Old Virus Cases In Britain: Corona ಪ್ರಕೋಪದ ನಡುವೆಯೇ ವಿಚಿತ್ರ ವೈರಸ್ ಎಂಟ್ರಿ, ಮನೆಯಲ್ಲಿರುವವರೂ ಸೋಂಕಿತರಾಗುತ್ತಿದ್ದಾರೆ!

Old Virus Outbreak In Britain - ಮಂಕಿಪಾಕ್ಸ್ ವೈರಸ್ (Monkeypox Virus) ಪ್ರಕರಣಗಳಲ್ಲಿ ಆರಂಭದಲ್ಲಿ ಜ್ವರ, ತಲೆನೋವು, ಬಾವು, ಸೊಂಟನೋವು, ಸ್ನಾಯುಗಳಲ್ಲಿ ಸೆಳೆತ ಹಾಗೂ ನೋವು ಲಕ್ಷಣಗಳು ಕಂಡುಬರುತ್ತವೆ.

Written by - Nitin Tabib | Last Updated : Jun 14, 2021, 06:16 PM IST
  • ಕೊರೊನಾ ಪ್ರಕೋಪದ ನಡುವೆಯೇ ಎಂಟ್ರಿ ಕೊಟ್ಟ ಹೊಸ ವೈರಸ್,
  • ಬ್ರಿಟನ್ ವೇಲ್ಸ್ ನಲ್ಲಿ ಈ ವೈರಸ್ ನ ಎರಡು ಪ್ರಕರಣಗಳು ಪತ್ತೆಯಾಗಿವೆ .
  • ಹೊರಹೋಗದೆ ನೀವು ಮನೆಯಲ್ಲಿ ಉಳಿದುಕೊಂಡರೂ ಕೂಡ ಈ ವೈರಸ್ ಸೋಂಕು ತಗುಲುವ ಸಾಧ್ಯತೆ ಇದೆ.
Old Virus Cases In Britain: Corona ಪ್ರಕೋಪದ ನಡುವೆಯೇ ವಿಚಿತ್ರ ವೈರಸ್ ಎಂಟ್ರಿ, ಮನೆಯಲ್ಲಿರುವವರೂ ಸೋಂಕಿತರಾಗುತ್ತಿದ್ದಾರೆ! title=
Old Virus Outbreak In UK(File Photo)

ಲಂಡನ್: Old Virus Outbreak In Britain - ವಿಶ್ವಾದ್ಯಂತ ಕೊರೊನಾ ವೈರಸ್ (Coronavirus) ಪ್ರಕೋಪ ಮುಂದುವರೆದಿದೆ. ಏತನ್ಮಧ್ಯೆ ದಿನನಿತ್ಯ ಹೊಸ ಹೊಸ ಅಪಾಯಗಳು ಕೂಡ ಎದುರಾಗುತ್ತಿವೆ. ಕೊರೊನಾ ವೈರಸ್ ಗೆ (Covid-19) ಪರಿಪೂರ್ಣ ಚಿಕಿತ್ಸೆ ಕಂಡುಹಿಡಿಯುವುದು ಇದುವರೆಗೂ ಕೂಡ ವಿಜ್ಞಾನಿಗಳ ಪಾಲಿಗೆ ಸವಾಲಿನ ಪ್ರಶ್ನೆಯೇ ಆಗಿ ಉಳಿದಿದೆ. ಇನ್ನೊಂದೆಡೆ ಹೊಸ ವೈರಸ್ ವೊಂದು ಎಂಟ್ರಿ ನೀಡಿದೆ. ಈ ಹೊಸ ವೈರಸ್ ತುಂಬಾ ಅಪಾಯಕಾರಿಯಾಗಿದ್ದು, ಇದಕ್ಕೆ ಮಂಕಿಪಾಕ್ಸ್ ವೈರಸ್ (Monkeypox) ಎಂದು ಕರೆಯಲಾಗುತ್ತದೆ.

