World`s Oldest Animal: ಎರಡು ವಿಶ್ವಯುದ್ಧಗಳನ್ನು ನೋಡಿರುವ ಈ ಆಮೆಯ Viral News ನೀವೂ ಓದಿ
ಮನುಷ್ಯರಂತೆ ಪ್ರಾಣಿ ಪ್ರಪಂಚವೂ ಕೂಡ ತುಂಬಾ ಅದ್ಭುತವಾಗಿದೆ. ನಮ್ಮಂತೆಯ ಅವರ ಮೇಲೂ ಕೂಡ ವಾತಾವರಣ ಪರಿಣಾಮ ಬೀರುತ್ತದೆ. ಇತೀಚೆಗಷ್ಟೇ ವಿಶ್ವದ ಅತ್ಯಂತ ಹಳೆ ಪ್ರಾಣಿಯ ಚಿತ್ರ ಪ್ರಕಟಗೊಂಡಿದೆ. ಇದೊಂದು ಆಮೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಸಂಗತಿಗಳನ್ನು ಕೇಳಿ ನೀವೂ ಕೂಡ ನಿಬ್ಬೇರಗಾಗುವಿರಿ.
ನವದೆಹಲಿ: ಪ್ರಾಣಿಗಳು ಹಾಗೂ ಮಾನವರಿಂದಲೇ ನಿಸರ್ಗದಲ್ಲಿ ಸಮತೋಲನ ಸೃಷ್ಟಿಯಾಗುತ್ತದೆ. ಪ್ರಾಣಿಗಳು ಹಾಗೂ ಪಕ್ಷಿಗಳಲ್ಲಿ ಸುದೀರ್ಘ ಕಾಲದವರೆಗೆ ಬಾಳುವ ಪ್ರಾಣಿ ಎಂದರೆ ಅದು ಆಮೆ. ವಿಶ್ವದಲ್ಲಿಯೇ ಅತಿ ಹೆಚ್ಚು ವಯಸ್ಸಿನ ಆಮೆಯೊಂದು ವಿಶ್ವದ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ಆಮೆಯ ಹೆಸರು ಜೊನಾಥನ್ (Jonathan Tortoise) ಹಾಗೂ ಇದರ ವಯಸ್ಸು 188 ವರ್ಷಗಳು.
ಈತನಿಗೆ ಜನ Real Life Mowgli ಎಂದು ಕರೆಯುತ್ತಾರಂತೆ, ಕಾರಣ ಇಲ್ಲಿದೆ
ಎರಡು ವಿಶ್ವಯುದ್ಧಗಳಿಗೆ ಸಾಕ್ಷಿಯಾಗಿದೆ ಈ ಆಮೆ
ಈ ಆಮೆಯ ಭಾವಚಿತ್ರವನ್ನು ಭಾರತೀಯ ಅರಣ್ಯ ಅಧಿಕಾರಿ ಪರವೀನ್ ಕಾಸವಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ಈ ಆಮೆ 1832ರಲ್ಲಿ ಪ್ರಪಂಚಕ್ಕೆ ಕಾಲಿಟ್ಟಿದೆ' ಎಂಬ ಕ್ಯಾಪ್ಶನ್ ಬರೆದಿದ್ದಾರೆ. ಈ ಆಮೆ ಎರಡೂ ವಿಶ್ವಯುದ್ಧಗಳಿಗೆ ಸಾಕ್ಷಿಯಾಗುವುದರ ಜೊತೆಗೆ ರಷ್ಯಾ ಕ್ರಾಂತಿ, 39 ಅಮೆರಿಕಾದ ರಾಷ್ಟ್ರಪತಿಗಳು ಹಾಗೂ ಇದೀಗ ಕೊರೊನಾ ಕಾಲವನ್ನು ಕೂಡ ಈ ಆಮೆ ನೋಡಿದೆ.
ಈ ದೇಶದಲ್ಲಿ ಸ್ಥೂಲಕಾಯದ ಯುವತಿಯರಿಗೆ ಫುಲ್ ಡಿಮಾಂಡ್, ನೀಳಕಾಯದ ವಧು ಅಶುಭ ಅಂತೆ
ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಸೇಂಟ್ ಹೆಲೆನಾ ದ್ವೀಪದಲ್ಲಿ ವಾಸಿಸುವ ಜೊನಾಥನ್ ಪ್ರಸಿದ್ಧ ಲಂಡನ್ ಕ್ಲಾಕ್ ಟವರ್ ಬಿಗ್ ಬೆನ್ ಮತ್ತು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ ಹಳೆಯದು ಎಂದು ಹೇಳಿದರೆ ನಿಮಗೂ ಆಶ್ಚರ್ಯವಾಗಬಹುದು.
ಇದನ್ನು ಓದಿ- Viral Video: ತನ್ನ ಮಾಲೀಕನನ್ನು Bike Ride ಮಾಡಿಸುತ್ತಿದೆ ಈ ಶ್ವಾನ, Swag ನೀವು ನೋಡಿ
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ
ಪ್ರಸ್ತುತ ವಿಜ್ಞಾನಿಗಳು ಈ ಆಮೆಯ ದೀರ್ಘಾಯುಷ್ಯದ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಮಾನವರ ಕೋಶಗಳಲ್ಲಿ ಆಗುತ್ತಿರುವ ಮ್ಯೂಟೆಶನ್ ಗಳ ಕಾರಣಗಳನ್ನು ಪತ್ತೆಹಚ್ಚಬಹುದಾಗಿದೆ. ಮ್ಯೂಟೆಶನ್ ಕಾರಣ ಕೋಶಗಳು ಹೆಚ್ಚಾಗುತ್ತವೆ ಹಾಗೂ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ. ಒಂದು ವೇಳೆ ವಿಜ್ಞಾನಿಗಳು ಇದರ ಕಾರಣಗಳನ್ನು ಪತ್ತೆಹಚ್ಚಿದರೆ ಕ್ಯಾನ್ಸರ್ ಮೇಲೆ ನಿಯಂತ್ರಣ ಸಾಧಿಸಬಹುದು. ಸಾಮಾಜಿಕ ಮಾಧ್ಯಮದ ಮೇಲೆ ಈ ಆಮೆಯ ಭಾವಚಿತ್ರಗಳು ಪ್ರಸ್ತುತ ಭಾರಿ ವೈರಲ್ (Viral Video) ಆಗುತ್ತಿವೆ. ಜನರು ಈ ಭಾವಚಿತ್ರಕ್ಕೆ ಭಾರಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಜನರು ವಿವಿಧ ರೀತಿಯ ಕಾಮೆಂಟ್ ಗಳನ್ನು ಕೂಡ ನೀಡುತ್ತಿದ್ದಾರೆ.