ಮೇ ತಿಂಗಳದ ಮೊದಲ ವಾರದಲ್ಲಿ 3 ಯುರೋಪ್ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಮೇ ಮೊದಲ ವಾರದಲ್ಲಿ 3 ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.ಈ ಭೇಟಿಯ ವೇಳೆ ಅವರು ಭಾರತ- ನಾರ್ಡಿಕ್ ನ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

Last Updated : Apr 20, 2022, 01:41 AM IST
  • ಪ್ರಧಾನಿ ನರೇಂದ್ರ ಮೋದಿ ಅವರು ಮೇ ಮೊದಲ ವಾರದಲ್ಲಿ 3 ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ.
  • ಈ ಭೇಟಿಯ ವೇಳೆ ಅವರು ಭಾರತ ನಾರ್ಡಿಕ್ ನ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
 ಮೇ ತಿಂಗಳದ ಮೊದಲ ವಾರದಲ್ಲಿ 3 ಯುರೋಪ್ ದೇಶಗಳಿಗೆ ಪ್ರಧಾನಿ ಮೋದಿ ಭೇಟಿ  title=
file photo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮೇ ಮೊದಲ ವಾರದಲ್ಲಿ 3 ಯುರೋಪಿಯನ್ ರಾಷ್ಟ್ರಗಳಾದ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ಭೇಟಿಯ ವೇಳೆ ಅವರು ಭಾರತ-ನಾರ್ಡಿಕ್ ನ ಎರಡನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎಲ್ಲಾ 5 ನಾರ್ಡಿಕ್ ದೇಶಗಳಾದ ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್ ಮತ್ತು ಐಸ್‌ಲ್ಯಾಂಡ್ ನ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಈ ಶೃಂಗಸಭೆಯು ಶುದ್ಧ ತಂತ್ರಜ್ಞಾನ, ಹವಾಮಾನ ಬದಲಾವಣೆ, ನವೀಕರಿಸಬಹುದಾದಂತಹ ಸಂಪನ್ಮೂಲಗಳ ಮೇಲೆ ಕೇಂದ್ರೀಕರಿಸುತ್ತದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಮೊದಲ ಭಾರತ-ನಾರ್ಡಿಕ್ ಶೃಂಗಸಭೆಯು 2018 ರ ಏಪ್ರಿಲ್‌ನಲ್ಲಿ ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದಿತ್ತು, ಶೃಂಗಸಭೆಯು ವಿಶೇಷವಾಗಿ ನಾರ್ಡಿಕ್ ಅಥವಾ ಉತ್ತರ ಯುರೋಪಿಯನ್ ದೇಶಗಳ ಎಲ್ಲಾ ದೇಶಗಳೊಂದಿಗೆ ಭಾರತವನ್ನು ಒಟ್ಟುಗೂಡಿಸುವ ಸ್ವರೂಪವಾಗಿದೆ.

ಕಳೆದ 2 ವರ್ಷಗಳಲ್ಲಿ, ಭಾರತೀಯ ಪ್ರಧಾನಿ ಮೋದಿ ಅವರು 3 ನಾರ್ಡಿಕ್ ದೇಶಗಗಳಾದ ಡೆನ್ಮಾರ್ಕ್, ಸ್ವೀಡನ್ ಮತ್ತು ಫಿನ್‌ಲ್ಯಾಂಡ್, ಗಳೊಂದಿಗೆ ವರ್ಚುವಲ್ ಶೃಂಗಸಭೆಗಳನ್ನು ನಡೆಸಿರುವುದು ಈ ದೇಶಗಳ ಜೊತೆಗಿನ ಭಾರತೀಯ ತ್ರಿಪಕ್ಷೀಯ ಸಂಬಂಧದ ಮಹತ್ವವನ್ನು ಹೇಳುತ್ತದೆ.