ಮನೆಯಲ್ಲಿಯೂ ಕೂಡ ಯಾರೂ ಸುರಕ್ಷಿತರಲ್ಲ (Monkeypox Outbreak In UK)
ಬ್ರಿಟನ್ ನ (UK) ವೇಲ್ಸ್ ನಲ್ಲಿ ಮಂಕಿ ಪಾಕ್ಸ್ ನ ಎರಡು ಪ್ರಕರಣಗಳು ಪತ್ತೆಯಾಗಿವೆ. ವಿಜ್ಞಾನಿಗಳ ಪ್ರಕಾರ ಈ ವೈರಸ್ ಹೆಚ್ಚಾಗಿ ಆಫ್ರಿಕಾ ಖಂಡಗಳಲ್ಲಿ ಕಂಡುಬರುತ್ತದೆ. ಅದರಲ್ಲೂ ವಿಶೇಷ ಎಂದರೆ, ಈ ವೈರಸ್ ಪತ್ತೆಯಾದ ಇಬ್ಬರು ರೋಗಿಗಳು ಕೂಡ ಮನೆಯಲ್ಲಿಯೇ ಇರುತ್ತಿದ್ದರು ಎನ್ನಲಾಗಿದೆ. ಅಂದರೆ ಒಂದು ವೇಳೆ ನಾವು ಮನೆಯಿಂದ ಹೊರಬೀಳದಿದ್ದರೂ ಕೂಡ ಈ ವೈರಸ್ ನಮ್ಮನ್ನು ತನ್ನ ತೆಕ್ಕೆತೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಬ್ರಿಟನ್ ಜನರಲ್ಲಿ ಆತಂಕ ಮನೆಮಾಡಿದೆ. ತಜ್ಞರು ಹೇಳುವ ಪ್ರಕಾರ, ಇದು ಹೊಸ ವೈರಸ್ ಅಲ್ಲ ಮತ್ತು ಇದು ತುಂಬಾ ಹಳೆ ವೈರಸ್ ಆಗಿದೆ. 

UKಯಿಂದ ಹೊರಗೆ ಇವರು ಸೋಂಕಿಗೆ ಒಳಗಾಗಿದ್ದಾರೆ (Monkeypox Treatment)
ಬ್ರಿಟೀಷ್ ನ್ಯೂಸ್ ವೆಬ್ ಸೈಟ್ 'ದಿ ವೀಕ್' ಪ್ರಕಟಿಸಿರುವ ವರದಿಯೊಂದರ ಪ್ರಕಾರ, ಈ ಇಬ್ಬರು ರೋಗಿಗಳು ಬ್ರಿಟನ್ (Britain) ಹೊರಗೆ ಈ ಸೋಂಕಿಗೆ ಗುರಿಯಾಗಿದ್ದಾರೆ. ಸದ್ಯ ಪಬ್ಲಿಕ್ ಹೆಲ್ತ್ ಬ್ರಿಟನ್ ಕಾಂಟ್ಯಾಕ್ಟ್ ಟ್ರೆಸಿಂಗ್ ನಲ್ಲಿ ತೊಡಗಿದೆ ಎಂದು ವರದಿ ಹೇಳಿದೆ. ಇದಲ್ಲದೆ ರೋಗಿಗಳ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ.

ಎಷ್ಟು ವಿಧದ ಮಂಕಿ ಪಾಕ್ಸ್ ವೈರಸ್ ಗಳಿವೆ (Types Of Monkeypox Viruses)
ತಜ್ಞರು ಹೇಳುವ ಪ್ರಕಾರ ಈ ವೈರಸ್ ನ ಒಟ್ಟು ಎರಡು ಪ್ರಜಾತಿಗಳಿವೆ. ಪಶ್ಚಿಮ ಆಪ್ರಿಕಾ ಹಾಗೂ ಮಧ್ಯ ಆಫ್ರಿಕಾ ಎಂಬ ಎರಡು ಪ್ರಜಾತಿಗಳಿವೆ. ಈ ವೈರಸ್ ಗಳು ಉಷ್ಣವಲಯದ ಮಳೆಗಾಡುಗಳ ಹತ್ತಿರ, ನಡುವೆ ಹಾಗೂ ಪಶ್ಚಿಮ ಆಫ್ರಿಕಾದ ದೇಶಗಳ ದೂರದ ಪ್ರದೇಶಗಳಲ್ಲಿ ಮಾತ್ರ ಹರಡುತ್ತದೆ ಎನ್ನಲಾಗಿದೆ. ಮಂಕಿ ಪಾಕ್ಸ್ ವೈರಸ್ ಬಹುತೇಕ ಸ್ಮಾಲ್ ಪಾಕ್ಸ್ ವೈರಸ್ ಅನ್ನು ಹೋಲುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಇದನ್ನೂ ಓದಿ-Nuclear Plant Leakage Alert! ಮತ್ತೆ ಸಂಚು ರೂಪಿಸುತ್ತಿದೆಯೇ China? Corona ಬಳಿಕ ಇದೀಗ Nuclear Disaster ಅಪಾಯ!

