Trending News: 5 ಸಾವಿರ ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು.. ಇಲ್ಲಿ ಸಿಕ್ಕಿದೆ ಖಚಿತ 'ಸಾಕ್ಷಿ'

Trending News: ವರದಿಯ ಪ್ರಕಾರ ದಕ್ಷಿಣ ಇರಾಕ್‌ನಲ್ಲಿ ಉತ್ಖನನದ ಸಮಯದಲ್ಲಿ ಸಂಶೋಧಕರು ಕೆಲವು ವಿಷಯಗಳನ್ನು ಕಂಡುಕೊಂಡಿದ್ದಾರೆ. ಕ್ರಿಸ್ತಪೂರ್ವ 2700 ರಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದು ಈ ಆವಿಷ್ಕಾರದ ನಂತರ ತಿಳಿಯುತ್ತದೆ. ಉತ್ಖನನದಲ್ಲಿ ಮಣ್ಣಿನ ಒಲೆ, ಫ್ರೀಜ್, ರೆಸ್ಟೋರೆಂಟ್ ಮತ್ತು ಪಬ್ ಕಂಡುಬಂದಿವೆ. ಮೀನಿನ ಅವಶೇಷಗಳನ್ನು ಒಳಗೊಂಡಿರುವ ಶಂಕುವಿನಾಕಾರದ ಬಟ್ಟಲುಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

Written by - Bhavishya Shetty | Last Updated : Feb 16, 2023, 05:47 PM IST
    • 5 ಸಾವಿರ ವರ್ಷಗಳಷ್ಟು ಹಳೆಯದಾದ ಪಬ್ ಮತ್ತು ರೆಸ್ಟೋರೆಂಟ್‌ನ ಅವಶೇಷಗಳು ಕಂಡುಬಂದಿವೆ.
    • ದಕ್ಷಿಣ ಇರಾಕ್‌ನಲ್ಲಿ ಉತ್ಖನನದ ಸಮಯದಲ್ಲಿ ಸಂಶೋಧಕರು ಕೆಲವು ವಿಷಯಗಳನ್ನು ಕಂಡುಕೊಂಡಿದ್ದಾರೆ
    • ಕ್ರಿಸ್ತಪೂರ್ವ 2700 ರಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದು ಈ ಆವಿಷ್ಕಾರದ ನಂತರ ತಿಳಿಯುತ್ತದೆ
Trending News: 5 ಸಾವಿರ ವರ್ಷಗಳ ಹಿಂದೆಯೂ ಜನರು ಪಾರ್ಟಿ ಮಾಡುತ್ತಿದ್ದರು, ಬಿಯರ್ ಕುಡಿಯುತ್ತಿದ್ದರು.. ಇಲ್ಲಿ ಸಿಕ್ಕಿದೆ ಖಚಿತ 'ಸಾಕ್ಷಿ'  title=
Archaeology

Trending News: 5000 ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ ಜನರ ಜೀವನ ಹೇಗಿತ್ತು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಂದು ಈ ಯುಗದಲ್ಲಿ ಅನೇಕ ಮನರಂಜನೆಯ ವಿಧಾನಗಳಿವೆ, ಆದರೆ ಅಂದಿನ ಕಾಲದಲ್ಲಿ ಜನರು ಮೋಜು ಮಸ್ತಿಗಾಗಿ ಏನು ಮಾಡುತ್ತಿದ್ದರು? ಈ ಬಗ್ಗೆ  ನೀವು ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಇದಕ್ಕಾಗಿ ಉತ್ತರವನ್ನು ತಂದಿದ್ದೇವೆ.  ಇರಾಕ್‌ನಲ್ಲಿನ ಉತ್ಖನನದ ಸಮಯದಲ್ಲಿ, 5 ಸಾವಿರ ವರ್ಷಗಳಷ್ಟು ಹಳೆಯದಾದ ಪಬ್ ಮತ್ತು ರೆಸ್ಟೋರೆಂಟ್‌ನ ಅವಶೇಷಗಳು ಕಂಡುಬಂದಿವೆ.

ಇದನ್ನೂ ಓದಿ: Viral Video: ಎಲ್ಲಿತ್ತೋ ಏನೋ ಈ ಮೂರು ದೈತ್ಯ ಹಾವುಗಳು: ಮನೆ ಮಂದಿ ನೋಡುತ್ತಿದ್ದಂತೆ ಬಿದ್ದೇಬಿಡ್ತು! ಎದೆ ಝಲ್ ಎನ್ನುವ ದೃಶ್ಯ ನೋಡಿ

ವರದಿಯಲ್ಲಿ ಹೇಳಿದ್ದೇನು?

