Nigeria massacre: ದೇಶದ ನೈಋತ್ಯ ಭಾಗದಲ್ಲಿರುವ ಕ್ಯಾಥೋಲಿಕ್ ಚರ್ಚ್‌ನಲ್ಲಿ ಭಾನುವಾರ ಸಾಮೂಹಿಕ ಗುಂಡಿನ ದಾಳಿ ನಡೆದಿದೆ., ಬಂದೂಕುಧಾರಿಗಳು ಕನಿಷ್ಠ 50 ಜನರನ್ನು ಕೊಂದಿದ್ದಾರೆ ಎಂದು ನೈಜೀರಿಯಾ ಸರ್ಕಾರ ಹೇಳಿದೆ.


COMMERCIAL BREAK
SCROLL TO CONTINUE READING

ಒಂಡೋ ರಾಜ್ಯದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್​ನಲ್ಲಿ ಕ್ರಿಶ್ಚಿಯನ್ನರಿಗೆ ವಿಶೇಷ ದಿನವಾದ ಪೆಂಟೆಕೋಸ್ಟ್ ಸಂಡೇ ದಿನದಂದು ಈ ದಾಳಿ ನಡೆದಿದೆ. ವಿಶೇಷ ದಿನದ ಹಿನ್ನೆಲೆ ಚರ್ಚ್‌ನಲ್ಲಿ ಭಕ್ತರು ಪ್ರಾರ್ಥನೆ ಮಾಡುತ್ತಿದ್ದರು. ಈ ವೇಳೆ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಬಾಂಬ್​ ಎಸೆದಿದ್ದಾರೆ. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಶಾಸಕ ಒಗುನ್ಮೊಲಸುಯಿ ಒಲುವೊಲೆ ಟ್ವೀಟ್‌ ಮಾಡಿದ್ದಾರೆ. 


ಇದನ್ನೂ ಓದಿ: Layerr Shot Deo Ad: ಬಲಾತ್ಕಾರವನ್ನು ಉತ್ತೇಜಿಸುವ ಡಿಯೋ ಜಾಹೀರಾತುಗಳಿಗೆ ಸರ್ಕಾರದಿಂದ ಕಡಿವಾಣ!


ಘಟನೆಯನ್ನು "ದೊಡ್ಡ ಹತ್ಯಾಕಾಂಡ" ಎಂದು ಕರೆದಿರುವ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಅವರು, ದಾಳಿಯ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ವ್ಯಕ್ತಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.


 


 160 ಭಾಷೆಗಳಲ್ಲಿ ರಿಲೀಸ್..! ತನ್ನದೇ ದಾಖಲೆ ಉಡೀಸ್ ಮಾಡುತ್ತಾ 'ಅವತಾರ್‌-2'..?


ಈ ಎಲ್ಲದರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದು ವೈರಲ್‌ ಆಗಿದ್ದು, ಇದರಲ್ಲಿ ಬಂದೂಕುಧಾರಿಯೊಬ್ಬ ಗನ್​ ಹಿಡಿದು ದಾಳಿ ನಡೆಸಲು ಯತ್ನಿಸುತ್ತಿರುತ್ತಾನೆ. ಈ ವೇಳೆ ಆತನ ಹಿಂದಿನಿಂದ ಯೋಧನೊಬ್ಬ ಬಂದೂಕುಧಾರಿಯನ್ನು ಸೆರೆ ಹಿಡಿಯುತ್ತಿರುತ್ತಾನೆ. ನಂತರ ಅಲ್ಲಿದ್ದ ಜನ ಬಂದೂಕುಧಾರಿಗೆ ಥಳಿಸುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.