Earthquake: ಬೆಂಕಿಪೊಟ್ಟಣದಂತೆ ಪುಡಿಪುಡಿಯಾಯ್ತು ಟರ್ಕಿ-ಸಿರಿಯಾ: 2300 ಮಂದಿಯ ಸಾವಿಗೆ ಕಾರಣವಾಯ್ತು ಭೂಕಂಪನ

Turkey Earthquake Updates: ಸಿರಿಯಾದ ಅಂತರ್ಯುದ್ಧ ಮತ್ತು ಇತರ ಘರ್ಷಣೆಗಳಿಂದ ಪಲಾಯನ ಮಾಡಿದ ಲಕ್ಷಾಂತರ ಜನರಿಂದ ತುಂಬಿರುವ ಪ್ರದೇಶದಲ್ಲಿ 7.8 ತೀವ್ರತೆಯ ಭೂಕಂಪನ ಇಂದು ಮುಂಜಾನೆ ಸಂಭವಿಸಿದೆ. ಪರಿಣಾಮ ಪ್ರಮುಖ ಟರ್ಕಿಶ್ ನಗರಗಳ ಸಂಪೂರ್ಣ ಭಾಗಗಳು ನೆಲಸಮವಾಗಿವೆ.

Written by - Bhavishya Shetty | Last Updated : Feb 6, 2023, 09:11 PM IST
    • 7.8 ತೀವ್ರತೆಯ ಭೂಕಂಪನ ಇಂದು ಮುಂಜಾನೆ ಸಂಭವಿಸಿದೆ
    • ಪರಿಣಾಮ ಪ್ರಮುಖ ಟರ್ಕಿಶ್ ನಗರಗಳ ಸಂಪೂರ್ಣ ಭಾಗಗಳು ನೆಲಸಮವಾಗಿವೆ.
    • ಭೂಕಂಪ ಸಂಭವಿಸಿದ್ದು, ಸೋಮವಾರ 2,300 ಕ್ಕೂ ಹೆಚ್ಚು ಜನರ ಜೀವನಾಶ ಮಾಡಿದೆ
Earthquake: ಬೆಂಕಿಪೊಟ್ಟಣದಂತೆ ಪುಡಿಪುಡಿಯಾಯ್ತು ಟರ್ಕಿ-ಸಿರಿಯಾ: 2300 ಮಂದಿಯ ಸಾವಿಗೆ ಕಾರಣವಾಯ್ತು ಭೂಕಂಪನ title=
Turkey Earthquake

Turkey Earthquake Updates: ಇಸ್ತಾಂಬುಲ್: ಸುಮಾರು ಒಂದು ಶತಮಾನದ ಬಳಿಕ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪ ಇದಾಗಿದ್ದು, ಸೋಮವಾರ 2,300 ಕ್ಕೂ ಹೆಚ್ಚು ಜನರ ಜೀವನಾಶ ಮಾಡಿದೆ. ಹಸಿರುಮಯ ನಾಡಿನಲ್ಲಿ ರಕ್ತ ಯುದ್ಧಭೂಮಿಯಂತೆ ಕಾಣಿಸಿಕೊಳ್ಳುತ್ತಿದೆ

ಸಿರಿಯಾದ ಅಂತರ್ಯುದ್ಧ ಮತ್ತು ಇತರ ಘರ್ಷಣೆಗಳಿಂದ ಪಲಾಯನ ಮಾಡಿದ ಲಕ್ಷಾಂತರ ಜನರಿಂದ ತುಂಬಿರುವ ಪ್ರದೇಶದಲ್ಲಿ 7.8 ತೀವ್ರತೆಯ ಭೂಕಂಪನ ಇಂದು ಮುಂಜಾನೆ ಸಂಭವಿಸಿದೆ. ಪರಿಣಾಮ ಪ್ರಮುಖ ಟರ್ಕಿಶ್ ನಗರಗಳ ಸಂಪೂರ್ಣ ಭಾಗಗಳು ನೆಲಸಮವಾಗಿವೆ.

ಇದನ್ನೂ ಓದಿ: Viral News: ದೈಹಿಕ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಯುವಕ: ಅನ್ಯಾಯ ಹೇಳಿದರೂ ಥಳಿಸಿದ ಕುಟುಂಬ… ಮುಂದೇನಾಯ್ತು ಗೊತ್ತಾ?

