ಹಾಂಗ್ ಕಾಂಗ್‌ನ ಐಕಾನಿಕ್ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಹಲವು ವರ್ಷಗಳಿಂದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು 1976 ರಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ಕ್ಯಾಂಟೋನೀಸ್ ಆಹಾರಕ್ಕೆ ಬೆಸ್ಟ್ ಪ್ಲೇಸ್ ಎಂದು ಪರಿಗಣಿಸಲಾಗಿದೆ. ಇದೀಗ ಫ್ಲೋಟಿಂಗ್ ರೆಸ್ಟೋರೆಂಟ್ ಅಂತ್ಯದೆಡೆಗೆ ಸಾಗಿದೆ.
ಈ ತೇಲುವ ರೆಸ್ಟೋರೆಂಟ್ ಹಲವು ವರ್ಷಗಳಿಂದ ಹಾಂಗ್ ಕಾಂಗ್‌ನಲ್ಲಿ ಐತಿಹಾಸಿಕ ಮತ್ತು ವಿಶಿಷ್ಟ ಸಂಸ್ಥೆಯಾಗಿ ಕೆಲಸ ಮಾಡಿದೆ. ಈ ರೆಸ್ಟೋರೆಂಟ್‌ಗೆ ಕ್ವೀನ್ ಎಲಿಜಬೆತ್ ಮತ್ತು ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್‌ನಂತಹ ಪ್ರಸಿದ್ಧ ವ್ಯಕ್ತಿಗಳನ್ನು ಆಗಮಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಆದರೆ ಜಗತ್ತಿಗೆ ಕೊರೊನಾ ವಕ್ಕರಿಸಿದ ಬಳಿಕ ಈ ರೆಸ್ಟೋರೆಂಟ್‌ನ್ನು ಮುಚ್ಚಲಾಗಿತ್ತು. ಅಂದಿನಿಂದ ಇದು ತೆರೆದಿಲ್ಲ.
ಇದನ್ನೂ ಓದಿ: ಡಯಾಬಿಟೀಸ್ ರೋಗಿಗಳು ಈ ಸೊಪ್ಪು ತಿಂದರೆ ನಿಯಂತ್ರಣದಲ್ಲಿರುತ್ತದೆ ಬ್ಲಡ್ ಶುಗರ್
ಈ ಹಳೆಯ ರೆಸ್ಟೊರೆಂಟ್ ಅನ್ನು ಅಭಿವೃದ್ಧಿಪಡಿಸಲು ಹಲವು ವರ್ಷಗಳಿಂದ ಪ್ರಯತ್ನ ಪಡಲಾಗುತ್ತಿದೆ. ಆದರೆ ಹೂಡಿಕೆದಾರರು ಇದಕ್ಕೆ ಮುಂದಾಗದ ಕಾರಣ ಮಾಲೀಕ ಸಹ ಇದರ ಗೋಜಿಗೆ ಹೋಗಿಲ್ಲ. ಇದೀಗ ಅಂತಿಮವಾಗಿ ಹಾಂಗ್ ಕಾಂಗ್‌ನ ಅಬರ್ಡೀನ್ ಬಂದರಿನಿಂದ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್‌ನ್ನು ತೆಗೆದುಹಾಕಲಾಗಿದೆ.
VIDEO: Hong Kong's Jumbo Floating Restaurant is towed out of the city after years of revitalisation efforts went nowhere pic.twitter.com/q5Ho3VmAkP
— AFP News Agency (@AFP) June 14, 2022
ಈ ರೆಸ್ಟೋರೆಂಟ್ ಅನ್ನು ನಿರ್ವಹಿಸುವ ಕಂಪನಿಯಾದ ಅಬರ್ಡೀನ್ ರೆಸ್ಟೋರೆಂಟ್ ಎಂಟರ್‌ಪ್ರೈಸಸ್, ವ್ಯವಹಾರವನ್ನು ನಡೆಸುವ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದೆ. ರೆಸ್ಟೊರೆಂಟ್‌ನಲ್ಲಿ ನಿರಂತರವಾಗಿ ಹಣ ಹೂಡುವುದು ಅವರಿಗೆ ಅಸಾಧ್ಯವಾಗುತ್ತಿತ್ತು. ಕಂಪನಿಯು ಪ್ರತಿ ವರ್ಷ ನಿರ್ವಹಣಾ ಮತ್ತು ತಪಾಸಣೆ ವೆಚ್ಚಗಳಿಗಾಗಿ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಆದರೆ ಗಳಿಸಿದ ಆದಾಯಕ್ಕಿಂತ ಖರ್ಚಾದ ವೆಚ್ಚವೇ ಹೆಚ್ಚು ಎಂದು ಅವರು ಹೇಳುತ್ತಾರೆ.
ಮುಂದಿನ ದಿನಗಳಲ್ಲಿ ಈ ವ್ಯವಹಾರವನ್ನು ಪುನರಾರಂಭಿಸಬಹುದು ಎಂದು ನಾವು ಭಾವಿಸುವುದಿಲ್ಲ ಎಂದು ಕಂಪನಿ ಹೇಳಿದೆ. ಈ ತೇಲುವ ರೆಸ್ಟಾರೆಂಟ್ ಅನ್ನು ಹಲವಾರು ದೋಣಿಗಳ ಸಹಾಯದಿಂದ ತೆಗೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ: ನಟ ಪ್ರಭಾಸ್‌ಗೆ ಕೂಡಿಬಂದ ಕಂಕಣ ಭಾಗ್ಯ: ಬಾಹುಬಲಿ ಕೈಹಿಡಿಯೋ ದೇವಸೇನಾ ಇವರೇ!
ಇನ್ನು ಈ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್‌ನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಅನೇಕ ಜನರು ಇದನ್ನು ನೋಡಲು ಜಮಾಯಿಸದ್ದರು ಎನ್ನಲಾಗಿದೆ. ಹಲವಾರು ಸ್ಥಳೀಯ ರಾಜಕಾರಣಿಗಳು, ಸರ್ಕಾರಿ ಹೂಡಿಕೆಯೊಂದಿಗೆ ರೆಸ್ಟೋರೆಂಟ್ ಅನ್ನು ರಕ್ಷಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಹಾಂಗ್ ಕಾಂಗ್‌ನ ಮುಖ್ಯ ಕಾರ್ಯನಿರ್ವಾಹಕ ಕ್ಯಾರಿ ಲ್ಯಾಮ್ ಅವರ ಮಾತುಗಳನ್ನು ತಿರಸ್ಕರಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.