ಸೆಪ್ಟೆಂಬರ್ 2020 ರಲ್ಲಿ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಭಾರತ ಮತ್ತು ಡೆನ್ಮಾರ್ಕ್ ವಿಶಿಷ್ಟವಾದ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಹಾಗಾಗಿ ಈ ಪಾಲುದಾರಿಕೆಯು ನವೀಕರಿಸಬಹುದಾದ ಶಕ್ತಿಯಂತಹ ವಲಯಗಳಲ್ಲಿ ಹಸಿರು ತಂತ್ರಜ್ಞಾನಗಳು ಮತ್ತು ಸುಸ್ಥಿರ ಪರಿಹಾರಗಳ ಮೇಲೆ ಕೇಂದ್ರೀಕರಿಸುತ್ತದೆ. ಇನ್ನು ಪ್ರಧಾನಿ ಮೋದಿ ಬರ್ಲಿನ್‌ಗೆ ಅಂತರ-ಸರ್ಕಾರಿ ಸಮಾಲೋಚನೆಗಾಗಿ (ಐಜಿಸಿ) ಭೇಟಿ ನೀಡುತ್ತಿದ್ದಾರೆ, ಈ ಸಮಯದಲ್ಲಿ ಅವರು ಹೊಸ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಮಾತುಕತೆಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-Healthy Foods: ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಲಾಭಕಾರಿಯಾಗಿವೆ, ಇಂದೇ ನಿಮ್ಮ ಡಯಟ್ ನಲ್ಲಿ ಸೇರಿಸಿ

ಇನ್ನೊಂದೆಡೆಗೆ ರಕ್ಷಣೆಯಿಂದ ಶಿಕ್ಷಣದವರೆಗೆ ಭಯೋತ್ಪಾದನೆಯನ್ನು ಎದುರಿಸುವವರೆಗೆ ಹಲವಾರು ಕ್ಷೇತ್ರಗಳಲ್ಲಿ ಫ್ರಾನ್ಸ್ ಭಾರತದ ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ. ಇದರ ಭಾಗವಾಗಿ ಪ್ರಧಾನಮಂತ್ರಿಯವರು 2019 ರ G-7 ಶೃಂಗಸಭೆಗೆ ಅಧ್ಯಕ್ಷ ಮ್ಯಾಕ್ರನ್ ಅವರ ವಿಶೇಷ ಆಹ್ವಾನದ ಮೇರೆಗೆ ಆಗಸ್ಟ್ 2019 ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ಕೊರೋನಾದ ಎರಡನೇ ಅಲೆ ಇದ್ದಾಗ ಫ್ರಾನ್ಸ್ ದೇಶವು ಭಾರತದ ಆಸ್ಪತ್ರೆಗಳಿಗೆ 18 ಆಮ್ಲಜನಕ ಸ್ಥಾವರಗಳನ್ನು ಒದಗಿಸುವ ಮೂಲಕ ದೇಶದಲ್ಲಿನ ಆಸ್ಪತ್ರೆಗೆಗಳಲ್ಲಿ ಇರುವ ಆಕ್ಸಿಜೆನ್ ಕೊರತೆಯನ್ನು ನೀಗಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರಧಾನಮಂತ್ರಿ ಮೋದಿ ಅವರ ಭೇಟಿಗೆ ಮುಂಚಿತವಾಗಿ, ಇಬ್ಬರು ಉನ್ನತ ಯುರೋಪಿಯನ್ ನಾಯಕರಾದ ಯುಕೆ ಪಿಎಂ ಬೋರಿಸ್ ಜಾನ್ಸನ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಯುಕೆ ಪ್ರಧಾನಿ ಏಪ್ರಿಲ್ 21 ರಿಂದ 22 ರವರೆಗೆ ಭಾರತ ಪ್ರವಾಸದಲ್ಲಿದ್ದರೆ, ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಏಪ್ರಿಲ್ 24 ರಿಂದ 25 ರವರೆಗೆ ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News