ಅವಶೇಷಗಳಡಿ ಸಿಲುಕಿರುವವರನ್ನು ಹೊರತರಲು ರಕ್ಷಣಾ ತಂಡ ಭಾರೀ ಕಾರ್ಯಾಚರಣೆ ನಡೆಸುತ್ತಿದೆ. ಇನ್ನಷ್ಟು ಸಾವು ನೋವುಗಳು ವರದಿಯಾಗುವ ಅನುಮಾನ ವ್ಯಕ್ತವಾಗಿದೆ. ಇನ್ನು ಈ ದಾರುಣ ಘಟನೆಯ ಅನುಭವವನ್ನು ಅನುಭವಿಸಿದ್ದಾಗಿ ಟರ್ಕಿಯ ಕಹ್ರಮನ್ಮರಸ್ ನಗರದ ವರದಿಗಾರ್ತಿ ಮೆಲಿಸಾ ಸಲ್ಮಾನ್ ಹೇಳಿದ್ದಾರೆ. "ಇಲ್ಲಿ ಆಗಾಗ್ಗೆ ಭೂಕಂಪನ ಅನುಭವಗಳು ಆಗುತ್ತಿರುತ್ತವೆ. ಆದರೆ ನಾವು ಮೊದಲ ಬಾರಿಗೆ ಇಂತಹ ಅನುಭವವನ್ನು ಅನುಭವಿಸಿದ್ದೇವೆ" ಎಂದು ಎಎಫ್‌ಪಿಗೆ ತಿಳಿಸಿದರು.

ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರೇದ್ ಅಹ್ಮದ್, ಇದನ್ನು "ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ" ಎಂದು ಕರೆದಿದ್ದಾರೆ.

ಸಿರಿಯಾದ ಬಂಡುಕೋರರು ಮತ್ತು ಸರ್ಕಾರಿ ನಿಯಂತ್ರಿತ ಭಾಗಗಳಲ್ಲಿ ಕನಿಷ್ಠ 810 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮ ಮತ್ತು ವೈದ್ಯಕೀಯ ಮೂಲಗಳು ತಿಳಿಸಿವೆ. ಟರ್ಕಿಯ ಅಧಿಕಾರಿಗಳು 1,498 ಸಾವುನೋವುಗಳನ್ನು ವರದಿ ಮಾಡಿದ್ದಾರೆ.

ಒಂದೆಡೆ ಭೂಕಂಪನ ಮತ್ತೊಂದೆಡೆ ಹಿಮಪಾತ ಕೂಡ ಟರ್ಕಿ-ಸಿರಿಯಾವನ್ನು ಸಂಕಷ್ಟಕ್ಕೀಡು ಮಾಡಿದೆ. ಪ್ರಮುಖ ರಸ್ತೆಗಳನ್ನು ಆವರಿಸಿರುವ ಹಿಮಪಾತದಿಂದ ರಕ್ಷಣೆಗೆ ಅಡ್ಡಿಯಾಗುತ್ತಿದೆ. ಭೂಕಂಪದಿಂದ ಈ ಪ್ರದೇಶದಲ್ಲಿನ ಮೂರು ಪ್ರಮುಖ ವಿಮಾನ ನಿಲ್ದಾಣಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಎಲ್ಲಾ ಸಮಸ್ಯೆಗಳು ಪ್ರಮುಖ ಸಹಾಯದ ವಿತರಣೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯಲ್ಲಿ 1939ರಲ್ಲಿ 7.8-ತೀವ್ರತೆ ಭೂಕಂಪನವು ಸಂಭವಿಸಿದ್ದು, ಅದರಲ್ಲಿ ಪೂರ್ವ ಎರ್ಜಿಂಕನ್ ಪ್ರಾಂತ್ಯದ 33,000 ಮಂದಿ ಸಾವನ್ನಪ್ಪಿದ್ದರು.

