Russia Tests Nasal Spray Covid-19 Vaccine - ಮುಂಬರುವ ದಿನಗಳಲ್ಲಿ ಮಕ್ಕಳಿಗೆ ಕೊರೊನಾ ವೈರಸ್ ನಿಂದ ಭಾರಿ ರಕ್ಷಣೆ ಸಿಗಲಿದೆ. ಇದು ಮೂಗಿನಲ್ಲಿ ಸ್ಪ್ರೇ ಮಾಡುವ ಕೊರೊನಾ ವ್ಯಾಕ್ಸಿನ್ ನಿಂದ ಸಾಧ್ಯವಾಗಲಿದೆ. ವಾಸ್ತವದಲ್ಲಿ ರಷ್ಯಾ ಮಕ್ಕಳನ್ನು ಕೊರೊನಾ ವೈರಸ್ ನಿಂದ ಕಾಪಾಡುವ ನಿಟ್ಟಿನಲ್ಲಿ ನ್ Nasal Spray Covid-19 ವ್ಯಾಕ್ಸಿನ್ ನ ಯಶಸ್ವಿ ಪರೀಕ್ಷೆ ನಡೆಸಿದೆ ಎನ್ನಲಾಗಿದೆ. ಈ ನೆಸಲ್ ಸ್ಪ್ರೆ ವ್ಯಾಕ್ಸಿನ್ 8 ರಿಂದ 12 ವರ್ಷದೊಳಗಿನ ಮಕ್ಕಳಿಗೆ ವರದಾನ ಸಾಬೀತಾಗಲಿದೆ. ರೈಟರ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ರಷ್ಯಾ (Russia) ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಪ್ರಾಡಕ್ಟ್ ಬಿಡುಗಡೆಗೊಳಿಸಲು ಯೋಜನೆ ರೂಪಿಸುತ್ತಿದೆ. Sputnik V ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು ಈ ಮಾಹಿತಿಯನ್ನು ನೀಡಿದ್ದಾರೆ.
ಚುಚ್ಚುಮದ್ದು ಅಲ್ಲ ಮೂಗಿನ ಮೂಲಕ ನೀಡಲಾಗುವುದು ಈ ಔಷಧಿ
Sputnik V ಅನ್ನು ಅಭಿವೃದ್ಧಿಪಡಿಸಿದ ಗಾಮಾಲೆಯಾ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್, ಇದು ಮಕ್ಕಳಿಗಾಗಿ ತಯಾರಿಸಲಾದ ವಿಶೇಷ ಸ್ಪ್ರೇ ಆಗಿದ್ದು, ಚುಚ್ಚುಮದ್ದನ್ನು ಹೊರತುಪಡಿಸಿ, ಮೂಗಿನ ಮೂಲಕ ನೀಡಬಹುದಾಗಿದೆ ಎಂದಿದ್ದಾರೆ ಎಂದು TASS ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುದ್ದಿಯ ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆಯಲ್ಲಿ, ಮಕ್ಕಳ ಶಾಟ್ ಸೆಪ್ಟೆಂಬರ್ 15 ರೊಳಗೆ ವಿತರಣೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಗಿಂಟ್ಸ್‌ಬರ್ಗ್ ಹೇಳಿದ್ದಾರೆ ಎನ್ನಲಾಗಿದೆ.
ಇದುವರೆಗೆ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ
8 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಈ ಸ್ಪ್ರೇ ಅನ್ನು ರಿಸರ್ಚ್ ತಂಡ ಟ್ರಯಲ್ ನಡೆಸಿದೆ ಮತ್ತು ಟೆಸ್ಟ್ ಗ್ರೂಪ್ ನಲ್ಲಿ ಯಾರಿಗೂ ಕೂಡ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ವ್ಯಾಕ್ಸಿನ್ ನೀಡಿದ ಬಳಿಕ ಮಕ್ಕಳಿಗೆ ಬರುವ ಸಾಮಾನ್ಯ ಲಕ್ಷಣವಾದ ಜ್ವರವೂ ಕೂಡ ಇದರಲ್ಲಿ ಕಂಡುಬಂದಿಲ್ಲ ಎನ್ನಲಾಗಿದೆ. ಆದರೆ, ಈ ಪರೀಕ್ಷೆಯಲ್ಲಿ ಎಷ್ಟು ಮಕ್ಕಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂಬುದರ ಮಾಹಿತಿ ಮಾತ್ರ ಗಿಂಟ್ಸ್‌ಬರ್ಗ್ ಹೇಳಿಲ್ಲ.
ಭಾರತದಲ್ಲಿ ಮಕ್ಕಳ ಮೇಲೆ ನಡೆಯುತ್ತಿದೆ ವ್ಯಾಕ್ಸಿನ್ ಟ್ರಯಲ್ (Covid-19 Vaccine Trail On Children)
ಭಾರತದಲ್ಲಿ ಮಕ್ಕಳ ಮೇಲಿನ ಕರೋನಾ ಲಸಿಕೆಯ (Covid-19 Vaccine) ಪ್ರಯೋಗ ಇಂದಿನಿಂದ ದೇಶದ ಅತಿದೊಡ್ಡ ಆಸ್ಪತ್ರೆಯಾದ ಏಮ್ಸ್ ನಲ್ಲಿ ಪ್ರಾರಂಭವಾಗುತ್ತಿದೆ. 6 ರಿಂದ 12 ವರ್ಷ ವಯಸ್ಸಿನ ಮಕ್ಕಳ ಮೇಲೆ ಈ ಪ್ರಯೋಗವನ್ನು ಮಾಡಲಾಗುವುದು. ವರದಿಗಳ ಪ್ರಕಾರ, ಸುಮಾರು 5 ರಿಂದ 10 ಮಕ್ಕಳನ್ನು ಈ ಟ್ರಯಲ್ ನಲ್ಲಿ ಶಾಮೀಲುಗೊಳಿಸಲಾಗುವುದು. ಶನಿವಾರದವರೆಗೆ 10 ಮಕ್ಕಳಿಗೆ ಲಸಿಕೆ ಪ್ರಮಾಣವನ್ನು ನೀಡಲಾಗಿದ್ದು, ಈ ಮಕ್ಕಳು 12 ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ. ಇದಲ್ಲದೆ, ಭಾರತದ ಅನೇಕ ನಗರಗಳಲ್ಲಿಯೂ ಕೂಡ ಮಕ್ಕಳ ಮೇಲೆ ಪ್ರಯೋಗಗಳನ್ನು ಸಹ ನಡೆಸಲಾಗುತ್ತಿದೆ.
ಇದನ್ನೂ ಓದಿ- Coronavirus New Strain: Chinaದಲ್ಲಿ ನೂತನ ಕೊರೊನಾ ರೂಪಾಂತರಿಯ ಆತಂಕ, ಜನರನ್ನು ಮನೆಯಲ್ಲಿ ಬಂಧಿಸಲು ಡ್ರೋನ್ ನಿಯೋಜನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.