ಡಾಯವಾಗಿ ಕೆಲಸ ಮಾಡಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಸುಧಾರಣೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು:-
ಸಚಿವಾಲಯದ ಪರವಾಗಿ ಸರ್ಕಾರವು ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ಹೊರಟಿದೆ. ಇದರಿಂದಾಗಿ ವಲಸೆ ಕಾರ್ಮಿಕರನ್ನು ಕಡಿಮೆ ವೇತನ ಇದ್ದಾಗ್ಯೂ  ತಮ್ಮ ಉದ್ಯೋಗದಾತರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದ್ದ ಅನಿವಾರ್ಯ ಪರಿಸ್ಥಿತಿಯಿಂದ ಮುಕ್ತಿ ದೊರೆಯಲಿದೆ. ಹೊಸ ಕಾರ್ಮಿಕ ಸುಧಾರಣಾ ನೀತಿಗಳು ಮಾರ್ಚ್ 2021 ರಲ್ಲಿ ಜಾರಿಗೆ ಬರಲಿವೆ. ಸೌದಿ ಅರೇಬಿಯಾ (Saudi Arabia)ದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ಕೆಲಸ ಮಾಡುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಈ ಸುದ್ದಿ ಅವರಿಗೆ 'ದೀಪಾವಳಿ ಉಡುಗೊರೆ' ಎಂದೇ ಭಾವಿಸಬಹುದು.


200 ರೂ. ಕೊಟ್ಟು ಲಾಟರಿ ಖರೀದಿಸಿದ ಕಾರ್ಮಿಕ ಗೆದ್ದ ಹಣ ಎಷ್ಟು ಗೊತ್ತಾ!


ಕಾರ್ಮಿಕರಿಗೆ ಸಿಗಲಿದೆ ಈ ಹಕ್ಕು:-
ಉಪ ಮಂತ್ರಿ ಅಬ್ದುಲ್ಲಾ ಬಿನ್ ನಾಸರ್ ಅಬುತುನೈನ್ (Abdullah bin Nasser Abuthunain) ಅವರು 'ಆಕರ್ಷಕ ಕಾರ್ಮಿಕ ಮಾರುಕಟ್ಟೆಯನ್ನು ಸೃಷ್ಟಿಸಲು ಮತ್ತು ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸಲು ನಾವು ಒಂದು ಹೆಜ್ಜೆ ಇಟ್ಟಿದ್ದೇವೆ. ಈ ಹೊಸ ಕಾರ್ಮಿಕ ಸುಧಾರಣೆಗಳ ಅನುಷ್ಠಾನದ ನಂತರ, ವಿದೇಶಿ ಕಾರ್ಮಿಕರಿಗೆ ಉದ್ಯೋಗಗಳನ್ನು ಬದಲಾಯಿಸುವ ಮತ್ತು ಉದ್ಯೋಗದಾತರ ಅನುಮತಿಯಿಲ್ಲದೆ ದೇಶವನ್ನು ತೊರೆಯುವ ಹಕ್ಕಿದೆ ಎಂದು ವಿವರಿಸಿದರು.


ಕಾರ್ಮಿಕರಿಗೆ ಲಾಭ:
ಈ ವರ್ಷ G20 ಸಮೂಹದ ನೇತೃತ್ವ ವಹಿಸಿರುವ ಸೌದಿ ಅರೇಬಿಯಾ ತೈಲ ಅವಲಂಬಿತ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸರ್ಕಾರದ ಈ ನಿರ್ಧಾರವು ಅವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಏಕೆಂದರೆ ಇದು ಉನ್ನತ ನುರಿತ ಕಾರ್ಮಿಕರನ್ನು ಆಕರ್ಷಿಸಲು ಮತ್ತು ದೇಶದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. 


ಕಾರ್ಮಿಕರೇ ನಿಜವಾದ ದೇಶ ನಿರ್ಮಾಪಕರೆಂದು ನಿರೂಪಿಸುವ ಹೋರಾಟಕ್ಕೆ MASA ಕರೆ


ಕಾಫಲಾ ವ್ಯವಸ್ಥೆ ಎಂದರೇನು?
ಸೌದಿ ಅರೇಬಿಯಾದ ಕಾಫಲಾ ವ್ಯವಸ್ಥೆಯು ಕಾರ್ಮಿಕರ (Labours) ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸುತ್ತದೆ. ಸರಳವಾಗಿ ಹೇಳುವುದಾದರೆ ಇತರ ದೇಶಗಳಿಂದ ಇಲ್ಲಿಗೆ ಬಂದು ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಬ್ಬಾಳಿಕೆಯಿಂದ ಪಾರಾಗಲು ಅವಕಾಶವಿಲ್ಲ. ಆ ಕಾರ್ಮಿಕ ತನ್ನಿಚ್ಚೆಯಂತೆ ಸ್ವಂತವಾಗಿ ಕೆಲಸವನ್ನು ಬಿಡಲು ಸಾಧ್ಯವಿಲ್ಲ, ದೇಶದಿಂದ ಹೊರಹೋಗಲು ಸಹ ತನ್ನ ಉದ್ಯೋಗದಾತರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಉದ್ಯೋಗದಾತರ ಅನುಮತಿಯಿಲ್ಲದೆ, ಅವನು ಕೆಲಸವನ್ನು ಬದಲಾಯಿಸಲು ಅಥವಾ ಹಿಂತಿರುಗಲು ಸಾಧ್ಯವಿಲ್ಲ. ಅನೇಕ ಉದ್ಯೋಗದಾತರು ತಮ್ಮ ಕಾರ್ಮಿಕರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ ಮತ್ತು ಅವರು ಅತಿಯಾಗಿ ಕೆಲಸ ಮಾಡಲು ಒತ್ತಾಯಿಸಲ್ಪಡುತ್ತಾರೆ ಎಂದು ಕಂಡುಬಂದಿದೆ.


ಕಾಫಲಾ ವ್ಯವಸ್ಥೆಯನ್ನು ರದ್ದುಗೊಳಿಸುವ ಬೇಡಿಕೆ:-
ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸೇರಿದಂತೆ ಮಾನವ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಸ್ಥೆಗಳು ಕಫಾಲಾ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಸೌದಿ ಅರೇಬಿಯಾಕ್ಕೆ ಒತ್ತಾಯಿಸುತ್ತಿವೆ. ಇಂತಹ ವ್ಯವಸ್ಥೆಯು ಕಾರ್ಮಿಕರ ಮಾನವ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತದೆ ಎಂದು ಈ ಸಂಸ್ಥೆಗಳು ಹೇಳುತ್ತವೆ.