Viral News: ವೃದ್ಧನ ಖಾಸಗಿ ಅಂಗದಲ್ಲಿ ಪತ್ತೆಯಾದ ಬಾಂಬ್, ಗಡಗಡ ನಡುಗಿದ ಆಸ್ಪತ್ರೆಯ ಸಿಬ್ಬಂದಿ

Viral News: ಬಾಂಬ್ ಉದ್ದ 20 ಸೆ.ಮೀ ಆಗಿದ್ದರೆ ಅಗಲ 6 ಸೆಂ.ಮೀ ಆಗಿತ್ತು. ತನ್ನ ಸಹೋದರನ ಮನೆಯಲ್ಲಿ ವೃದ್ಧನಿಗೆ ಈ ಬಾಂಬ್ ದೊರಕಿತ್ತು. ಪ್ರಸ್ತುತ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.  

Written by - Nitin Tabib | Last Updated : Dec 31, 2022, 06:39 PM IST
  • 1900 ರ ದಶಕದ ಆರಂಭದಲ್ಲಿ ಫ್ರೆಂಚ್ ಸೈನಿಕರು ಈ ಬಾಂಬ್ ಅನ್ನು ಬಳಸಿದ್ದರು.
  • ಇದು ಮೊದಲ ಮಹಾಯುದ್ಧದಲ್ಲಿ ಬಾಂಬ್ ಸಂಗ್ರಹಾರದ ಭಾಗವಾಗಿತ್ತು.
  • 2021 ರಲ್ಲಿ, ಬ್ರಿಟನ್‌ನಲ್ಲಿಯೂ ಇದೇ ರೀತಿಯ ಪ್ರಕರಣವು ಮುನ್ನೆಲೆಗೆ ಬಂದಿತ್ತು.
Viral News: ವೃದ್ಧನ ಖಾಸಗಿ ಅಂಗದಲ್ಲಿ ಪತ್ತೆಯಾದ ಬಾಂಬ್, ಗಡಗಡ ನಡುಗಿದ ಆಸ್ಪತ್ರೆಯ ಸಿಬ್ಬಂದಿ title=
World War I Bomb

World News: ಕೆಲವು ದಿನಗಳ ಹಿಂದೆ ಫ್ರಾನ್ಸ್‌ನಲ್ಲಿ ಭಾರಿ ಅಚ್ಚರಿಯನ್ನುಂಟು ಮಾಡುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಅದನ್ನು ನೋಡಿ ವೈದ್ಯರೂ ಬೆಚ್ಚಿಬಿದ್ದಿದ್ದಾರೆ. 88 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಆಸ್ಪತ್ರೆಯನ್ನು ತಲುಪಿದ್ದರು ಮತ್ತು ಅವರ ಖಾಸಗಿ ಅಂಗದಲ್ಲಿ ವಿಶ್ವ ಯುದ್ಧ I ರಲ್ಲಿ ಬಳಕೆಯಾದ ಒಂದು ಬಾಂಬ್ ಸಿಲುಕಿಕೊಂಡಿದೆ ಎಂದು ವೈದ್ಯರಿಗೆ ತಿಳಿಸಿದ್ದರು. ಇದನ್ನು ಕೇಳಿದ ವೈದ್ಯರು ಕೂಡಲೇ ಆಸ್ಪತ್ರೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿ ಆಸ್ಪತ್ರೆಯನ್ನೇ ಖಾಲಿಗೊಳಿಸಿದ್ದಾರೆ.

ನಂತರ ಅವರು ಈ ಬಾಂಬ್ ನಿಷ್ಕ್ರಿಯವಾಗಿದೆ ಮತ್ತು ಅದು ಸಂಗ್ರಹಾಲಯದ ಭಾಗವಾಗಿದೆ ಎಂದು ನೌಕರರಿಗೆ ವಿವರಿಸಿದ್ದಾರೆ. ಈ ಘಟನೆಯು ಟೌಲನ್ ನಗರದ ಸೇಂಟ್ ಮ್ಯೂಸಿ ಆಸ್ಪತ್ರೆಯಲ್ಲಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವು ರೋಗಿಗಳನ್ನು ಕಟ್ಟಡದಿಂದ ಹೊರಕ್ಕೆ ಸ್ಥಳಾಂತರಿಸಿದ ಸಿಬ್ಬಂದಿ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಲಾಗಿದೆ.

