ವಾಷಿಂಗ್ಟನ್: New Corona Vaccine - ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವಕ್ಕೆ ಮತ್ತೊಂದು ಬಲಿಷ್ಠ ಅಸ್ತ್ರ ಸಿಕ್ಕಿದೆ. ಈ ಕುರಿತು ಭರವಸೆ ವ್ಯಕ್ತಪಡಿಸಿರುವ ಕೊವಿಡ್-19 ವ್ಯಾಕ್ಸಿನ್ ತಯಾರಕ ಕಂಪನಿ Novavax, ತನ್ನ ಕಂಪನಿಯ ಲಸಿಕೆ ಕೊರೊನಾ ವೈರಸ್ ನ ಎಲ್ಲಾ ವಿಧದ ರೂಪಾಂತರಿಗಳ ಮೇಲೆ ಶೇ.90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಅಮೇರಿಕಾ ಹಾಗೂ ಮೆಕ್ಸಿಕೋಗಳಲ್ಲಿ ನಡೆಸಲಾಗಿರುವ ಅತಿದೊಡ್ಡ ಮತ್ತು ಕೊನೆಯ ಹಂತದ ಅಧ್ಯಯನದಲ್ಲಿ ಸಾಬೀತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ವ್ಯಾಕ್ಸಿನ್ ಕೊರತೆ ದೂರಾಗಲಿದೆ
ಅಧ್ಯಯನದ ಮೂಲಕ ಬಂದ ಅಂಕಿ-ಅಂಶಗಳ ಪ್ರಕಾರ ಈ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿದೆ. ವಿಶ್ವಾದ್ಯಂತ ಹಲವು ದೇಶಗಳಲ್ಲಿ ನಡೆಸಲಾಗುತ್ತಿರುವ ಕೊರೊನಾ ವ್ಯಾಕ್ಸಿನೆಶನ್ ಕಾರ್ಯಕ್ರಮ ತನ್ನ ಉನ್ನತ ಸ್ಥಿತಿ ತಲುಪಿದ್ದು ಮತ್ತು ವ್ಯಾಕ್ಸಿನ್ (Corona Vaccine) ಕೊರತೆ ಎದುರಾಗಿರುವ ಸಂದರ್ಭದಲ್ಲಿ ಈ ಮಾಹಿತಿ ಪ್ರಕಟ ಭಾರಿ ಮಹತ್ವಪಡೆದುಕೊಂಡಿದೆ. ಆದರೆ, ಪ್ರಸ್ತುತ ಅಮೇರಿಕಾದಲ್ಲಿ ಕೊರೊನಾ ವ್ಯಾಕ್ಸಿನ್ ಬೇಡಿಕೆ ಇಳಿಮುಖವಾಗತೊಡಗಿದೆ. ಆದರೆ, ವಿಶ್ವದಲ್ಲಿ ಇನ್ನೂ ಕೂಡ ಕೊರೊನಾ ವ್ಯಾಕ್ಸಿನ್ ಗಾಗಿ ಬೇಡಿಕೆ ಹೆಚ್ಚಾಗಿದೆ. ನೋವ್ಯಾಕ್ಸ್ ಲಸಿಕೆಯ (Novavax Corona Vaccine) ಸಂಗ್ರಹ ಮತ್ತು ಸಾಗಣೆ ತುಂಬಾ ಸುಲಭವಾಗಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಸಿಕೆಯ ಪೂರೈಕೆ ಹೆಚ್ಚಿಸುವಲ್ಲಿ ಇದು ಮಹತ್ವದ ಪಾತ್ರವಹಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.


