ಅನೇಕ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ರಫ್ತು ಮಾಡದಂತೆ ಭಾರತ ಸೇರಿದಂತೆ ಇತರ ದೇಶಗಳಿಗೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ. ಇದು ಉಕ್ರೇನ್ನೊಂದಿಗಿನ ಯುದ್ಧಕ್ಕೆ ರಷ್ಯಾ ಹಣವನ್ನು ನೀಡುತ್ತದೆ ಎಂಬುವುದು ಆ ದೇಶಗಳ ನಂಬಿಕೆಯಾಗಿದೆ.
Russia-Ukrain War - ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಗೋಧಿಯ ಜಾಗತಿಕ ಪೂರೈಕೆ ಅಪಾಯಕ್ಕೆ ಸಿಲುಕಿದೆ. ಏಕೆಂದರೆ ಚೀನಾ, ಭಾರತ ಮತ್ತು ರಷ್ಯಾ ವಿಶ್ವದ ಅತಿ ಹೆಚ್ಚು ಗೋಧಿಯನ್ನು ಉತ್ಪಾದಿಸುವ ರಾಷ್ಟ್ರಗಳಾಗಿವೆ. ಇದರೊಂದಿಗೆ, ಗೋಧಿ ರಫ್ತು ಮಾಡುವ ದೇಶಗಳಲ್ಲಿ ಉಕ್ರೇನ್ ಐದನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಗೋಧಿ ಬೆಲೆ ಹೆಚ್ಚಾಗತೊಡಗಿದೆ.
ಕೇವಲ ಒಂದು ವಾರದಲ್ಲಿ ಭಾರತ ಎರಡನೇ ಬಾರಿಗೆ ರಷ್ಯಾದ ಉಕ್ರೇನ್ ಆಕ್ರಮಣಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯದಿಂದ ದೂರ ಉಳಿದಿದೆ.ಆ ಮೂಲಕ ಉಕ್ರೇನ್ ವಿಚಾರದಲ್ಲಿ ಭಾರತ ಈಗ ಲೆಕ್ಕಾಚಾರದ ಹೆಜ್ಜೆಯನ್ನು ಹಾಕುತ್ತಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ರಕ್ಷಣಾ ಮುಖ್ಯಸ್ಥರಿಗೆ ಭಾನುವಾರ ದೇಶದ ಪರಮಾಣು ನಿರೋಧಕ ಪಡೆಗಳಿಗೆ ಹೆಚ್ಚಿನ ಎಚ್ಚರಿಕೆಯಿಂದ ಇರುವಂತೆ ಆದೇಶಿಸಿದ್ದಾರೆ. ಪಾಶ್ಚಾತ್ಯ ದೇಶಗಳು ತಮ್ಮ ದೇಶದ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
Ukraine-Russia War Updates: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಜರ್ಮನಿ (Germany) ಉಕ್ರೇನ್ಗೆ (Ukraine) 1 ಸಾವಿರ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು 500 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ನೀಡಲಿದೆ. ಅಷ್ಟೇ ಅಲ್ಲ ಜರ್ಮನಿ ರಷ್ಯಾದ ವಿಮಾನಗಳಿಗಾಗಿ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.