ನವದೆಹಲಿ: Nirav Modi Extradition Latest Update - ಕೋಟ್ಯಂತರ ವಂಚನೆ ಎಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಜ್ರ ವ್ಯಾಪಾರಿ ನಿರವ್ ಮೋದಿ (Nirav Modi)ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಒಪ್ಪಿಕೊಂಡ ಬಳಿಕ ಆತನನ್ನು ಭಾರತಕ್ಕೆ ಕರೆತರುವ ಮಾರ್ಗ ಸುಲಭವಾಗಿದೆ. ಹಸ್ತಾಂತರ ಪ್ರಕ್ರಿಯೆಯ (Nirav Modi Extradition) ಪ್ರಕರಣದಲ್ಲಿ ನಿರವ್ ಗೆ ಹಿನ್ನಡೆಯಾದ ಬಳಿಕ, ಭಾರತದಲ್ಲಿಯೂ ಕೂಡ ಆತನನ್ನು ಭಾರತಕ್ಕೆ ಕರೆತರಲು ಸ್ಥಳೀಯ ಆಡಳಿತ ಸಿದ್ಧತೆ ನಡೆಸತೊಡಗಿದೆ. ಭಾರತಕ್ಕೆ ಆತನನ್ನು ಕರೆತಂದ ಬಳಿಕ ಆತನನ್ನು ಯಾವ ಜೈಲಿನಲ್ಲಿ ಇಡಲಾಗುವುದು ಹಾಗೂ ಯಾವ ಬರಾಕ್ ಸಂಖ್ಯೆಲ್ಲಿ ಇಡಲಾಗುವುದು ಎಂಬುದರ ಕುರಿತಾದ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ (PNB SCam) ಮೋಸ್ಟ ವಾಂಟೆಡ್ ಆಗಿರುವ ನಿರವ್ ಮೋದಿಯನ್ನು ಕಂಬಿ ಹಿಂದಕ್ಕೆ ತಳ್ಳಲು ಮುಂಬೈನ ಆರ್ಥರ್ ರೋಡ್ ಜೈಲಿ (Arthur Road Jail) ನಲ್ಲಿ ಒಂದು ವಿಶೇಷ ಸೆಲ್ ತಯಾರಿಸಲಾಗಿದೆ.
ಇದನ್ನೂ ಓದಿ- PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?
ಈ ಕುರಿತು ಮಾಹಿತಿ ನೀಡಿರುವ ಜೈಲು ಅಧಿಕಾರಿಯೊಬ್ಬರು, ನಿರವ್ ಮೋದಿಯನ್ನು ಭಾರತಕ್ಕೆ ಕರೆತಂದ ಬಳಿಕ ಆತನನ್ನು ಬರಾಕ್ ನಂ.12ರ ಮೂರು ಸೆಲ್ ಗಳ ಪೈಕಿ ಒಂದರಲ್ಲಿ ಆತನನ್ನು ಇರಿಸಲಾಗುವುದು. ಆರ್ಥರ್ ರೋಡ ಜೈಲಿನ ಈ ಸೆಲ್ ಒಂದು ಹೈ ಸೆಕ್ಯೋರಿಟಿ ಸೆಲ್ ಆಗಿದೆ. ಪಲಾಯನಗೈದಿರುವ ನಿರವ್ ಮೋದಿಯನ್ನು ಕಂಬಿ ಹಿಂದಕ್ಕೆ ತಳ್ಳಲು ಸಂಪೂರ್ಣ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಆತನ ಹಸ್ತಾಂತರ ಪ್ರಕ್ರಿಯೆಗೆ ಇನ್ನೂ ಎರಡು ತಿಂಗಳ ಕಾಲಾವಕಾಶ ಬೇಕಾಗಲಿದೆ. ಈ ನಡುವೆ ಆತನ ಬಳಿ ಬ್ರಿಟನ್ ಹೈಕೋರ್ಟ್ ಮೊರೆ ಹೋಗುವ ಅವಕಾಶ ಕೂಡ ಇದೆ.
ಇದನ್ನು ಓದಿ- ಮಲ್ಯ, ಚೌಕ್ಸಿ,ಮೋದಿ ಅಷ್ಟೇ ಅಲ್ಲ ದೇಶ ಬಿಟ್ಟು ಓಡ್ಹೋದವರ ಸಂಖ್ಯೆ ಎಷ್ಟು ಗೊತ್ತಾ?
ಜೈಲಿನಲ್ಲಿ ಆತನಿಗೆ ಏನೇನು ಸಿಗಲಿದೆ
ಕೈದಿಗಳ ಸಂಖ್ಯೆ ಕಡಿಮೆ ಇರುವ ಜೈಲಿನಲ್ಲಿ ನಿರವ್ ಮೋದಿಯನ್ನು ಇಡಲಾಗುವುದು ಎಂದು ಜೈಲು ಅಧಿಕಾರಿಗಳು ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಆತನಿಗೆ ಮೂರು ಸ್ಕ್ವೆಯರ್ ಮೀಟರ್ ವೈಯಕ್ತಿಕ ಸ್ಥಾನ ಸಿಗುವ ಸಾಧ್ಯತೆ ಇದೆ. ಜೈಲಿನಲ್ಲಿ ಆತನಿಗೆ ಒಂದು ಹತ್ತಿಯ ಚಾಪೆ, ದಿಂಬು, ಬೆಡ್ ಶೀಟ್ ಹಾಗೂ ಕಂಬಳಿ ನೀಡಲಾಗುವುದು. ಆತನ ಜೈಲು ಕೊಠಡಿಯಲ್ಲಿ ವೆಂಟಿಲೆಶನ್, ಆತನ ಸಾಮಾನುಗಳನ್ನು ಇಡಲು ಒಂದು ಸ್ಟೋರೇಜ್ ಹಾಗೂ ಸಾಕಷ್ಟು ಲೈಟ್ ಸೌಕರ್ಯ ಇರಲಿದೆ.
ಇದನ್ನೂ ಓದಿ- 1,350 ಕೋಟಿ ರೂ. ಮೌಲ್ಯದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಆಭರಣಗಳು ಭಾರತಕ್ಕೆ ವಾಪಾಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.