ಅಂಬಿ ಇಲ್ಲದ Valentine's Day ಬಗ್ಗೆ ಸುಮಲತಾ ಬರೆದ ನಾಲ್ಕು ಸಾಲು!

ಪ್ರೇಮಿಗಳ ದಿನದಂದು ವಿಶೇಷವಾಗಿ ಶುಭಾಶಯ ತಿಳಿಸಿದ ಸುಮಲತಾ

Last Updated : Feb 14, 2019, 10:57 AM IST
ಅಂಬಿ ಇಲ್ಲದ Valentine's Day ಬಗ್ಗೆ ಸುಮಲತಾ ಬರೆದ ನಾಲ್ಕು ಸಾಲು! title=
Pic Courtesy: Twitter@sumalathaA

ಬೆಂಗಳೂರು: ಇಂದು ವಿಶ್ವದಾದ್ಯಂತ Valentine's Day(ಪ್ರೇಮಿಗಳ ದಿನ) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಖ್ಯಾತ ನಟಿ ಸುಮಲತಾ ಅಂಬರೀಶ್ ನಾಲ್ಕು ಅರ್ಥಪೂರ್ಣ ಸಾಲುಗಳನ್ನು ಬರೆದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಪ್ರೇಮಿಗಳ ದಿನದಂದು ವಿಶೇಷವಾಗಿ ಶುಭಾಶಯ ತಿಳಿಸಿರುವ ಸುಮಲತಾ, ಪ್ರೀತಿಯ ನಿಜವಾದ ಅರ್ಥವನ್ನು ತಮ್ಮ ನಾಲ್ಕು ಸಾಲುಗಳಲ್ಲಿ ತಿಳಿಸಿದ್ದಾರೆ.

''ಪ್ರೀತಿ ಎಂದಿಗೂ ಕೊನೆ ಆಗುವುದಿಲ್ಲ. ಜೀವನ ಪರ್ಯಂತ ಉಳಿಯುತ್ತದೆ. ನನ್ನ ಪ್ರೀತಿ(ಅಂಬರೀಶ್) ನನ್ನ ಮತ್ತು ಅಭಿಯನ್ನು ಸದಾ ಕಾಪಾಡುತ್ತಾರೆ. ನಮ್ಮ ಮಗನನ್ನು ಆಶೀರ್ವಾದ ಮಾಡಿ. ಅಭಿಷೇಕ್ ನಟನೆಯ 'ಅಮರ್' ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಪ್ರೀತಿ ಏನು ಎಂದು ತಿಳಿದವರಿಗೆಲ್ಲ Happy valentine day.'' ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ.

ಅಂಬರೀಶ್ ಮಾತು ಒರಟಾದರೂ, ಅವರ ಮನಸ್ಸು ಹೂವಿನಂತೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸ್ನೇಹ-ಪ್ರೀತಿಗೆ ಮತ್ತೊಂದು ಹೆಸರೇ ಅಂಬಿ. ಪ್ರತಿ ವರ್ಷ 'ಅಂಬಿ-ಸುಮಾ' ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದರು. ಆದರೆ ಅಂಬಿ ಇಂದು ನಮ್ಮೊಂದಿಗಿಲ್ಲ. ಆದರೂ 'ಅಂಬಿ'ಯ ಮೇಲೆ ಅವರ ಪ್ರೀತಿ ಎಷ್ಟಿತ್ತು ಎಂಬುದಕ್ಕೆ ಈ ನಾಲ್ಕು ಸಾಲುಗಳೇ ಸಾಕ್ಷಿ.

Trending News