ಸೆಪ್ಟೆಂಬರ್ ವರೆಗೆ 10 ಕೋಟಿ ಲಸಿಕೆಯ ಪ್ರಮಾಣಗಳ ಉತ್ಪಾದನೆ (Novavax Covid 19 Vaccine Production)
ಈ ಕುರಿತು ಹೇಳಿಕೆ ನೀಡಿರುವ ನೋವಾವ್ಯಾಕ್ಸ್ , ಕಂಪನಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಮೇರಿಕಾ, ಯುರೋಪ್ ಹಾಗೂ ಇತರೆ ದೇಶಗಳಲ್ಲಿ ಲಸಿಕೆಯ ತುರ್ತುಬಳಕೆಗೆ ಅನುಮೋದನೆ ಪಡೆಯುವ ಗುರಿಹೊಂದಿರುವುದಾಗಿ ಹೇಳಿದೆ. ಅಲ್ಲಿಯವರೆಗೆ ಒಟ್ಟು 10 ಕೋಟಿ ವ್ಯಾಕ್ಸಿನ್ (Coronavirus) ಪ್ರಮಾಣಗಳನ್ನು ಉತ್ಪಾದಿಸುವ ಕ್ಷಮತೆಯನ್ನು ಕಂಪನಿ ಹೊಂದಿದೆ.  ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ನೋವಾವ್ಯಾಕ್ಸ್ ಕಂಪನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ಟೇನ್ಲಿ ಏರ್ಕ್, "ನಮ್ಮ ಕಂಪನಿಯ ಆರಂಭಿಕ ಲಸಿಕೆಯ ಪ್ರಮಾಣಗಳು ಕಡಿಮೆ ಹಾಗೂ ಮಧ್ಯಮ ಆದಾಯ ಹೊದಿರುವ ದೇಶಗಳಿಗೆ ರವಾನೆಯಾಗಲಿವೆ' ಎಂದಿದ್ದಾರೆ. ಅಮೆರಿಕಾದ ಜನಸಂಖ್ಯೆಯ ಕುರಿತು ಹೇಳುವುದಾದರೆ, ಅಲ್ಲಿನ ಅರ್ಧಕ್ಕಿಂತ ಹೆಚ್ಚಿನ ಜನರಿಗೆ ಕೊರೊನಾ ವ್ಯಾಕ್ಸಿನ್ ನ ಮೊದಲ ಪ್ರಮಾಣ ನೀಡಲಾಗಿದೆ. ಆದರೆ, ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಇದುವರೆಗೆ ಸುಮಾರು ಶೇ.1 ಕ್ಕಿಂತ ಕಡಿಮೆ ಜನರು ಮೊದಲ ಪ್ರಮಾಣವನ್ನು ತೆಗೆದುಕೊಂಡಿದ್ದಾರೆ.


30000 ಜನರ ಮೇಲೆ ಲಸಿಕೆಯ ಟ್ರಯಲ್
ವೋವಾವ್ಯಾಕ್ಸ್ ನಡೆಸಿರುವ ಅಧ್ಯಯನದಲ್ಲಿ ಅಮೇರಿಕಾ ಹಾಗೂ ಮೆಕ್ಸಿಕೋದ 18 ವರ್ಷ ಮತ್ತು ಆಟಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 30,000 ಜನರು ಭಾಗಿಯಾಗಿದ್ದರು. ಅವರಲ್ಲಿ 2/3 ರಷ್ಟು ಜನರಿಗೆ ಮೂರುವಾರಗಳ ಅಂತರದಲ್ಲಿ ವ್ಯಾಕ್ಸಿನ್ ನ ಎರಡು ಪ್ರಮಾಣಗಳನ್ನು ನೀಡಲಾಗಿತ್ತು. ಉಳಿದ ಎಲ್ಲರಿಗೂ ಕೂಡ ವ್ಯಾಕ್ಸಿನ್ ನ ಡಮಿಡೋಸ್ ನೀಡಲಾಗಿತ್ತು. ಲಸಿಕೆ ಹಾಕಿಸಿಕೊಂಡವರ ಗುಂಪಿನಲ್ಲಿ ಯಾವುದೇ ವ್ಯಕ್ತಿಯಲ್ಲಿ ರೋಗ ಮಧ್ಯಮ ಅಥವಾ ಗಂಭೀರ ಮಟ್ಟಕ್ಕೆ ತಲುಪಿಲ್ಲ.


ಇದನ್ನೂ ಓದಿ- Good News: ಮಕ್ಕಳಿಗಾಗಿ Nasal Spray Covid-19 Vaccine ಪರೀಕ್ಷೆ ಕೈಗೊಂಡ ರಷ್ಯಾ


