Tax Free Liquor: ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ರಾಷ್ಟ್ರ ದುಬೈ. ದುಬೈ ಆಡಳಿತ ಪ್ರವಾಸಿಗರಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ದುಬೈ ಆಡಳಿತವು ಮದ್ಯದ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ಮೂಲಕ ದುಬೈ ಸ್ಥಳೀಯರಿಗೆ ಮಾತ್ರವಲ್ಲದೆ, ಪ್ರವಾಸಿಗರಿಗೂ ಭರ್ಜರಿ ಉಡುಗೊರೆಯನ್ನು ನೀಡಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ದುಬೈನ ಎರಡು ಸರ್ಕಾರಿ ಮದ್ಯದ ಕಂಪನಿಗಳಾದ ಮೆರಿಟೈಮ್ ಮತ್ತು ಮರ್ಕೆಂಟೈಲ್ ಇಂಟರ್‌ನ್ಯಾಶನಲ್ ಮದ್ಯದ ಮೇಲಿನ ತೆರಿಗೆ ಮತ್ತು ಪರವಾನಗಿ ಶುಲ್ಕವನ್ನು ರದ್ದುಗೊಳಿಸುವುದಾಗಿ ಘೋಷಿಸಿವೆ. ಈ ಎರಡೂ ಕಂಪನಿಗಳು ಎಮಿರೇಟ್ಸ್ ಸಮೂಹದ ಭಾಗವಾಗಿವೆ ಎಂಬುದು ಗಮನಾರ್ಹವಾಗಿದೆ.


ಇದನ್ನೂ ಓದಿ- Omicron Variant: ವ್ಯಾಕ್ಸಿನ್ ಗೂ ಬಗ್ಗದ, ಕೊರೊನಾಕ್ಕಿಂತ 120 ಪ್ರತಿಶತ ಹೆಚ್ಚು ಅಪಾಯಕಾರಿ ವೈರಸ್!! ರೋಗಲಕ್ಷಣ ಏನುಗೊತ್ತಾ?


ಆಡಳಿತಾರೂಢ ಅಲ್ ಮಖ್ತೂಮ್ ಕುಟುಂಬದ ಆದೇಶದ ಮೇರೆಗೆ ಈ ಘೋಷಣೆ ಮಾಡಲಾಗಿದೆ. ಆದಾಗ್ಯೂ, ಈ ಘೋಷಣೆಯಿಂದಾಗಿ ಎರಡೂ ಕಂಪನಿಗಳಿಗೆ ಆದಾಯದ ದೊಡ್ಡ ಮೂಲ ತಪ್ಪಿದಂತಾಗುತ್ತದೆ. ವಾಸ್ತವವಾಗಿ, ಈ ಮೊದಲು ದುಬೈನಲ್ಲಿ ಮದ್ಯದ ಮೇಲೆ 30% ತೆರಿಗೆ ಮತ್ತು ಮದ್ಯದ ಪರವಾನಗಿ ಪಡೆದವರು ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗಿತ್ತು. 


ಇದನ್ನೂ ಓದಿ- New Year Resolutions: ಹೊಸ ವರ್ಷಕ್ಕೆ 5 ದೃಢಸಂಕಲ್ಪಗಳು, ಆದ್ರೆ ಯಾರೂ ಪಾಲಿಸಲ್ಲ!


ದುಬೈನಲ್ಲಿ ಮದ್ಯ ಸೇವನೆ ಕಾನೂನು?
* ಪ್ರವಾಸಿಗರ ಅತ್ಯಾಕರ್ಷಕ ಕೇಂದ್ರವಾಗಿರುವ ದುಬೈನ ಕಾನೂನಿನ ಪ್ರಕಾರ, ಮುಸ್ಲಿಮೇತರರು ಮದ್ಯ ಸೇವಿಸಲು 21 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. 
* ಮದ್ಯ ಸೇವಿಸುವವರು ಬಿಯರ್, ವೈನ್ ಮತ್ತು ಮದ್ಯವನ್ನು ಖರೀದಿಸಲು, ಸಾಗಿಸಲು ಮತ್ತು ಸೇವಿಸಲು ಅನುಮತಿಸುವ ದುಬೈ ಪೊಲೀಸರು ನೀಡಿದ ಪ್ಲಾಸ್ಟಿಕ್ ಕಾರ್ಡ್ ಅನ್ನು ಹೊಂದಿರಬೇಕು. 
* ಮದ್ಯ ಸೇವನೆಗಾಗಿ ದುಬೈ ಪೊಲೀಸರಿಂದ ಪ್ಲಾಸ್ಟಿಕ್ ಕಾರ್ಡ್ ಹೊಂದಿಲ್ಲದಿದ್ದರೆ ದಂಡ ಮತ್ತು ಬಂಧನಕ್ಕೆ ಕಾರಣವಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.