ಬ್ರಿಟನ್ : ಮದುವೆಯ ಉಂಗುರ ಅಥವಾ ನಿಶ್ಚಿತಾರ್ಥದ ಉಂಗುರ (Engagement ring) ಅಂದರೆ ಅದು ಬರೀಯ ಒಡವೆಯಲ್ಲ. ಅದರೊಂದಿಗೆ ಬಹಳಷ್ಟು ಭಾವನಗೆಳು ಬೆಸೆದುಕೊಂಡಿರುತ್ತವೆ. ಈ ಉಂಗುರ ಪ್ರತಿಯೊಬ್ಬನ ಜೀನವದಲ್ಲೂ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಇಂಥದ್ದರಲ್ಲಿ  ಈ ಉಂಗುರ ಕಳೆದುಹೋದರೆ, ಮನಸ್ಸಿಗೆ ಕಿರಿಕಿರಿ ಉಂಟಾಗುವುದು ಸಹಜ. ಯುಕೆಯ ನಾರ್ತ್ ಶೀಲ್ಡ್ಸ್ ನಿವಾಸಿ ಜೇಮ್ಸ್ ರಾಸ್ ಎಂಬ ವ್ಯಕ್ತಿಯೂ ಇಂಥಹ ಅನುಭವವನ್ನು ಅನುಭವಿಸಿದ್ದರು. ತನ್ನ ಮದುವೆಯ ಉಂಗುರವು ಕಳೆದು ಹೋದ ಕಾರಣ, ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ.. 


COMMERCIAL BREAK
SCROLL TO CONTINUE READING

ಜೇಮ್ಸ್ ರಾಸ್ ಉತ್ತರ ಬ್ರಿಟನ್‌ನ (Britain) ಸ್ಯೂಜ್ ರಿಸೈಕಲಿಂಗ್ ಯುನಿಟ್ ನಲ್ಲಿ ಕೆಲಸ ಮಾಡುತ್ತಾರೆ. ಒಂದು ದಿನ ಸೈಟಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಉಂಗುರ ಜಾರಿ ಕೆಳಗೆ ಬಿದ್ದಿದೆ. ಉಂಗುರ ಕಳೆದುಕೊಂಡ ಜೇಮ್ಸ್ ಅವರ ಒದ್ದಾಟ ಅಷ್ಟಿಷ್ಟಿರಲಿಲ್ಲ. ಅದಲ್ಲದೆ ಪ್ರೇಮಿಗಳ ದಿನದಂದೇ (Valentines day) ಜೇಮ್ಸ್ ಮದುವೆಯ ಉಂಗುರ ಕಳೆದುಹೋಗಿರುವುದು ಅವರನ್ನು ಇನ್ನಷ್ಟು ಚಿಂತೆಗೆ ದೂಡಿತ್ತು. 


ಇದನ್ನೂ ಓದಿ : Saudi Arabia : ಮಹಿಳೆಯರಿಗೆ ಸಿಗಲಿದೆ ಮತ್ತೊಂದು ಗುಡ್ ನ್ಯೂಸ್


ತನ್ನ ಉಂಗುರ ಬೆರಳಿನಿಂದ ಜಾರಿ ಬಿದ್ದಿರುವ ಬಗ್ಗೆ ಸಹೋದ್ಯೋಗಿಗಳಿಗೆ ಜೇಮ್ಸ್ ತಿಳಿಸಿದ್ದಾರೆ. ಜೇಮ್ಸ್ ಪಡುತ್ತಿರುವ ಪಾಡನ್ನು ಅರ್ಥ ಮಾಡಿಕೊಂಡ ಸಹೊದ್ಯೋಗಿಗಳು ಕೂಡಾ ಉಂಗುರ (Ring) ಹುಡುಕುವ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಎಲ್ಲರೂ ಸೇರಿ ಸುಮಾರು 10-ಫಿಟ್ ಕಸದ ರಾಶಿಯಲ್ಲಿ (Garbage) ಉಂಗುರಕ್ಕಾಗಿ ಹುಡುಕಾಟ ಆರಂಭಿಸುತ್ತಾರೆ. ಕೇವಲ 20 ನಿಮಿಷಗಳಲ್ಲಿ ಜೇಮ್ಸ್ ಉಂಗುರ ಸಿಗುತ್ತದೆ.  


ಡೈಲಿಮೇಲ್ ಪ್ರಕಾರ, ಜೇಮ್ಸ್ ರಾಸ್ ಅವರಿಗೆ ತನ್ನ ಉಂಗುರದ ಬೆಲೆಯ ಬಗ್ಗೆ ಚಿಂತೆ ಇರಲಿಲ್ಲ. ಆದರೆ ಆ ಉಂಗುರದಲ್ಲಿ ಅವರು, ತನ್ನ ಹೆಂಡತಿಯ (wife)ಹೆಸರು ಮತ್ತು ಮದುವೆಯ (Marraige) ದಿನಾಂಕವನ್ನು ಬರೆದಿದ್ದರು. ಇದು ಜೇಮ್ಸ್ ಚಿಂತೆಗೆ ಕಾರಣವಾಗಿತ್ತು.


ಇದನ್ನೂ ಓದಿ : 231 ಜನರ ಕಣ್ಣೆದುರಲ್ಲಿತ್ತು ಘನಘೋರ ಮೃತ್ಯು..! ಅವರಲ್ಲೊಬ್ಬ ಸಾವನ್ನೇ ಸೋಲಿಸಿಬಿಟ್ಟ ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.