ನವದೆಹಲಿ: ಭಾರತವು ಈ ವರ್ಷ 75 ಡಿಜಿಟಲ್ ಬ್ಯಾಂಕ್‌ಗಳನ್ನು ಸ್ಥಾಪಿಸಲು ಯೋಚಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಥಿಂಕ್ ಟ್ಯಾಂಕ್ ಅಟ್ಲಾಂಟಿಕ್ ಕೌನ್ಸಿಲ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬ್ಯಾಂಕಿಂಗ್ ಜೊತೆಗೆ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ (NBFC) ಸ್ಥಾಪಿಸುವ ಯೋಜನೆ ಸಹ ಇದೆ ಎಂದು ತಿಳಿಸಿದ್ದಾರೆ.  


COMMERCIAL BREAK
SCROLL TO CONTINUE READING

75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ  


ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್‌ಗಳನ್ನು ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಕೊರೊನಾ ಸಾಂಕ್ರಾಮಿಕ ರೋಗ ದೇಶದಾದ್ಯಂತ ಹರಡುವ ಮೊದಲು ಭಾರತವು ಡಿಜಿಟಲೀಕರಣವನ್ನು ವೇಗವಾಗಿ ಹೆಚ್ಚಿಸಿತ್ತು. ನಾವು ಆರ್ಥಿಕ ಸೇರ್ಪಡೆಯ ಕಾರ್ಯಕ್ರಮವನ್ನು ತಂದಿದ್ದೇವೆ. ಇದು ಪ್ರಪಂಚದಲ್ಲಿಯೇ ಹಿಂದೆಂದೂ ಎಲ್ಲಿಯೂ ಕಂಡುಬಂದಿಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ.


ಇದನ್ನೂ ಓದಿ: ಸಿಂಗಾಪುರದ ಫೋರ್ಟ್ ಕ್ಯಾನಿಂಗ್ ಪಾರ್ಕ್‌ನಲ್ಲಿ ಕನ್ನಡಿಗರ ಚಾರಣ


ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ


ಭಾರತದ 3 ದೊಡ್ಡ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ಆಧಾರ್, ಯುಪಿಐ ಮತ್ತು ಕೋವಿನ್ ಪ್ರಪಂಚದ ಮುಂದೆ ಕಾಣಿಸಿಕೊಂಡಿವೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಮನ್ನಣೆ ದೊರೆಯಿತು. ಗಮನಾರ್ಹವಾಗಿ ಆಧಾರ್ ಅತಿದೊಡ್ಡ ಅನನ್ಯ ಡಿಜಿಟಲ್ ಗುರುತಾಗಿದ್ದರೆ, UPI ಅತಿದೊಡ್ಡ ಡಿಜಿಟಲ್ ಪಾವತಿ ಅಪ್ಲಿಕೇಶನ್ ಆಗಿದೆ. ಕೋವಿನ್ ಮೂಲಕ ದೇಶದಲ್ಲಿ 150 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಡಿಜಿಟಲ್ ಕಾರ್ಯಕ್ರಮವು ಪ್ರತಿಯೊಂದು ವಿಭಾಗದ ಜನರ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ ಎಂದು ಸೀತಾರಾಮನ್ ಇದೇ ವೇಳೆ ಹೇಳಿದರು.


ಶ್ರೀಲಂಕಾಕ್ಕೆ ಸಹಾಯ ಮಾಡುವ ವಿಶ್ವಾಸ


ಇದಕ್ಕೂ ಮುನ್ನ ನಡೆದ ಐಎಂಎಫ್ ಸ್ಪ್ರಿಂಗ್ ಮೀಟ್‌ನಲ್ಲಿ ಶ್ರೀಲಂಕಾದ ಹಣಕಾಸು ಮಂತ್ರಿ ಅಲಿ ಸಬ್ರಿ ಅವರನ್ನು ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಬಿಕ್ಕಿಟ್ಟಿನ ಸಂದರ್ಭದಲ್ಲಿ ಆಪ್ತಸ್ನೇಹಿತ ರಾಷ್ಟ್ರ ಶ್ರೀಲಂಕಾಕ್ಕೆ ಭಾರತವು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ನೀಡಲು ಪ್ರಯತ್ನಿಸುತ್ತದೆ ಎಂದು ಸೀತಾರಾಮನ್ ಭರವಸೆ ನೀಡಿದರು.


ಇದನ್ನೂ ಓದಿ: ಮೇ ತಿಂಗಳದ ಮೊದಲ ವಾರದಲ್ಲಿ 3 ಯುರೋಪ್ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.