Kenya Man Married triplets: ಇಂದಿನ ಸಮಾಜದಲ್ಲಿ ಬಹುಪತ್ನಿತ್ವ ಸಾಮಾನ್ಯವಲ್ಲ. ಅದರಲ್ಲೀ ಸಹೋದರಿಯರು ಒಂದೇ ಪುರುಷನನ್ನು ಮದುವೆಯಾಗುವುದು ಅಸಾಮಾನ್ಯ ಸಂಗತಿ ಎನ್ನಬಹುದು. ಆದರೆ ಕೀನ್ಯಾದಲ್ಲಿ ವಿಚಿತ್ರವಾದ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ತ್ರಿವಳಿ ಸಹೋದರಿಯರು ಒಬ್ಬ ವ್ಯಕ್ತಿಯನ್ನೇ ವಿವಾಹವಾಗಿದ್ದಾರೆ. ಈ ವಿಚಾರ ತಿಳಿದ ಯುವಕರ ಹೃದಯ ಒಡೆದು ಚೂರಾದಂತಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟರ್ಕಿಗೆ ನೆರವು ನೀಡಲು ಮುಂದಾಗಿದ್ದ ಭಾರತಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕ್


ಡೈಲಿ ಸ್ಟಾರ್ ವರದಿಯ ಪ್ರಕಾರ, ಗಾಸ್ಪೆಲ್ ಸಂಗೀತದಲ್ಲಿ ವೃತ್ತಿಜೀವನವ ನಡೆಸುತ್ತಿದ್ದ ಕೇಟ್, ಈವ್ ಮತ್ತು ಮೇರಿ ಎಂಬ ಮೂವರು ಸಹೋದರಿಯರು ಕೀನ್ಯಾದ ಸ್ಟೀವೊ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮೊದಲು ಕೇಟ್, ಸ್ಟೀವೊ ಅವರನ್ನು ಭೇಟಿಯಾಗಿದ್ದರು. ಆ ನಂತರ ಆಕೆಯ ಸಹೋದರಿಯರನ್ನು ಭೇಟಿಯಾದರು. ಈ ಭೇಟಿಯ ಬಗ್ಗೆ ಖುದ್ದಾಗಿ ಮಾತನಾಡಿದ ಸ್ಟೀವೊ, “ನಾನು ಈ ಮೂವರ ಬಗ್ಗೆಯೂ ಕಾಳಜಿ ವಹಿಸಿದೆ, ನನ್ನ ಮಾತುಕತೆ ಒಬ್ಬರ ಮೇಲೆ ಕೇಂದ್ರೀಕೃತವಾಗಿರಲಿಲ್ಲ” ಎಂದು ಹೇಳಿದ್ದಾರೆ.


ತಾನು ಬಹುಪತ್ನಿತ್ವವನ್ನು ಅನುಸರಿಸಿದ್ದೇನೆ ಎಂದು ಹೇಳಿಕೊಳ್ಳುವ ಸ್ಟೀವೊ, ತನ್ನ ಜೀವನದಲ್ಲಿ ಮೂವರು ಮಹಿಳೆಯರೊಂದಿಗೆ ತೃಪ್ತನಾಗಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಮೂವರು ಮಹಿಳೆಯರ ಅಗತ್ಯಗಳನ್ನು ಮತ್ತು ಆಸೆಗಳನ್ನು ಸಮಾನವಾಗಿ ಪೂರೈಸುವುದು ಕಷ್ಟವೇ ಎಂದು ಕೇಳಿದಾಗ, "ನಾನು ಮೂವರು ಮಹಿಳೆಯರನ್ನು ತೃಪ್ತಿಪಡಿಸಬಲ್ಲೆ ಎಂಬ ಅಂಶವನ್ನು ಜನರು ಏಕೆ ನಂಬುತ್ತಿಲ್ಲ? ಅದು ದೊಡ್ಡ ವಿಷಯವಲ್ಲ" ಎಂದು ನೇರವಾಗಿ ಹೇಳಿದ್ದಾರೆ.


Photos : ಭೂಕಂಪದ ನಂತರ 17 ಗಂಟೆಗಳವರೆಗೆ ತನ್ನ ಪುಟ್ಟ ತಮ್ಮನನ್ನು ಸುರಕ್ಷಿತವಾಗಿರಿಸಿದ ಏಳು ವರ್ಷದ ಬಾಲಕಿ


ಬಹುಪತ್ನಿತ್ವವು ಸಾಮಾಜಿಕ ಮತ್ತು ವಿವಾಹ ಪದ್ಧತಿಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸಂಗಾತಿಗಳನ್ನು ಹೊಂದಿರುತ್ತಾನೆ. ಬಹುಪತ್ನಿತ್ವದಲ್ಲಿ ಬಹು ಪತ್ನಿಯರನ್ನು ಹೊಂದಿರುತ್ತಾರೆ. ಬಹುಪತಿತ್ವದಲ್ಲಿ ಬಹು ಗಂಡಂದಿರನ್ನು ಹೊಂದುವ ಅವಕಾಶವಿರುತ್ತದೆ. ಆದರೆ ಈ ಅನುಸರಣೆ ಈಗಿನ ಸಮಾಜದಲ್ಲಿ ವಿವಾದಾಸ್ಪದವಾಗಿದೆ. ಅಲ್ಲದೆ, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಕಾನೂನುಬಾಹಿರವಾಗಿದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.