ಒಂದಲ್ಲ ಎರಡಲ್ಲ, ಒಂದೇ ಸಲ ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!
ಹಲಿಮಾ ಸಿಸ್ಸೆಗೆ ಅಲ್ಟ್ರಾಸೌಂಡ್ಸ್ ಮಾಡಿದಾಗ ಆಕೆ 7 ಮಕ್ಕಳಿಗೆ ಜನುಮ ನೀಡಲಿದ್ದಾಳೆ ಎಂದು ಅಂದಾಜು ಮಾಡಲಾಗಿತ್ತು. ಒಂದೇ ಸಲ 9 ಮಕ್ಕಳಿಗೆ ಜನುಮ ನೀಡಿರುವುದು ವೈದ್ಯ ಲೋಕದ ಅಚ್ಚರಿ ಎಂದೇ ಹೇಳಲಾಗಿದೆ.
ನವದೆಹಲಿ : ನಿಮಗೆ ಅಚ್ಚರಿಯಾಗಬಹುದು. ಮಾಲಿ ಎಂಬ ಆಫ್ರಿಕದ ಒಂದು ದೇಶದ ಮಹಿಳೆ ಬರೊಬ್ಬರಿ 9 ಮಕ್ಕಳಿಗೆ (9 Kids) ಒಂದೇ ಸಲ ಜನ್ಮ ನೀಡಿದ್ದಾಳೆ. ಈ ಮಾಹಿತಿಯನ್ನು ಸ್ವತಃ ಮಾಲಿ ಸರಕಾರವೇ (Mali government) ದೃಢ ಪಡಿಸಿದೆ. ತಾಯಿ ಮತ್ತು ನವಜಾತ 9 ಮಕ್ಕಳೂ ಕ್ಷೇಮವಾಗಿದ್ದಾರೆ ಎಂದು ಮಾಲಿ ಸರ್ಕಾರ ಹೇಳಿ ಕೊಂಡಿದೆ. 9 ಮಕ್ಕಳನ್ನು ಒಂದೇ ಸಲ ಹೆತ್ತ ಈ ಮಹಾತಾಯಿಯ ಹೆಸರು ಹಲಿಮಾ ಸಿಸ್ಸೆ.
7 ಮಕ್ಕಳಿಗೆ ಜನುಮ ನೀಡಲಿದ್ದಾಳೆ ಎಂದು ಊಹಿಸಲಾಗಿತ್ತು.!
ಹಲಿಮಾ ಸಿಸ್ಸೆಗೆ (Halima Cisse) ಅಲ್ಟ್ರಾಸೌಂಡ್ಸ್ (Ultra Sound) ಮಾಡಿದಾಗ ಆಕೆ 7 ಮಕ್ಕಳಿಗೆ ಜನುಮ ನೀಡಲಿದ್ದಾಳೆ ಎಂದು ಅಂದಾಜು ಮಾಡಲಾಗಿತ್ತು. ಒಂದೇ ಸಲ 9 ಮಕ್ಕಳಿಗೆ ಜನುಮ ನೀಡಿರುವುದು ವೈದ್ಯ ಲೋಕದ ಅಚ್ಚರಿ ಎಂದೇ ಹೇಳಲಾಗಿದೆ. ಹಲಿಮಾ ಸಿಸ್ಸೆ ಐದು ಹೆಣ್ಣು ಮಕ್ಕಳು ಮತ್ತು ನಾಲ್ಕು ಗಂಡು ಮಕ್ಕಳಿಗೆ ಜನುಮ ನೀಡಿದ್ದಾಳೆ ತಾಯಿ ಮತ್ತು ನವಜಾತ ಒಂಬತ್ತೂ ಮಕ್ಕಳು (Kids) ಕ್ಷೇಮವಾಗಿದ್ದಾರೆ ಎಂದು ಮಾಲಿ ದೇಶದ ಆರೋಗ್ಯ ಸಚಿವ ಫಂಟಾ ಸಿಬಿ (Fanta Siby) ಹೇಳಿದ್ದಾರೆ.
ಇದನ್ನೂ ಓದಿ : Google CEO On Covid Situation In India: ಭಾರತದಲ್ಲಿ ಕೊರೊನಾದ ಅತ್ಯಂತ ಕೆಟ್ಟ ಹಂತ ಬಾಕಿ ಇದೆ ಎಂದ ಸುಂದರ್ ಪಿಚೈ
ಮೊರಕ್ಕೋ ದೇಶದ ವೈದ್ಯರಿಗೆ ಥ್ಯಾಂಕ್ಸ್ ಹೇಳಿದ ಮಾಲಿ ಸರ್ಕಾರ:
ಮೊರಕ್ಕೋ ದೇಶದ ಒಂದು ಆಸ್ಪತ್ರೆಯಲ್ಲಿ ಈ ಅಪರೂಪದ ಹೆರಿಗೆ ನಡೆದಿದೆ. ಕೆಲವೇ ದಿನಗಳಲ್ಲಿ ಹಲಿಮಾ ಮಾಲಿಗೆ ವಾಪಸ್ ಆಗಲಿದ್ದಾರೆ. ಈ ಹೆರಿಗೆ ಯಶಸ್ವಿಯಾಗಲು ಸಹಕರಿಸಿದ ಮೊರಕ್ಕೋ ದೇಶದ ವೈದ್ಯರು (Doctors) ಹಾಗೂ ವೈದ್ಯಕೀಯ ಸಿಬ್ಬಂದಿಗೆ ನಾವು ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಎಂದು ಮಾಲಿ ಸರ್ಕಾರ ತಿಳಿಸಿದೆ. ಇಂಥ ಒಂದು ಹೆರಿಗೆ (Delivery) ನಡೆದ ಯಾವುದೇ ಮಾಹಿತಿ ನಮ್ಮಲ್ಲಿ ಇಲ್ಲ ಎಂದು ಮೊರಾಕ್ಕೊ ದೇಶದ ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ : ಲ್ಯಾಂಡಿಂಗ್ ಗೆ 20 ನಿಮಿಷಗಳಿರುವಾಗ ಕಣ್ಮರೆಯಾದ ವಿಮಾನ..! ಇನ್ನೂ ಬಯಲಾಗದ ರಹಸ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.