ಬ್ರಿಟನ್ ಕೊರೊನಾ ವೇರಿಯಂಟ್ ಮೇಲೂ ಕೂಡ ಪರಿಣಾಮಕಾರಿ
ಲಸಿಕೆಯ ಕುರಿತು ಹೇಳಿಕೆ ನೀಡಿರುವ ಕಂಪನಿ, ನೋವಾವ್ಯಾಕ್ಸ್ ಕೊರೊನಾ ವೈರಸ್ ನ ಎಲ್ಲಾ ವೇರಿಯಂಟ್ ಗಳ ಮೇಲೂ ಕೂಡ ಪರಿಣಾಮಕಾರಿಯಾಗಿದೆ ಎಂದಿದೆ. ಇವುಗಳಲ್ಲಿ ಇತ್ತೀಚೆಗಷ್ಟೇ ಬ್ರಿಟನ್ ನಲ್ಲಿ ಪತ್ತೆಯಾದ ಕೊರೊನಾ (Covid-19 Variant) ವೇರಿಯಂಟ್ ಕೂಡ ಶಾಮೀಲಾಗಿದೆ. ಈ ವೇರಿಯಂಟ್ ಅಮೇರಿಕಾದಲ್ಲಿಯೂ ಕೂಡ ವ್ಯಾಪಕ ಹರಡಿತ್ತು. ಇದಲ್ಲದೆ ಉನ್ನತ ರೋಗದ ಅಪಾಯ ಇರುವವರ ಮೇಲೂ ಕೂಡ ಈ ಲಸಿಕೆ ಪರಿಣಾಮಕಾರಿಯಾಗಿದೆ. ಇವರಲ್ಲಿ ವೃದ್ಧರು ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವವರು ಶಾಮೀಲಾಗಿದ್ದಾರೆ. ಲಸಿಕೆ ಹಾಕಿಸಿಕೊಂಡವರು ನೀಡಿರುವ ಮಾಹಿತಿಯ ಪ್ರಕಾರ, ಈ ವ್ಯಾಕ್ಸಿನ್ ನ ದುಷ್ಪ್ರಭಾವಗಳು ತುಂಬಾ ಮಾಮೂಲಿಯಾಗಿವೆ. ಲಸಿಕೆ ಹಾಕಿದ ಜಾಗಕ್ಕೆ ಸ್ವಲ್ಪ ನೋವು (Novavax Covid 19 Vaccine Side Effects) ಹೊರತುಪಡಿಸಿದರೆ, ರಕ್ತ ಹೆಪ್ಪುಗಟ್ಟುವಿಕೆ ಅಥವಾ ಹೃದಯ ಸಮಸ್ಯೆಗಳು ಕಂಡುಬಂದಿಲ್ಲ. 


ಇದನ್ನೂ ಓದಿ-Corona ಪ್ರಕೋಪದ ನಡುವೆಯೇ ವಿಚಿತ್ರ ವೈರಸ್ ಎಂಟ್ರಿ, ಮನೆಯಲ್ಲಿರುವವರೂ ಸೋಂಕಿತರಾಗುತ್ತಿದ್ದಾರೆ!


ರೆಫ್ರಿಜರೇಟರ್ ಸ್ಟ್ಯಾಂಡರ್ಡ್ ಟೆಂಪರೇಚರ್ ನಲ್ಲಿ ಈ ಲಸಿಕೆಯನ್ನು ಇಡಬಹುದು
ಈ ಆಂಟಿ-ಕರೋನಾ ಲಸಿಕೆ ಕರೋನವೈರಸ್ ಅನ್ನು ಗುರುತಿಸಲು ದೇಹಕ್ಕೆ ತರಬೇತಿ ನೀಡುತ್ತದೆ, ವಿಶೇಷವಾಗಿ ಸ್ಪೈಕ್ ಪ್ರೋಟೀನ್ ಅನ್ನು ಇದು ಆವರಿಸುತ್ತದೆ ಮತ್ತು ವೈರಸ್ ವಿರುದ್ಧ ಹೋರಾಡಲು ದೇಹವನ್ನು ಬಲಪಡಿಸುತ್ತದೆ. ನೊವಾವಾಕ್ಸ್ ಪ್ರಯೋಗಾಲಯದಲ್ಲಿ ತಯಾರಿಸಿದ ಆ ಪ್ರೋಟೀನ್‌ನ ಪ್ರತಿಗಳಿಂದ ಈ ವ್ಯಾಕ್ಸಿನ್ ತಯಾರಿಸಲಾಗುತ್ತದೆ ಮತ್ತು ಇದು ಪ್ರಸ್ತುತ ದೊಡ್ಡ ಪ್ರಮಾಣದಲ್ಲಿ ಬಳಸುತ್ತಿರುವ ಇತರ ಕೆಲವು ಲಸಿಕೆಗಳಿಗಿಂತ ಭಿನ್ನವಾಗಿದೆ. ನೊವಾವಾಕ್ಸ್ ಲಸಿಕೆಯನ್ನು ಸ್ಟ್ಯಾಂಡರ್ಡ್ ರೆಫ್ರಿಜರೇಟರ್ ತಾಪಮಾನದಲ್ಲಿ ಸಂಗ್ರಹಿಸಬಹುದಾಗಿದ್ದು, ವಿತರಣೆಗೆ ಇದು ಅತಿ ಸುಲಭವಾಗಿದೆ.


ಇದನ್ನೂ ಓದಿ-Chinaದಲ್ಲಿ ನೂತನ ಕೊರೊನಾ ರೂಪಾಂತರಿಯ ಆತಂಕ, ಜನರನ್ನು ಮನೆಯಲ್ಲಿ ಬಂಧಿಸಲು ಡ್ರೋನ್ ನಿಯೋಜನೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.