YouTube NEw CEO : ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್‌ನ ಹೊಸ CEO ಭಾರತೀಯ ಮೂಲದ ನೀಲ್ ಮೋಹನ್  ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತೀಯ ಮೂಲದ ನೀಲ್ ಮೋಹನ್ ಅವರು ಸುಸಾನ್ ವೊಜ್ಸಿಕಿ ಸ್ಥಾನವನ್ನು ತುಂಬಲಿದ್ದಾರೆ. ನೀಲ್ ಮೋಹನ್ ಪ್ರಸ್ತುತ ಯೂಟ್ಯೂಬ್‌ನ ಚೀಫ್ ಪ್ರಾಡಕ್ಟ್ ಆಫೀಸರ್  ಆಗಿದ್ದಾರೆ. 


COMMERCIAL BREAK
SCROLL TO CONTINUE READING

ಯುಎಸ್ ಮೂಲದ ಟೆಕ್ ದೈತ್ಯ ಸಂಸ್ಥೆಗಳ ಚುಕ್ಕಾಣಿ ಹಿಡಿದಿರುವ  ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಅಡೋಬ್ ಸಿಇಒ ಶಾಂತನು ನಾರಾಯಣ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಸೇರಿದಂತೆ  ಭಾರತೀಯ ಮೂಲದ ಸಿಇಒಗಳ ಪಟ್ಟಿಗೆ ಇದೀಗ ನೀಲ್ ಮೋಹನ್ ಸೇರಿಕೊಳ್ಳಲಿದ್ದಾರೆ. 


ಇದನ್ನೂ ಓದಿ : Trending News: 5 ಸಾವಿರ ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು.. ಇಲ್ಲಿ ಸಿಕ್ಕಿದೆ ಖಚಿತ 'ಸಾಕ್ಷಿ'


ಯಾರು ಈ ನೀಲ್ ಮೋಹನ್ ? :
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌  ಪದವಿ ಪಡೆದಿರುವ ನೀಲ್ ಮೋಹನ್, ಯುಟ್ಯೂಬ್ ನ ನಿರ್ಗಮಿತ ಸಿಇಒ   ಸುಸಾನ್ ವೊಜ್ಸಿಕಿಯ ದೀರ್ಘಕಾಲದ ಸಹಯೋಗಿಯಾಗಿದ್ದರು. 2007 ರಲ್ಲಿ  ಅವರು ಗೂಗಲ್‌ಗೆ ಸೇರಿದ್ದರು. ಮೋಹನ್ 2015 ರಲ್ಲಿ ಯೂಟ್ಯೂಬ್‌ನಲ್ಲಿ ಚೀಫ್ ಪ್ರಾಡಕ್ಟ್ ಆಫೀಸರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಯೂಟ್ಯೂಬ್‌ನಲ್ಲಿ ಶಾಟ್ಸ್, ಮ್ಯೂಸಿಕ್ ಮತ್ತು ಸಬ್ಸ್ಕ್ರಿಪ್ಶನ್ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ನೀಲ್ ಮೋಹನ್ ಮೈಕ್ರೋಸಾಫ್ಟ್ ನಲ್ಲಿಯೂ ಕೆಲಸ ಮಾಡಿದ ಅನುಭವ ಪಡೆದುಕೊಂಡಿದ್ದಾರೆ. 


ನೀಲ್ ಮೋಹನ್ ಹೇಳಿದ್ದೇನು?
ಈ ಮಹತ್ವಪೂರ್ಣ ಮಿಶನ್ ಅನ್ನು ಮುಂದುವರಿಸಲು ಉತ್ಸುಕನಾಗಿದ್ದೇನೆ ಮತ್ತು ಹೊಸ ಭವಿಷ್ಯವನ್ನು ಎದುರು ನೋಡುತ್ತಿದ್ದೇನೆ ಎಂದು ನೀಲ್ ಮೋಹನ್ ಹೇಳಿದ್ದಾರೆ. ಇಷ್ಟು ವರ್ಷಗಳಲ್ಲಿ ನಿಮ್ಮೊಂದಿಗೆ ಕೆಲಸ ಮಾಡಿರುವ ಅನುಭವ ಅದ್ಭುತವಾಗಿತ್ತು ಎಂದು ಸುಸಾನ್ ವೊಜ್ಸಿಕಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 


Pakistan : ಪಾಕಿಸ್ತಾನದಲ್ಲಿ ಒಂದು ಲೀಟರ್‌ ಪೆಟ್ರೋಲ್ ಬೆಲೆ 272 ರೂ..!


ಸುಸಾನ್ ವೊಜ್ಸಿಕಿ ರಾಜೀನಾಮೆ ನೀಡಿರುವ ಕಾರಣ ? : 
ಟಿಕ್‌ಟಾಕ್ ಮತ್ತು ಫೇಸ್‌ಬುಕ್‌ನ ರೀಲ್ಸ್‌ನಂತಹ ಕಿರು-ರೂಪದ ವೀಡಿಯೊ ಸೇವೆಗಳು ಮತ್ತು ನೆಟ್‌ಫ್ಲಿಕ್ಸ್‌ನಂತಹ ಸ್ಟ್ರೀಮಿಂಗ್ ಪೈಪೋಟಿಯ ನಡುವೆ ಯೂಟ್ಯೂಬ್‌ನ ಜಾಹೀರಾತು ಆದಾಯವು ಸತತ ಎರಡನೇ ತ್ರೈಮಾಸಿಕದಲ್ಲಿ ಕುಸಿದಿತ್ತು. ಇದಾದ ಬಳಿಕ ಪತ್ರದ ಮೂಲಕ ಸುಸಾನ್ ವೊಜ್ಸಿಕಿ ರಾಜೀನಾಮೆಯನ್ನು ಘೋಷಿಸಿದ್ದಾರೆ. ತನ್ನ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೇನೆ ಎಂದಿದ್ದಾಳೆ. ಅವರಮಾತ್ರವಲ್ಲ, ತಮ್ಮ ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳಿಗೆ ಸಂಬಂಧಿಸಿದಂತೆ ಹೊಸ  ಅಧ್ಯಾಯ ಆರಂಭಿಸುವುದಾಗಿ ಅವರು ಹೇಳಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.