ಉಗ್ರರ ಅಟ್ಟಹಾಸಕ್ಕೆ ಕಣ್ಣೀರಿಟ್ಟ ಭಾರತೀಯರ ಕರಾಳ ದಿನ...!

ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ನೆಮ್ಮದಿಯಾಗಿ ಇದ್ದ ಭಾರತೀಯರಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದ ದಿನ. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ..ಭಾರತದ ಪ್ರತಿಯೊಬ್ಬ ಮನೆಮನೆಯ ಜನರು ಕಣ್ಣೀರಿಟ್ಟ ದಿನ.. 

Written by - Zee Kannada News Desk | Last Updated : Feb 14, 2023, 01:26 PM IST
  • ಜಮ್ಮು ಮತ್ತು ಕಾಶ್ಮೀರದಲ್ಲಿ ನಲವತ್ತು ಸಿಆರ್‌ಪಿಎಫ್‌ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್‌ ದಾಳಿ ನಡೆಸಲಾಗಿತ್ತು.
  • ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು.
  • ಇನ್ನೂ ಭಾರತೀಯರು ಸೇಡು ತೀರಿಸಿಕೊಳ್ಳುವ ಭರದಲ್ಲಿದ್ದರು. ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಕಾತುರದಿಂದ ಕಾಯುತ್ತಿದ್ದರು.
ಉಗ್ರರ ಅಟ್ಟಹಾಸಕ್ಕೆ ಕಣ್ಣೀರಿಟ್ಟ ಭಾರತೀಯರ ಕರಾಳ ದಿನ...!  title=

ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ನೆಮ್ಮದಿಯಾಗಿ ಇದ್ದ ಭಾರತೀಯರಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿದ ದಿನ. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ..ಭಾರತದ ಪ್ರತಿಯೊಬ್ಬ ಮನೆಮನೆಯ ಜನರು ಕಣ್ಣೀರಿಟ್ಟ ದಿನ.. ಇಡೀ ವಿಶ್ವವೇ ಪ್ರೇಮಿಗಳ ದಿನದ ಆಚರಣೆಯಲ್ಲಿದ್ದರೆ. ಭಾರತೀಯರು ಮಾತ್ರ ಶೋಕಸಾಗರದಲ್ಲಿ ಮುಳುಗುವಂತಾಯಿತು. ಹೌದು ಕಳೆದ ಮೂರು ವರ್ಷದ ಹಿಂದೆ ಪಾಪಿ ಪಾಕಿಸ್ತಾನ ಹಾಗೂ ಕುತಂತ್ರಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳ ಅಟ್ಟಹಾಸದಿಂದ 40  ಸಿಆರ್‌ಪಿಎಫ್ ಯೋಧರು ಪ್ರಾಣ ಕಳೆದುಕೊಂಡರು.  ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಸ್ತಬ್ಧವಾಗಿತ್ತು. 

 ಸರಿಯಾಗಿ 3 ವರ್ಷದ ಹಿಂದೆ, ಫೆಬ್ರವರಿ 14ರ ಅಪರಾಹ್ನ 3 ಗಂಟೆ ಸಮಯ. ಜಮ್ಮು ಮತ್ತು ಕಾಶ್ಮೀರದಲ್ಲಿ ನಲವತ್ತು ಸಿಆರ್‌ಪಿಎಫ್‌ ಯೋಧರು ಪ್ರಯಾಣಿಸುತ್ತಿದ್ದ ಎರಡು ಬಸ್‌ಗಳನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್‌ ದಾಳಿ ನಡೆಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಲಿನಲ್ಲಿ ಸಾಗುತ್ತಿದ್ದವು. ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನವೊಂದಕ್ಕೆ ಬಂದು ಅಪ್ಪಳಿಸಿತು. ದಾಳಿಯ ಸ್ವಲ್ಪ ಸಮಯದ ನಂತರ ಜೈಶ್ ಇ ಮೊಹಮ್ಮದ್ ಸಂಘಟನೆ ವಿಡಿಯೋವನ್ನು ಬಿಡುಗಡೆ ಮಾಡಿತು, ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್ ದಾರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗುಂಡಿಬಾಗ್, ಕಾಕಪೋರಾದಲ್ಲಿ ವಾಸಿಸುತ್ತಿದ್ದ ಸ್ಥಳೀಯ ಕಾಶ್ಮೀರಿ ಜಿಹಾದಿ ಎಂದು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ-Pulwama Attack: ಪುಲ್ವಾಮ ಕರಾಳ ದಿನಕ್ಕೆ 4 ವರ್ಷ: ಫೆ.14 ರ ಆ ದಿನ ನಡೆದಿದ್ದಾದರು ಏನು? ವೀರರ ಮರಣಕ್ಕೆ ಭಾರತ ಸೇಡು ತೀರಿಸಿಕೊಂಡಿದ್ದು ಹೇಗೆ?

