Mass Shooting In Indiana Mall: ಅಮೆರಿಕದ ಇಂಡಿಯಾನಾ ಮಾಲ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಒಬ್ಬ ವ್ಯಕ್ತಿಯು ಇಂಡಿಯಾನಾ ಮಾಲ್‌ನಲ್ಲಿ ಇದ್ದಕ್ಕಿದ್ದಂತೆ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಇಂಡಿಯಾನಾ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ದಾಳಿಕೋರ ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೇ 2 ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕ ಕಾಲಮಾನ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಇಂಡಿಯಾನಾ ಮಾಲ್‌ನಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bomb threat: ಡಿಕೆ ಶಿವಕುಮಾರ್‌ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ.!


ಗ್ರೀನ್‌ವುಡ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಿಮ್ ಐಸನ್ ಪ್ರಕಾರ, ಇಂಡಿಯಾನಾ ಮಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ, ಇಂಡಿಯಾನಾ ಮಾಲ್‌ನಲ್ಲಿ ಗುಂಡಿನ ದಾಳಿ ನಡೆಯುತ್ತಿದೆ ಎಂದು ತುರ್ತು ಕರೆ ಕೇಂದ್ರಕ್ಕೆ ಮಾಹಿತಿ ನೀಡಲಾಯಿತು. ಗುಂಡಿನ ದಾಳಿ ಪ್ರಾರಂಭವಾದ ನಂತರ, ಆಯುಧದಿಂದ ಶಸ್ತ್ರಸಜ್ಜಿತ ನಾಗರಿಕನಿಂದ ದಾಳಿಕೋರನನ್ನು ಹೊಡೆದುರುಳಿಸಲಾಯಿತು ಮತ್ತು ನಂತರ ಗುಂಡಿನ ದಾಳಿಯನ್ನು ನಿಲ್ಲಿಸಲಾಯಿತು.


ಇಂಡಿಯಾನಾ ಮಾಲ್ ಘಟನೆಗೆ ಸಂತಾಪ ಸೂಚಿಸಿದ ಗ್ರೀನ್‌ವುಡ್ ಮೇಯರ್, "ಮಾಲ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಗ್ರೀನ್‌ವುಡ್ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಾನು ಕಮಾಂಡ್ ಪೋಸ್ಟ್‌ನೊಂದಿಗೆ ನೇರ ಸಂಪರ್ಕದಲ್ಲಿದ್ದೇನೆ. ಈಗ ಯಾವುದೇ ಬೆದರಿಕೆ ಇಲ್ಲ. ಸದ್ಯಕ್ಕೆ ಈ ಪ್ರದೇಶದಿಂದ ದೂರ ಉಳಿಯುವಂತೆ ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ" ಎಂದಿದ್ದಾರೆ. 


ಹೂಸ್ಟನ್‌ನಲ್ಲಿ 4 ಜನರು ಸಾವನ್ನಪ್ಪಿದ್ದಾರೆ:


ಅಮೆರಿಕದ ಹೂಸ್ಟನ್ ನಲ್ಲಿ ಶನಿವಾರ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಗಮನಿಸಬೇಕಾದ ಸಂಗತಿ. ಹ್ಯೂಸ್ಟನ್ ನ ಅಪಾರ್ಟ್ ಮೆಂಟ್ ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಶನಿವಾರ ತಡರಾತ್ರಿ ನಾಲ್ವರು ಗುಂಡು ಹಾರಿಸಿರುವುದು ಕಂಡುಬಂದಿದೆ. ಮೂವರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕನೆಯವರು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.


ಇದನ್ನೂ ಓದಿ: Kiccha Sudeep: ʻಕನ್ನಡ್ ಅಲ್ಲ ಕನ್ನಡʼ ಎಂದ ಸುದೀಪ್, ವೈರಲ್ ಆಯ್ತು ಕಿಚ್ಚನ ಮಾತು


ಸತ್ತವರಲ್ಲಿ ಇಬ್ಬರ ವಯಸ್ಸು 16 ವರ್ಷ, ಒಬ್ಬರಿಗೆ 19 ಮತ್ತು ಒಬ್ಬರ ವಯಸ್ಸು 25 ವರ್ಷ. ಸದ್ಯ ಘಟನೆಯ ಹಿಂದಿನ ಉದ್ದೇಶ ಅಥವಾ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.