ನವದೆಹಲಿ: ಸದ್ಯದಲ್ಲೇ ನೇಪಾಳ ದೇಶವು ಭಾರತ-ಚೀನಾ ನಡುವೆ ಎರಡು ವರ್ಷಗಳ ಒಳಗೆ ರೈಲು ಮಾರ್ಗವನ್ನು ಆರಂಭಿಸುವ ಯೋಜನೆಯನ್ನು ರೂಪಿಸುತ್ತಿದೆ ಎಂದು ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಶುಕ್ರವಾರದಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

"ಭಾರತ ಮತ್ತು ಚೀನಾ ಎರಡಕ್ಕೂ ರೈಲ್ವೆಯ ಮೂಲಕ ಸಂಪರ್ಕ ಕಲ್ಪಿಸುವ ಬಿರ್ಗುಂಜ್-ಕಾಠ್ಮಂಡು ಮತ್ತು ರಸುವಾಗಾಧಿ-ಕಾಠ್ಮಂಡು ರೈಲ್ವೆಗಳ ವಿವರವಾದ ಯೋಜನೆ ವರದಿಗಳು ಸಿದ್ಧವಾಗಲಿದೆ ಮತ್ತು ಎರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಲಾಗುವುದು" ಎಂದು ಸಂಸತ್ತಿನಲ್ಲಿ ಅಧ್ಯಕ್ಷರು ತಿಳಿಸಿದ್ದಾರೆ.ನೇಪಾಳ ಮತ್ತು ಭಾರತ ನಡುವಿನ ಮೊದಲ ಟ್ರಾನ್ಸ್-ಗಡಿಯ ರೈಲ್ವೆ ಮುಂಬರುವ ಹಣಕಾಸು ವರ್ಷದಲ್ಲಿ ಯೋಜಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು. 


ಮುಂದಿನ ಹಣಕಾಸು ವರ್ಷದಲ್ಲಿ ಜಯನಗರ- ಬಿಜಾಲ್ಪುರಾ ಮತ್ತು ಭಾರತದ ಬಾತ್ನಾಹಾದಿಂದ ಬಿರಾಟ್ನಗರಕ್ಕೆ ರೈಲ್ವೇ ಸೇವೆ ಕಾರ್ಯಾಚರಣೆಗೊಳ್ಳಲಿದೆ .ಬಿಜಾಲ್ಪುರಾ-ಬಾರ್ಡಿಬಾಸ್ ವಿಭಾಗದ ರೈಲ್ವೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು.ಈಗಾಗಲೇ ನೇಪಾಳ ಸರಕಾರವು ಸಂಬಂಧಪಟ್ಟ ರಾಷ್ಟ್ರಗಳ ಸಹಯೋಗದೊಂದಿಗೆ ನೆರೆಹೊರೆಯ ರಾಷ್ಟ್ರಗಳನ್ನು ಸಂಪರ್ಕಿಸುವ ರೈಲ್ವೆಯ ನಿರ್ಮಾಣದ ತಾಂತ್ರಿಕ ಅಧ್ಯಯನ ಪೂರ್ಣಗೊಂಡಿದೆ ಎನ್ನಲಾಗಿದೆ.


ಈ ರೈಲ್ವೆ ಸಂರ್ಪರ್ಕದ ಜೊತೆಗೆ ಮುಂಬರುವ ಹಣಕಾಸಿನ ವರ್ಷದಲ್ಲಿ ಸುಮಾರು 500,000 ಉದ್ಯೋಗಾವಕಾಶಗಳನ್ನು ಉತ್ಪಾದಿಸುವ ಗುರಿ ಬಗ್ಗೆ ಅಧ್ಯಕ್ಷರು ಹೇಳಿದರು. 2019 ವೇಳೆಗೆ ಗೌತಮ್ ಬುದ್ಧ ವಿಮಾನ ನಿಲ್ದಾಣ ಮತ್ತು 2021 ರ ವೇಳೆಗೆ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಒಳಪಡಿಸುವ ಗುರಿಯನ್ನು ನೇಪಾಳ ಸರ್ಕಾರ ಹೊಂದಿದೆ ಎನ್ನಲಾಗಿದೆ.