ವರದಿಯ ಪ್ರಕಾರ ದಕ್ಷಿಣ ಇರಾಕ್‌ನಲ್ಲಿ ಉತ್ಖನನದ ಸಮಯದಲ್ಲಿ ಸಂಶೋಧಕರು ಕೆಲವು ವಿಷಯಗಳನ್ನು ಕಂಡುಕೊಂಡಿದ್ದಾರೆ. ಕ್ರಿಸ್ತಪೂರ್ವ 2700 ರಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಜನರ ಜೀವನ ಹೇಗಿತ್ತು ಎಂಬುದು ಈ ಆವಿಷ್ಕಾರದ ನಂತರ ತಿಳಿಯುತ್ತದೆ. ಉತ್ಖನನದಲ್ಲಿ ಮಣ್ಣಿನ ಒಲೆ, ಫ್ರೀಜ್, ರೆಸ್ಟೋರೆಂಟ್ ಮತ್ತು ಪಬ್ ಕಂಡುಬಂದಿವೆ. ಮೀನಿನ ಅವಶೇಷಗಳನ್ನು ಒಳಗೊಂಡಿರುವ ಶಂಕುವಿನಾಕಾರದ ಬಟ್ಟಲುಗಳನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ಮತ್ತು ಪಿಸಾ ವಿಶ್ವವಿದ್ಯಾನಿಲಯದ ಜಂಟಿ ತಂಡವು ಪ್ರಾಚೀನ ಶೈತ್ಯೀಕರಣ ವ್ಯವಸ್ಥೆ, ದೊಡ್ಡ ಓವನ್, ಡಿನ್ನರ್‌ಗಳ ಬೆಂಚುಗಳು ಮತ್ತು ಸುಮಾರು 150 ಸರ್ವಿಂಗ್ ಬೌಲ್‌ಗಳ ಅವಶೇಷಗಳನ್ನು ಕಂಡುಹಿಡಿದಿದೆ.

ವರದಿಗಳ ಪ್ರಕಾರ, ಉತ್ಖನನದಲ್ಲಿ ಬಿಯರ್‌ನ ಪುರಾವೆಗಳು ಸಹ ಕಂಡುಬಂದಿವೆ. ನಮ್ಮ ಪೂರ್ವಜರು 5000 ವರ್ಷಗಳ ಹಿಂದೆ ಬಿಯರ್ ಕುಡಿಯುತ್ತಿದ್ದರು ಎಂದು ಸಂಶೋಧಕರು ಹೇಳುತ್ತಾರೆ. ಯೋಜನಾ ನಿರ್ದೇಶಕ ಹಾಲಿ ಪಿಟ್‌ಮನ್ ಪ್ರಕಾರ, ನಾವು ಫ್ರಿಜ್‌ಗಳು, ನೂರಾರು ಪಾತ್ರೆಗಳು, ಜನರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಪತ್ತೆ ಮಾಡಿದ್ದೇವೆ. ಈ ಸ್ಥಳಕ್ಕೆ ಬಂದ ನಂತರ ಜನರು ವಿಶ್ರಾಂತಿ ಪಡೆಯುತ್ತಿದ್ದರು ಎಂದನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಗ್ರರ ಅಟ್ಟಹಾಸಕ್ಕೆ ಕಣ್ಣೀರಿಟ್ಟ ಭಾರತೀಯರ ಕರಾಳ ದಿನ...!

ಲಗಾಶ್ ಎಂದು ಕರೆಯಲ್ಪಡುವ 1000 ಎಕರೆಗಳಷ್ಟು ವಿಸ್ತಾರವಾದ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ. ಇದು ಆರಂಭಿಕ ರಾಜವಂಶದ ಅವಧಿಯಲ್ಲಿ ಕೈಗಾರಿಕಾ ಕೇಂದ್ರವಾಗಿತ್ತು. ಸಂಶೋಧನೆಯ ಪ್ರಕಾರ, ಲಗಾಶ್ ದಕ್ಷಿಣ ಮೆಸೊಪಟ್ಯಾಮಿಯಾದ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇದು ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಕೇಂದ್ರವೂ ಆಗಿತ್ತು. ಇಲ್ಲಿ ವಾಸಿಸುವ ಜನರು ಜಾನುವಾರುಗಳನ್ನು ಸಾಕುತ್ತಿದ್ದರು ಜೊತೆಗೆ ಮೀನುಗಾರಿಕೆ ಮತ್ತು ಕೃಷಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News