ಚೀನಾದಲ್ಲಿ ಪ್ರಕೃತಿ ವಿಕೋಪ, ಭಾರೀ ಪ್ರವಾಹಕ್ಕೆ ಸಾವಿರಾರು ಕೋಟಿ ನಷ್ಟ
ತನ್ನನ್ನು ಸರ್ವಶಕ್ತ ಎಂದು ಮೆರೆಯುತ್ತಿದ್ದ ಚೀನಾಗೆ ಇದೀಗ ಪ್ರಕೃತಿಯೇ ಪಾಠ ಕಲಿಸಿದೆ. ವಾಸ್ತವವಾಗಿ ಚೀನಾದಲ್ಲಿ ಭಾರಿ ಪ್ರವಾಹದಿಂದಾಗಿ ಸಾವಿರಾರು ಮನೆಗಳು ಮುಳುಗಿವೆ, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ ಮತ್ತು ಸಾವಿರಾರು ಕೋಟಿ ನಷ್ಟವಾಗಿದೆ.
ನವದಹೆಲಿ: ಜಗತ್ತಿನಾದ್ಯಂತ ಕರೋನಾವೈರಸ್ (Coronavirus) ಹರಡಲು ಚೀನಾ ದೇಶವೇ ಕಾರಣ ಎಂದು ವಿಶ್ವದ ಹಲವು ರಾಷ್ಟ್ರಗಳು ಚೀನಾ ವಿರುದ್ಧ ವಾಗ್ಧಾಳಿ ನಡೆಸುತ್ತಿವೆ. ಮತ್ತೊಂದೆಡೆ ಹೊಸ ತೊಂದರೆಯೊಂದು ಚೀನಾದ ಕದ ತಟ್ಟಿದ್ದು ಪ್ರಕೃತಿ ಕೂಡ ಚೀನಾ ವಿರುದ್ದ ಮುನಿಸಿಕೊಂಡಂತೆ ತೋರುತ್ತಿದೆ. ಹೌದು ದಕ್ಷಿಣ ಚೀನಾದಲ್ಲಿ ಭಾರಿ ಮಳೆಯು ಚಂಡಮಾರುತ ಮತ್ತು ಪ್ರವಾಹದಂತಹ ಪರಿಸ್ಥಿತಿಗಳನ್ನು ಸೃಷ್ಟಿಸಿದೆ. ಪ್ರವಾಹದಿಂದ ಸಾವಿರಾರು ಮನೆಗಳು ಮುಳುಗಿವೆ ಮತ್ತು ದಕ್ಷಿಣ ಚೀನಾದ ದೊಡ್ಡ ಪ್ರದೇಶವು ಇನ್ನೂ ನೀರಿನಲ್ಲಿ ಮುಳುಗಿದೆ.
ಚೀನಾ (China) ಸರ್ಕಾರ ಮಾಧ್ಯಮಗಳಿಗೆ ತಿಳಿಸಿದೆ. ಈ ಪ್ರವಾಹದಲ್ಲಿ ಸಾವಿರಾರು ಮನೆಗಳು ಮುಳುಗಿವೆ ಮತ್ತು ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಒಂದು ಡಜನ್‌ಗೂ ಹೆಚ್ಚು ಜನರು ಸಹ ಸಾವನ್ನಪ್ಪಿದ್ದಾರೆ. ಇದಲ್ಲದೆ ಚೀನಾ ಸರ್ಕಾರವು ಸಾವಿರಾರು ಕೋಟಿಗಳನ್ನು ಕಳೆದುಕೊಂಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಫಿಲಿಪೈನ್ಸ್ ಜನರು ಚೀನಾದೊಂದಿಗೆ ಇರಲು ಬಯಸುವುದಿಲ್ಲ, ಆದರೆ...
ಸುಮಾರು ಎರಡೂವರೆ ಮಿಲಿಯನ್ ಜನರ ಸ್ಥಳಾಂತರ:
ಚೀನಾದ ತುರ್ತು ಸೇವೆಗಳು ಈ ಪ್ರವಾಹದಿಂದ ಉಂಟಾದ ವಿನಾಶಕಾರಿ ಪರಿಸ್ಥಿತಿಯಲ್ಲಿ ಜನರ ರಕ್ಷಣೆಗಾಗಿ ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ಪ್ರವಾಹದಿಂದಾಗಿ ನಿರಾಶ್ರಿತರಾಗಿರುವ ಎರಡು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಈ ಸ್ಥಳಾಂತರಗೊಂಡ ಜನರು ಮುಳುಗಿದ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಅವರು ಈಗ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಹೇಳಲಾಗಿದೆ.
ತೀವ್ರಗೊಂಡ Boycott Chinese products ಕೂಗು, ಜೂನ್ 10ರಿಂದ ದೇಶವ್ಯಾಪಿ CAIT ಅಭಿಯಾನ
ದಕ್ಷಿಣ ಚೀನಾದಲ್ಲಿ ಹೆಚ್ಚಿನ ಹಾನಿ:
ಮಧ್ಯ ಮತ್ತು ದಕ್ಷಿಣ ಚೀನಾದಲ್ಲಿ ಏಕಾಏಕಿ ಭಾರಿ ಮಳೆಯು ಭಾರಿ ಪ್ರವಾಹದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ದಕ್ಷಿಣ ಚೀನಾ ಮಧ್ಯ ಚೀನಾಕ್ಕಿಂತ ಹೆಚ್ಚಿನ ಹಾನಿ ಉಂಟುಮಾಡಿದೆ ಎಂದು ಹೇಳಲಾಗಿದೆ. ಗುವಾಂಗ್ಕ್ಸಿ, ಝುವಾಂಗ್, ಯಾಂಗ್‌ಶುವೊ, ಹುನಾನ್, ಗುಯಿ ಝೌ, ಕ್ವಾಂಗ್ಟಾಂಗ್, ಫುಚ್ಯೆನ್ ಮತ್ತು ಚಿಚಿಯಾಂಗ್‌ನಲ್ಲಿ ಪ್ರವಾಹದಿಂದಾಗಿ 1300 ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಹಾನಿಯ ಪ್ರಾಥಮಿಕ ಅಂದಾಜುಗಳು 550 ಮಿಲಿಯನ್ ಯುಎಸ್ ಡಾಲರ್ ಅಥವಾ 4161 ಕೋಟಿ ರೂ. ಎಂದು ಅಂದಾಜಿಸಲಾಗಿದೆ.