200 ರೂ. ಕೊಟ್ಟು ಲಾಟರಿ ಖರೀದಿಸಿದ ಕಾರ್ಮಿಕ ಗೆದ್ದ ಹಣ ಎಷ್ಟು ಗೊತ್ತಾ!

ಆ ಕಾರ್ಮಿಕ 1.5 ಕೋಟಿ ಲಾಟರಿ ಹೊಡೆದಿರುವ ಎಂಬ ಸುದ್ದಿ ಆ ಪ್ರದೇಶದಲ್ಲಿ ಬೆಂಕಿಯಂತೆ ಹರಡಿದೆ. ಮೊದಲಿಗೆ ಇದನ್ನು ನಂಬದ ಜನ, ನಂತರ ಸತ್ಯ ತಿಳಿದು ಆಶ್ಚರ್ಯಚಕಿತರಾದರು.

Last Updated : Sep 6, 2018, 12:29 PM IST
200 ರೂ. ಕೊಟ್ಟು ಲಾಟರಿ ಖರೀದಿಸಿದ ಕಾರ್ಮಿಕ ಗೆದ್ದ ಹಣ ಎಷ್ಟು ಗೊತ್ತಾ! title=

ಚಂಡೀಗಢ: ಕೊಡೋ ದೇವರು ಯಾವತ್ತಾದ್ರೂ ಕೊಟ್ಟೇ ಕೊಡ್ತಾನೆ ಅಂತಾರೆ... ಈ ಮಾತು ಪಂಜಾಬ್ನಲ್ಲಿ ಮತ್ತೊಮ್ಮೆ  ಸಾಬೀತಾಗಿದೆ. ಇಲ್ಲಿ ಒಬ್ಬ ಕಾರ್ಮಿಕನಿಗೆ 1.5 ಕೋಟಿ ರೂ. ಲಾಟರಿ ಹೊಡೆದಿದೆ. ಇದಕ್ಕಿಂತ ಆಶ್ಚರ್ಯದ ಸಂಗತಿ ಎಂದರೆ ಆ ಕಾರ್ಮಿಕ ಸಾಲ ಪಡೆದು ಲಾಟರಿ ಟಿಕೆಟನ್ನು ಖರೀದಿಸಿದ್ದ ಎಂಬುದು. ಆ ಕಾರ್ಮಿಕ 1.5 ಕೋಟಿ ಲಾಟರಿ ಹೊಡೆದಿರುವ ಎಂಬ ಸುದ್ದಿ ಆ ಪ್ರದೇಶದಲ್ಲಿ ಬೆಂಕಿಯಂತೆ ಹರಡಿದೆ. ಮೊದಲಿಗೆ ಇದನ್ನು ನಂಬದ ಜನ, ನಂತರ ಸತ್ಯ ತಿಳಿದು ಆಶ್ಚರ್ಯಚಕಿತರಾದರು.

ಮಾಧ್ಯಮ ವರದಿಗಳ ಪ್ರಕಾರ, ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಮನೋಜ್ ಕುಮಾರ್ ಎಂಬುವವರು ಕೂಲಿ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರು ಯಾವಾಗಲೂ ಶ್ರೀಮಂತರಾಗುವ ಕನಸು ಕಾಣುತ್ತಿದ್ದರು. ಸಿನಿಮಾಗಳನ್ನು ನೋಡುವಾಗ ಲಾಟರಿನಲ್ಲಿ ಹಣವನ್ನು ಗೆಲ್ಲುವ ಮೂಲಕ ಶ್ರೀಮಂತರಾಗಬಹುದೆಂದು ಅವರು ಅಂದುಕೊಳ್ಳುತ್ತಿದ್ದರಂತೆ. ಹಾಗಾಗಿಯೇ ಅವರು ಬಹಳ ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರು. ಕಳೆದ ಕೆಲವು ದಿನದ ಹಿಂದೆ ಪಂಜಾಬ್ ರಾಜ್ಯದಲ್ಲಿ ರಾಖಿ ಬಂಪರ್ 2018 ಲಾಟರಿ ಬಗ್ಗೆ ತಿಳಿದುಕೊಂಡ ಆತ ಆ ಲಾಟರಿಯನ್ನು ಖರೀದಿಸಲು ನಿರ್ಧರಿಸಿದರು.

