ಒಟ್ಟಾವಾ: ಕೆನಡಾದಲ್ಲಿ ಶುಕ್ರವಾರ ಒಟ್ಟು 168 ಮಂಕಿ ಫಾಕ್ಸ್ ಪ್ರಕರಣಗಳು ದೃಢಪಟ್ಟಿವೆ ಎಂದು ಮುಖ್ಯ ಸಾರ್ವಜನಿಕ ಆರೋಗ್ಯ ಅಧಿಕಾರಿ ಥೆರೆಸಾ ಟಾಮ್ ತಿಳಿಸಿದ್ದಾರೆ. ಜಾಗತಿಕ ಭೀತಿಯ ನಡುವೆ ಹೆಚ್ಚಿನ ಸಂಖ್ಯೆಯ ಮಂಕಿ ಫಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದು, ಹೊಸ ತಲೆನೋವು ತಂದಿಟ್ಟಿವೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾತನಾಡಿರುವ ಥೆರೆಸಾ ಟಾಮ್, ‘ಬ್ರಿಟಿಷ್ ಕೊಲಂಬಿಯಾದಿಂದ 2, ಆಲ್ಬರ್ಟಾದಿಂದ 4, ಒಂಟಾರಿಯೊದಿಂದ 21 ಮತ್ತು ಕ್ವಿಬೆಕ್‌ನಿಂದ 141 ಪ್ರಕರಣಗಳು ಸೇರಿ ಒಟ್ಟು 168 ಪ್ರಕರಣಗಳು ದೇಶದಲ್ಲಿ ದೃಢಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.  


ಇದನ್ನೂ ಓದಿ: 46 ವರ್ಷಗಳಿಂದ ತೇಲುತ್ತಿದ್ದ ಪ್ರಸಿದ್ಧ ರೆಸ್ಟೋರೆಂಟ್‌ ಅಂತ್ಯ: ಸೆಲೆಬ್ರಿಟಿಗಳ ಫೇವರೇಟ್‌ ಸ್ಪಾಟ್‌ ಕಥೆ ಇನ್ನೇನು?


‘ಉದ್ದೇಶಿತ ಲಸಿಕೆ ಅಭಿಯಾನಗಳ ಮೂಲಕ ವೈರಸ್ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಈ ಪ್ರಯತ್ನವನ್ನು ಬೆಂಬಲಿಸುವ ಪ್ರಾಂತ್ಯಗಳು ಸೇರಿ ಹಲವು  ಪ್ರದೇಶಗಳಲ್ಲಿ ವಿಕಸನಗೊಳ್ಳುತ್ತಿರುವ ಮಂಕಿಪಾಕ್ಸ್ ಪರಿಸ್ಥಿತಿಯನ್ನು ನಾವು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ. ವೈರಸ್ ಹೇಗೆ ಹರಡುತ್ತದೆ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.


ಕೆನಡಾದ ಸಾರ್ವಜನಿಕ ಆರೋಗ್ಯ ಏಜೆನ್ಸಿಗೆ ಲಭ್ಯವಿರುವ ಮಾಹಿತಿ ಮತ್ತು ವರದಿಗಳ ಪ್ರಕಾರ ಪತ್ತೆಯಾಗಿರುವ ಎಲ್ಲಾ ಪ್ರಕರಣಗಳು ಪುರುಷ ಮತ್ತು 20 ರಿಂದ 69 ವರ್ಷ ವಯಸ್ಸಿನವರಲ್ಲಿ ಹೆಚ್ಚು ಕಂಡುಬಂದಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಟಿಕ್ ಟಾಕ್ ಗೆ ಸೆಡ್ಡು ಹೊಡೆದ ಯೂಟ್ಯೂಬ್, ಶಾರ್ಟ್ಸ್ ಗಳಿಂದ ಗಳಿಸಿದ ಆದಾಯ ಎಷ್ಟು ಗೊತ್ತಾ?


‘ಆದಾಗ್ಯೂ, ಮಂಕಿಪಾಕ್ಸ್ ವೈರಸ್‌ಗೆ ಒಡ್ಡಿಕೊಳ್ಳುವ ಅಪಾಯವು ಯಾವುದೇ ಗುಂಪಿಗೆ ಪ್ರತ್ಯೇಕವಾಗಿಲ್ಲ. ಪುರುಷ ಅಥವಾ ಮಹಿಳೆ ಯಾರೇ ಆಗಲಿ ಅವರು ಬಳಸಿದ ಟವೆಲ್ ಅಥವಾ ಬೆಡ್‍ ಹಾಗೂ ವೈಯಕ್ತಿಕ ವಸ್ತುಗಳ ಜೊತೆಗೆ ನಿಕಟ ಸಂಪರ್ಕಕ್ಕೆ ಬಂದರೆ ಸೋಂಕಿಗೆ ಒಳಗಾಗಬಹುದು. ವೈರಸ್ ಪತ್ತೆಯಾಗಿರುವ ಯಾರೊಂದಿಗಾದರೂ ಬೇರೊಬ್ಬ ವ್ಯಕ್ತಿ ಸಂಪರ್ಕಕ್ಕೆ ಬಂದರೆ ವೈರಸ್ ಹರಡಬಹುದು’ ಎಂದು ಅವರು ಹೇಳಿದ್ದಾರೆ.


ಮಂಕಿಪಾಕ್ಸ್ ಒಂದು ಸಿಲ್ವಾಟಿಕ್ ಝೂನೋಸಿಸ್ ಆಗಿದ್ದು, ಅದು ಮಾನವರಲ್ಲಿ ಸೋಂಕನ್ನು ಉಂಟುಮಾಡಬಹುದು ಮತ್ತು ಈ ರೋಗವು ಸಾಮಾನ್ಯವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಅರಣ್ಯ ಭಾಗಗಳಲ್ಲಿ ಕಂಡುಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಇದು ಆರ್ಥೋಪಾಕ್ಸ್‌ವೈರಸ್ ಕುಟುಂಬಕ್ಕೆ ಸೇರಿದ ಮಂಕಿಪಾಕ್ಸ್ ವೈರಸ್‌ನಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.