ಎಷ್ಟು ಅಪಾಯಕಾರಿ ಈ ವೈರಸ್? (Monkeypox Death Rate)
ವಿಜ್ಞಾನಿಗಳು ಹೇಳುವ ಪ್ರಕಾರ ಈ ಸೊಂಕು ತಗಲುವ ಸಾಧ್ಯತೆ ತೀರಾ ವಿರಳವಾಗಿದೆ. ಆದರೆ, ಈ ಕಾಯಿಲೆಯಲ್ಲಿ ಮರಣದ ಪ್ರಮಾಣ ಶೇ.11 ರಷ್ಟು ಇರುವ ಸಾಧ್ಯತೆ ಇದೆ.  ಇಲ್ಲಿ ನೆಮ್ಮದಿಯ ಸಂಗತಿ ಎಂದರೆ, ಸ್ಮಾಲ್ ಪಾಕ್ಸ್ (Smallpox Virus) ನಿಂದ ರಕ್ಷಣೆ ಒದಗಿಸುವ ವ್ಯಾಕ್ಸಿನ್ ವ್ಯಾಕ್ಸಿನೀಯಾ (Vaccinia Vaccine), ಮಂಕಿಪಾಕ್ಸ್ ವಿರುದ್ಧವೂ ಕೂಡ ಪರಿಣಾಮಕಾರಿಯಾಗಿದೆ .

ಇದನ್ನೂ ಓದಿ- Coronavirus New Strain: Chinaದಲ್ಲಿ ನೂತನ ಕೊರೊನಾ ರೂಪಾಂತರಿಯ ಆತಂಕ, ಜನರನ್ನು ಮನೆಯಲ್ಲಿ ಬಂಧಿಸಲು ಡ್ರೋನ್ ನಿಯೋಜನೆ

ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳೇನು? (Monkeypox Symptoms)
ಮಂಕಿಪಾಕ್ಸ್ ವೈರಸ್ ಗೆ ತುತ್ತಾದ ರೋಗಿಗಳಲ್ಲಿ ಜ್ವರ, ತಲೆನೋವು, ಸೊಂಟ ನೋವು, ಸ್ನಾಯು ಸೆಳೆತ ಹಾಗೂ ನೋವು ಇವು ಆರಂಭಿಕ ಲಕ್ಷಣಗಳಾಗಿವೆ. ಇದರಲ್ಲಿಯೂ ಕೂಡ ಚಿಕನ್ ಪಾಕ್ಸ್ (Chickenpox Virus) ರೀತಿಯಲ್ಲಿ ಮೈಮೇಲೆ ಕೆಂಪುಗುಳ್ಳೆಗಳು ಏಳುತ್ತವೆ. ಸಂಪೂರ್ಣ ಶರೀರದ ಜೊತೆಗೆ ಮುಖದ ಮೇಲೂ ಕೂಡ ಗುಳ್ಳೆಗಳು ಏಳುತ್ತವೆ. ಈ ವೈರಸ್ 14 ರಿಂದ 21 ದಿನಗಳವರೆಗೆ ಇರುತ್ತದೆ.

ಇದನ್ನೂ ಓದಿ-ಬಾವಲಿಗಳಲ್ಲಿ ಹೊಸ ಕೊರೊನಾ ಪತ್ತೆ ಹಚ್ಚಿದ ಚೀನಾ ಸಂಶೋಧಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News