ಉತ್ತರ ಕೊರಿಯಾ : ಉತ್ತರ ಕೊರಿಯಾದ  ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಅವರು ಹಲವಾರು ರಹಸ್ಯಗಳನ್ನು ಹೊಂದಿರುವ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಮಗಳ ಕೈಗಳ ಹಿಡಿದು ನಡೆದಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿವೆ. ಅಲ್ಲದೆ, ಈ ಕುರಿತು ಇಂಟರ್ ನ್ಯಾಷನಲ್ ಮಟ್ಟದ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ಫೋಟೋದಲ್ಲಿ ಕಿಮ್‌ ಜಾಂಗ್‌ ಉನ್‌ ಅವರ ಮಗಳು ಬಿಳಿ ಪಫರ್ ಜಾಕೆಟ್‌ ತೊಟ್ಟಿದ್ದಾರೆ. ಮಿಲಿಟರಿ ಯಂತ್ರಾಂಶವನ್ನು ನೋಡುತ್ತಿರುವಾಗ ಕಿಮ್‌ನ ಕೈಯನ್ನು ಹಿಡಿದಿದ್ದಾರೆ. ಶುಕ್ರವಾರದಂದು ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯ ಮೇಲ್ವಿಚಾರಣೆಯಲ್ಲಿ ಕಿಮ್‌ನೊಂದಿಗೆ ಕಾಣಿಸಿಕೊಂಡಿದ್ದರು ಎಂದು ಸುದ್ದಿವಾಹಿನಿ ಒಂದು ವರದಿ ಮಾಡಿದೆ. 


ಇದನ್ನೂ ಓದಿ : ನೀರಿನ ಗುಂಡಿಗೆ ವ್ಯಾನ್ ಪಲ್ಟಿ... 12 ಮಕ್ಕಳು ಸೇರಿ 20 ಮಂದಿ ಸಾವು


ಉತ್ತರ ಕೊರಿಯಾವು ಪ್ಯೊಂಗ್ಯಾಂಗ್ ಅಂತರಾಷ್ಟ್ರೀಯ ಏರ್‌ಫೀಲ್ಡ್‌ನಿಂದ ಖಂಡಾಂತರ ಕ್ಷಿಪಣಿಯನ್ನು ಹಾರಿಸಿತು, ಕ್ಷಿಪಣಿಯು 999.2 ಕಿಲೋಮೀಟರ್ (621 ಮೈಲುಗಳು) ದೂರ ಹಾರಿತು. ಕಿಮ್ ಜಾಂಗ್ ಉನ್ ಅನೇಕ ರಹಸ್ಯಗಳನ್ನು ಹೊಂದಿರುವ ವ್ಯಕ್ತಿ. 2013 ರಲ್ಲಿ, ಮಾಜಿ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್ ಬ್ರಿಟಿಷ್ ದಿನಪತ್ರಿಕೆ ದಿ ಗಾರ್ಡಿಯನ್‌ಗೆ ಕಿಮ್‌ಗೆ "ಜು ಏ" ಎಂಬ "ಮಗು" ಇದೆ ಎಂದು ಹೇಳಿದರು. ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆ ಪ್ರಕಾರ ಕಿಮ್ ಮತ್ತು ರಿ ದಂಪತಿಗೆ ಮೂವರು ಮಕ್ಕಳಿದ್ದಾರೆ ಎಂದು ತಿಳಿದು ಹೇಳಲಾಗಿದೆ.


ಕಿಮ್‌ ಮತ್ತು ರಿ ದಂಪತಿಗೆ ಒಬ್ಬ ಗಂಡು ಮಗ ಇಬ್ಬರು ಹೆಣ್ಣುಮಕ್ಕಳು ಸೇರಿ ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತದೆ. ಕಿಮ್‌ ಮಕ್ಕಳಲ್ಲಿ ಒಬ್ಬರು ಸೆಪ್ಟೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ರಜಾದಿನದ ಆಚರಣೆ  ಸಂದರ್ಭದ ವಿಡಿಯೊ ತುಣುಕಿನಲ್ಲಿ ಕಾಣಿಸಿಕೊಂಡಿದ್ದರು ಎಂಬ ಸುದ್ದಿ ಇದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.