ನವದೆಹಲಿ:  Nirav Modi Extradition To India - ಬ್ಯಾಂಕ್ ಗಳಿಗೆ ವಂಚನೆ ಎಸಗಿ ದೇಶ ಬಿಟ್ಟು ಪಲಾಯನಗೈದ ವಜ್ರ ವ್ಯಾಪಾರಿ ನಿರವ್ ಮೋದಿ ಅವನನ್ನು ಭಾರತಕ್ಕೆ ಕರೆತರುವ ದಾರಿ ಇದೀಗ ಸುಗಮವಾದಂತಾಗಿದೆ. ಈ ಕುರಿತಾದ ಭಾರತದ ಮನವಿಗೆ ಬ್ರಿಟನ್ ಗೃಹ ಸಚಿವರು (Britain Home Minister) ಅನುಮೋದನೆ ನೀಡಿದ್ದಾರೆ. ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಯುಕೆ ಗೃಹ ಸಚಿವರಾಗಿರುವ ಪ್ರೀತಿ ಪಟೇಲ್ ಶುಕ್ರವಾರ ದೃಢಪಡಿಸಿದ್ದಾರೆ ಎಂದು CBI ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮೊದಲು ಈ ಕುರಿತಾದ ಪ್ರಕರಣದ ವಿಚಾರಣೆ ದದೆಸಿದ್ದ ಲಂಡನ್ ಮೂಲದ ನ್ಯಾಯಾಲಯ ನಿರವ್ ಮೋದಿನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿತ್ತು. ಈ ಕುರಿತಾಗಿ ನಿರವ್ ಮೋದಿ ಮಂಡಿಸಿದ್ದ ಎಲ್ಲಾ ವಾದಗಳನ್ನು  ತಿರಸ್ಕರಿಸಿದ್ದ ನ್ಯಾಯಾಲಯ, ಭಾರತೀಯ ಜೈಲಿನಲ್ಲಿ ಅವನನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು ಎಂದು ಹೇಳಿತ್ತು. 


COMMERCIAL BREAK
SCROLL TO CONTINUE READING

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 14 ಸಾವಿರ ಕೋಟಿ ರೂ.ಗೂ ಅಧಿಕ ವಂಚನೆ ಎಸಗಿದ ಆರೋಪ ನಿರವ್ ಮೋದಿ (Nirav Modi) ಹಾಗೂ ಅವರ ಮಾವ ಮೆಹುಲ್ ಚೋಕ್ಸಿ (Mehul Choksi) ಎದುರಿಸುತ್ತಿದ್ದಾರೆ. ಗ್ಯಾರಂಟಿ ಪತ್ರ ನೀಡುವ ಮೂಲಕ ಅವರು ಈ ವಂಚನೆ ಎಸಗಿದ್ದಾರೆ. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮೇಲೆ ಬ್ಯಾಂಕ್ ವಂಚನೆ ಹಾಗೂ ಮನಿ ಲಾಂಡ್ರಿಂಗ್ ಕಾಯ್ದೆಯ ಅಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಇದಲ್ಲದೆ ನಿರಾವ್ ಮೋದಿ ವಿರುದ್ಧ ಭಾರತದಲ್ಲಿ ಇತರ ಪ್ರಕರಣಗಳೂ ಕೂಡ ದಾಖಲಾಗಿವೆ. ಹೀಗಾಗಿ ನಿರವ್ ಮೋದಿ ಕುರಿತು ಆಗಸ್ಟ್ 2018ರಲ್ಲಿ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿದ್ದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆತನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಕೋರಿದ್ದವು.


ಇದನ್ನೂ ಓದಿ- ಭಾರತದಲ್ಲಿ Nirav Modiಯನ್ನು ಯಾವ ಜೈಲು, ಎಷ್ಟನೆ ನಂಬರ್ ಬರಾಕ್ ನಲ್ಲಿಡಲಾಗುವುದು?


ಹಗರಣದ ನಂತರ ಭಾರತದಿಂದ ಪಲಾಯನ ಮಾಡಿದ್ದ ನೀರವ್ ಮೋದಿನನ್ನು ಪ್ರಸ್ತುತ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿ ಇರಿಸಲಾಗಿದೆ. ಹಸ್ತಾಂತರವನ್ನು ತಪ್ಪಿಸಲು ನೀರವ್ ಮೋದಿ ತಾವು ಮಾನಸಿಕ ಅಸ್ವಸ್ಥರು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಷ್ಟೇ ಅಲ್ಲ ಭಾರತದ ಜೈಲಿನಲ್ಲಿ ಸೌಲಭ್ಯಗಳಿಲ್ಲ ಎಂದೂ ಕೂಡ ಹೇಳಿಕೊಂಡಿದ್ದಾನೆ. ಆದರೆ, ನೀರವ್ ಮೋದಿ ಮಂಡಿಸಿದ್ದ  ಈ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ- PNB ಹಗರಣ: ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದ ನೀರವ್ ಮೋದಿ


ಆರ್ಥರ್ ರೋಡ ಜೈಲು ಸಜ್ಜಾಗಿದೆ
ಭಾರತಕ್ಕೆ ಕರೆತಂದ ಬಳಿಕ ನಿರಾವ್ ಮೋದಿ ಯಾವ ಜೈಲಿನಲ್ಲಿರಲಿದ್ದಾನೆ, ಯಾವ ಬರಾಕ್ ನಲ್ಲಿರಲಿದ್ದಾನೆ ಎಂಬುದು ಈಗಾಗಲೇ ನಿಗದಿಪಡಿಸಲಾಗಿದೆ. ನಿರವ್ ಮೋದಿ ಯನ್ನು ಕಂಬಿಗಳ ಹಿಂದೆ ತಳ್ಳಲು ಮುಂಬೈನ ಆರ್ಥರ್ ರೋಡ ಜೈಲಿನಲ್ಲಿ ವಿಶೇಷ ಸೆಲ್ ರಚಿಸಲಾಗಿದೆ. ಇಲ್ಲಿನ ಬರಾಕ್ ನಂಬರ್ 12 ರಲ್ಲಿ ಇರುವ ಮೂರು ಸೆಲ್ ಗಳ ಪೈಕಿ ಒಂದರಲ್ಲಿ ಆತನನ್ನು ಇರಿಸಲಾಗುವುದು. ಆರ್ಥರ್ ರೋಡ ಜೈಲಿನ ಬರಾಕ್ ನಂ.12 ಹೈ ಸೆಕ್ಯೂರಿಟಿ ಬರಾಕ್ ಆಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ -ಮಲ್ಯ, ಚೌಕ್ಸಿ,ಮೋದಿ ಅಷ್ಟೇ ಅಲ್ಲ ದೇಶ ಬಿಟ್ಟು ಓಡ್ಹೋದವರ ಸಂಖ್ಯೆ ಎಷ್ಟು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.