ಸೋಮವಾರ ಸಂಭವಿಸಿದ ಮೊದಲ ಭೂಕಂಪವು ಮುಂಜಾನೆ 4.17 (01.17 GMT)ಕ್ಕೆ ಸುಮಾರು 18 ಕಿಲೋಮೀಟರ್ (11 ಮೈಲಿ) ಆಳದಲ್ಲಿ ಟರ್ಕಿಯ ನಗರವಾದ ಗಜಿಯಾಂಟೆಪ್ ಬಳಿ ಸಂಭವಿಸಿದೆ. ಇದು ಸುಮಾರು ಎರಡು ಮಿಲಿಯನ್ ಜನರಿಗೆ ನೆಲೆಯಾಗಿದ್ದ ಪ್ರದೇಶವಾಗಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೆ ಹೇಳಿದೆ.

ಟರ್ಕಿಯಲ್ಲಿ ನಡುಕ ಸಂಭವಿಸಿದ ಎಂಟು ನಿಮಿಷಗಳ ನಂತರ ಮುಖ್ಯ ಭೂಕಂಪದ ನಡುಕ ಗ್ರೀನ್‌ಲ್ಯಾಂಡ್‌ನ ಪೂರ್ವ ಕರಾವಳಿಯ ಬಳಿ ಸಂಭವಿಸಿದೆ ಎಂದು ಡೆನ್ಮಾರ್ಕ್‌ನ ಭೂವೈಜ್ಞಾನಿಕ ಸಂಸ್ಥೆ ತಿಳಿಸಿದೆ.

ಇನ್ನು ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಯೂನಿಯನ್ ಮತ್ತು ರಷ್ಯಾ ರಾಷ್ಟ್ರಗಳು ಸಂಕಷ್ಟಕ್ಕೀಡಾದ ಸ್ಥಳಕ್ಕೆ ಸಹಾಯವನ್ನು ಮಾಡುವ ಭರವಸೆಯನ್ನು ನೀಡಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟರ್ಕಿಗೆ ಅಗತ್ಯ ನೆರವು ನೀಡಲು ಮುಂದಾಗಿದ್ದಾರೆ.  

ಇದನ್ನೂ ಓದಿ: Viral Video: “ನಾನೇ ನೋಡಿ ಈ ಕಾರಿನ ಯಜಮಾನ..” ಎನ್ನುತ್ತಾ ಟಾಪ್ ಮೇಲೆ ಕುಳಿತು ಊರು ಸುತ್ತಿದ ನಾಯಿ

ಕಹ್ರಮನ್ಮಾರಾಸ್ ಮತ್ತು ಗಾಜಿಯಾಂಟೆಪ್ ನಡುವಿನ ಭೂಕಂಪದ ಕೇಂದ್ರಬಿಂದು ಬಳಿ ಕೆಲವು ಭಾರಿ ವಿನಾಶ ಸಂಭವಿಸಿದೆ.  ಅಲ್ಲಿ ಇಡೀ ನಗರದ ಬ್ಲಾಕ್‌ಗಳು ಹಿಮದ ಅಡಿಯಲ್ಲಿ ಮುಚ್ಚಿಹೋಗಿವೆ. ಇನ್ನೊಂದೆಡೆ ಮಾಲ್ಟಾಯಾ ಪ್ರಾಂತ್ಯದಲ್ಲಿ 13 ನೇ ಶತಮಾನದಷ್ಟು ಹಳೆಯ ಪ್ರಸಿದ್ಧ ಮಸೀದಿಯು ಭಾಗಶಃ ಕುಸಿದಿದ್ದು, 92 ಜನರನ್ನು ಹೊಂದಿರುವ 28 ಅಪಾರ್ಟ್ಮೆಂಟ್ ಗಳ ಜೊತೆ 14 ಅಂತಸ್ತಿನ ಕಟ್ಟಡವೂ ಕುಸಿದಿದೆ. ಗಾಜಿಯಾಂಟೆಪ್‌ನಲ್ಲಿ ರೋಮನ್ ಸೈನ್ಯದಿಂದ ನಿರ್ಮಿಸಲಾದ 2,200 ವರ್ಷಗಳಷ್ಟು ಹಳೆಯದಾದ ಬೆಟ್ಟದ ಮೇಲಿನ ಕೋಟೆಯು ಸಹ ನೆಲಸಮವಾಗಿದೆ. ಅದರ ಗೋಡೆಗಳು ಭಾಗಶಃ ಕಲ್ಲುಮಣ್ಣುಗಳಾಗಿ ಮಾರ್ಪಟ್ಟಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News