ಮನೋಜ್ ಅವರ ಬಳಿ ಆ ಲಾಟರಿಯನ್ನು ಖರೀದಿಸಲೂ ಸಹ ಹಣವಿರಲಿಲ್ಲ. ಆದರೆ ಲಾಟರಿ ಟಿಕೆಟ್ ಖರೀದಿಸುವ ಕೊನೆಯ ದಿನಾಂಕ ಬಂದೇ ಬಿಟ್ಟಿತು. ಹಣ ಇಲ್ಲದ ಕಾರಣ ಆ ಲಾಟರಿ ಟಿಕೆಟ್ ಅನ್ನು ಖರೀದಿಸಬಾರದೆಂದು ಮನೋಜ್  ಮೊದಲಿಗೆ ಭಾವಿಸಿದರು. ಆದರೂ ಮನಸ್ಸು ತಡೆಯದೆ ಮನೋಜ್ ತನಗೆ ಬೇರೇನೋ ಕೆಲಸಕ್ಕೆ ಅಗತ್ಯವಿದೆ ಎಂದು ಹೇಳಿ ತನ್ನ ಸ್ನೇಹಿತನ ಬಳಿ 200 ರೂ. ಸಾಲ ಪಡೆದು ಲಾಟರಿ ಖರೀದಿಸಿದರು. ಅಂದು ತೆಗೆದುಕೊಂಡ ಲಾಟರಿ ಟಿಕೆಟ್ ಆತನನ್ನು ಶ್ರೀಮಂತನಾಗಿಸಬಹುದೆಂದು ಆತ ಕನಸಿನಲ್ಲಿಯೂ ಎಣಿಸಿರಲಿಲ್ಲ.

ಪಂಜಾಬ್ ರಾಜ್ಯ ರಾಖಿ ಬಂಪರ್ ವಿಜೇತರು 2018 ಸ್ಪರ್ಧೆಯ ಲಾಟರಿ ಘೋಷಿಸಲ್ಪಟ್ಟಾಗ, ಕಾರ್ಮಿಕ ಮನೋಜ್ ಪಡೆದ ಟಿಕೆಟ್ ಒಂದನೇ ಬಹುಮಾನಕ್ಕೆ ಆಯ್ಕೆಯಾಯಿತು. ಅವರು ಲಾಟರಿನಲ್ಲಿ 1.5 ಕೋಟಿ ಮೊತ್ತವನ್ನು ಗೆದ್ದಿದ್ದಾರೆ ಎಂದು ತಿಳಿದ ಮನೋಜ್ ಅದನ್ನು ಕೇಳಿ ಆಶ್ಚರ್ಯಚಕಿತರಾದರು. 

ಲಾಟರಿ ಡ್ರಾವನ್ನು ಆಗಸ್ಟ್ 29 ರಂದು ಘೋಷಿಸಲಾಯಿತು. ನಂತರ ಪಂಜಾಬ್ ರಾಜ್ಯ ರಾಖಿ ಬಂಪರ್ 2018ರ ಲಾಟರಿ ವಕ್ತಾರ ಟಿಪಿಎಸ್ ಫುಲ್ಕಾ ನಿರ್ದೇಶಕನನ್ನು ಭೇಟಿ ಮಾಡಿ ತಾವು ಲಾಟರಿ ವಿಜೇತರಾಗಿರುವ ಬಗ್ಗೆ ತಿಳಿಸಿದ ಮನೋಜ್ ಅವರಿಗೆ ಸಾಧ್ಯವಾದಷ್ಟು ಬೇಗ ವಿಜೇತ ಹಣವನ್ನು ಪಾವತಿ ಮಾಡಲಾಗುವುದು ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ.

Trending News