ಇನ್ನು ಉಗ್ರರ ಅಮಾನುಷ ಕೃತ್ಯಕ್ಕೆ ಇಡೀ ದೇಶದಲ್ಲಿ ಆಕ್ರೋಶದ ಅಲೆ ಎದ್ದಿತು. ಭೀಕರ ಘಟನೆ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಪುಲ್ವಾಮಾ ದಾಳಿ ನಡೆಯುತ್ತಲೇ ಪಾಕ್​ನ ಉನ್ನತ ರಾಯಭಾರಿಯನ್ನು ಕರೆಸಿಕೊಂಡ ಭಾರತ ಪ್ರಬಲ ಪ್ರತಿಭಟನೆಯನ್ನು ದಾಖಲಿಸಿತು. ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ ನಡೆಸುವ ಪೂರ್ಣ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಭಾರತೀಯ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್​ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿ ಹತರಾದರು. ಏಳು ಜನರನ್ನು ಬಂಧಿಸಲಾಯಿತು. ಕಾಶ್ಮೀರ ಕಬಳಿಸುವ ಸಂಚಿಗಾಗಿ ಭಯೋತ್ಪಾದಕ ಕೃತ್ಯಗಳನ್ನು ಎಸಗಿರುವುದು, ಪುಲ್ವಾಮಾದ ಘೋರ ದಾಳಿ ಅದರ ಭಾಗವಾಗಿದೆ. 

ಇನ್ನೂ ಭಾರತೀಯರು ಸೇಡು ತೀರಿಸಿಕೊಳ್ಳುವ ಭರದಲ್ಲಿದ್ದರು. ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಕಾತುರದಿಂದ ಕಾಯುತ್ತಿದ್ದರು. ಪಾಕಿಸ್ತಾನದ ಖೈಬರ್​ ಪಖ್ತುನ್​ಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್​ ಉಗ್ರಗಾಮಿಗಳ ತಾಣಗಳ ಮೇಲೆ ಪುಲ್ವಾಮಾ ದಾಳಿಯ 12 ದಿನಗಳ ನಂತರ, ಅಂದ್ರೆ ಫೆಬ್ರವರಿ 26 ರಂದು ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಪರಿಣಾಮ ಅಪಾರ ಸಂಖ್ಯೆಯಲ್ಲಿ ಜೈಶ್ ಜೈಷ್-ಎ-ಮೊಹಮ್ಮದ್ ಸಂಘಟನೆಯ 300ಕ್ಕೂ ಹೆಚ್ಚು ಉಗ್ರಗಾಮಿಗಳು ಸತ್ತಿದ್ದಾರೆ ಎಂದು ಭಾರತ ಹೇಳಿತ್ತು. ಆದರೆ, ಪಾಕಿಸ್ತಾನ ಮಾತ್ರ ಬಾಲಾಕೋಟ್ ದಾಳಿಯಲ್ಲಿ ಯಾರೊಬ್ಬರು ಮೃತಪಟ್ಟಿಲ್ಲ ಎಂದು ವಾದಿಸಿತ್ತು.

ಇದನ್ನೂ ಓದಿ-Viral Video: ಏಕಾಂಗಿ ಎಮ್ಮೆ ಮೇಲೆ ದಾಳಿ ಮಾಡಿದ ಸಿಂಹಗಳ ದಂಡು: ಆದ್ರೆ ಮುಂದಾಗಿದ್ದು ಮಾತ್ರ ಬೆಚ್ಚಿಬೀಳುವ ಘಟನೆ!
 

Trending News