ಉಕ್ರೇನ್ ನಿಂದ ಕಾಲ್ಕಿತ್ತ 836,000 ನಿರಾಶ್ರಿತರು..!
ಇದುವರೆಗೆ 836,000 ನಿರಾಶ್ರಿತರು ಉಕ್ರೇನ್ ಸಂಘರ್ಷದಿಂದಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಂಕಿ-ಅಂಶಗಳು ಹೇಳಿವೆ.
ನವದೆಹಲಿ: ಇದುವರೆಗೆ 836,000 ನಿರಾಶ್ರಿತರು ಉಕ್ರೇನ್ ಸಂಘರ್ಷದಿಂದಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವಿಶ್ವಸಂಸ್ಥೆ ಅಂಕಿ-ಅಂಶಗಳು ಹೇಳಿವೆ.
ರಷ್ಯಾದ ಪ್ಯಾರಾಟ್ರೂಪರ್‌ಗಳು ಅದರ ಮುತ್ತಿಗೆ ಹಾಕಿದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ಬಂದಿಳಿದಿದ್ದಾರೆ ಎಂದು ಉಕ್ರೇನ್ (Russia Ukraine Crisis Update) ಮಿಲಿಟರಿ ಹೇಳಿದೆ ಎಂದು ಬಿಬಿಸಿ ವರದಿ ಮಾಡಿದೆ. ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ ಡಜನ್ಗಟ್ಟಲೆ ನಾಗರಿಕರ ಹತ್ಯೆಗಳನ್ನು ಕಾರಣವಾಗಿರುವ ರಷ್ಯಾ ಪಡೆಗಳು ಖಾರ್ಕಿವ್ ಪ್ರದೇಶದ ಮೇಲೆ ದಾಳಿಯನ್ನು ಹೆಚ್ಚಿಸಿವೆ.
ಇದನ್ನೂ ಓದಿ: ಉಕ್ರೇನ್ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವುದೇಕೆ?
ರಷ್ಯಾದ ಪಡೆಗಳು ಮಂಗಳವಾರ ಜನನಿಬಿಡ ನಗರ ಪ್ರದೇಶಗಳ ಮೇಲೆ ತಮ್ಮ ದಾಳಿಯನ್ನು ಹೆಚ್ಚಿಸಿವೆ, ಉಕ್ರೇನ್ (Russia Ukraine War ) ನ ಎರಡನೇ ಅತಿದೊಡ್ಡ ನಗರ ಮತ್ತು ಕೈವ್‌ನ ಮುಖ್ಯ ಟಿವಿ ಟವರ್‌ನ ಕೇಂದ್ರ ಚೌಕದಲ್ಲಿ ಬಾಂಬ್ ದಾಳಿ ನಡೆಸಿದೆ. ಇನ್ನೊಂದೆಡೆಗೆ ವಿಶ್ವ ಬ್ಯಾಂಕ್ ಉಕ್ರೇನ್‌ಗೆ $3 ಶತಕೋಟಿ ಬೆಂಬಲ ಪ್ಯಾಕೇಜ್ ನೀಡಲು ಯೋಜನೆಯೊಂದನ್ನು ರೂಪಿಸುತ್ತಿದೆ.ಯುಎಸ್ ಅಧ್ಯಕ್ಷ ಜೋ ಬಿಡೆನ್ ಮಂಗಳವಾರ ರಾತ್ರಿ ಭಾಷಣದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಆಕ್ರಮಣವನ್ನು "ಪೂರ್ವಯೋಜಿತ ಮತ್ತು ಅಪ್ರಚೋದಿತ" ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Russia Ukraine Crisis: ‘ಮಲಿಬು’ ರಕ್ಷಣೆಗೆ ಮುಂದಾದ ಬೆಂಗಳೂರು ಯುವಕರ ತಂಡ
ಏತನ್ಮಧ್ಯೆ, ಪೂರ್ವ ಹಂಗೇರಿಯ ಹಳ್ಳಿಯ ಶಾಲೆಯೊಂದರ ಮೈದಾನದಲ್ಲಿ ನೂರಾರು ನಿರಾಶ್ರಿತರಲ್ಲಿ ಬಹುತೇಕರು, ಗಂಡಂದಿರನ್ನು, ತಂದೆಯವರನ್ನು,ಸಹೋದರನ್ನು, ಮಕ್ಕಳನ್ನು ಕಳೆದುಕೊಂಡಿರುವ ಎಲ್ಲರೂ ಈಗ ಉಕ್ರೇನ್ ವಿರುದ್ಧದ ರಷ್ಯಾ ಆಕ್ರಮಣವನ್ನು ವಿರೋಧಿಸಲು ನೆರೆದಿದ್ದಾರೆ.
ಇನ್ನೊಂದೆಡೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದ ವಿರುದ್ಧದ ನಿರ್ಬಂಧವೂ ಮುಂದುವರೆದಿದ್ದು, ಈ ಹಿನ್ನಲೆಯಲ್ಲಿ ಈಗ ರಷ್ಯಾದ ಏಳು ಬ್ಯಾಂಕ್ ಗಳನ್ನು SWIFTನೆಟ್‌ವರ್ಕ್‌ನಿಂದ ಹೊರಗಿಡಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.