ಈ ಕುರಿತು ಸ್ಥಳೀಯ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿರುವ ಆಸ್ಪತ್ರೆಯ ಸಿಬ್ಬಂದಿಯೊಬ್ಬರು, 'ನಾವು ಹಲವು ಬಾರಿ ಮಾವಿನಹಣ್ಣು, ಸೇಬು ಮುಂತಾದ ವಿಚಿತ್ರ ವಸ್ತುಗಳು ಜನರ ದೇಹದಲ್ಲಿ ಸಿಲುಕಿಕೊಂಡಿರುವುದನ್ನು ನೋಡಿದ್ದೇವೆ, ಆದರೆ ಬಾಂಬ್ ಎಂದಿಗೂ ನೋಡಿರಲಿಲ್ಲ' ಎಂದಿದ್ದಾರೆ. ವೃದ್ಧ ವ್ಯಕ್ತಿ ಆಸ್ಪತ್ರೆ ತಲುಪಿದ ಬಳಿಕ ಹಲವು ರೋಗಿಗಳನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ ಮತ್ತು ಇತರ ಒಳಬರುವ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಹೋಗಲು ಸೂಚಿಸಲಾಗಿದೆ.

ಇದನ್ನೂ ಓದಿ-Flood Video: ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೀರಲ್ಲಿ ಕೊಚ್ಚಿಹೋದ ನೂರಾರು ವಾಹನಗಳು, ವಿಡಿಯೋ ನೋಡಿ

ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ
ಬಾಂಬ್ ಡಿಫ್ಯೂಸ್ ಆಗಿದ್ದು, ಸ್ಫೋಟವಾಗುವುದಿಲ್ಲ ಎಂದು ಬಾಂಬ್ ಸ್ಕ್ವಾಡ್ ದೃಢಪಡಿಸಿದಾಗ ವೈದ್ಯರು ವೃದ್ಧನಿಗೆ ಶಸ್ತ್ರಚಿಕಿತ್ಸೆ ನಡೆಸಿ ಬಾಂಬ್ ಹೊರತೆಗೆದಿದ್ದಾರೆ. ವಾಸ್ತವದಲ್ಲಿ ಈ ಬಾಂಬ್ ವೃದ್ಧನ ಗುದನಾಳದಲ್ಲಿ ಕೊಂಡಿತ್ತು, ನಂತರ ಅವನ ಹೊಟ್ಟೆಯ ಆಪರೇಶನ್ ನಡೆಸಲಾಗಿದೆ. ಬಾಂಬ್‌ನ ಉದ್ದ 20 ಸೆಂ.ಮೀ ಮತ್ತು ಅಗಲ 6 ಸೆಂ.ಮೀ ಆಗಿತ್ತು. ವೃದ್ಧನಿಗೆ ಆತನ ಸಹೋದರನ ಮನೆಯಿಂದ ಈ ಬಾಂಬ್ ಸಿಕ್ಕಿತ್ತು. ಪ್ರಸ್ತುತ ಅವರ ಆಪರೇಶನ್ ಯಶಸ್ವಿಯಾಗಿದ್ದು, ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-Beauty Tips: ಯಂಗ್ ಹಾಗೂ ಬ್ಯೂಟಿಫುಲ್ ಕಾಣಿಸಿಕೊಳ್ಳಬೇಕೇ? ನಿತ್ಯ ಈ ಒಂದು ಕೆಲಸ ಮಾಡಿ ಸಾಕು

ಖಾಸಗಿ ಅಂಗದಲ್ಲಿ ಬಾಂಬ್ ಸಿಲುಕಿಕೊಂಡಿದ್ದಾದರು ಹೇಗೆ?
1900 ರ ದಶಕದ ಆರಂಭದಲ್ಲಿ ಫ್ರೆಂಚ್ ಸೈನಿಕರು ಈ ಬಾಂಬ್ ಅನ್ನು ಬಳಸಿದ್ದರು. ಇದು ಮೊದಲ ಮಹಾಯುದ್ಧದಲ್ಲಿ ಬಾಂಬ್ ಸಂಗ್ರಹಾರದ ಭಾಗವಾಗಿತ್ತು. ವರದಿಗಳ ಪ್ರಕಾರ, ವೃದ್ಧನು ಲೈಂಗಿಕ ಆನಂದಕ್ಕಾಗಿ ಬಾಂಬ್ ಅನ್ನು ಬಳಸುತ್ತಿದ್ದನು ಮತ್ತು ಅದು ಈ ರೀತಿ ಆತನ ಖಾಸಗಿ ಅಂಗ ಸೇರಿತ್ತು.  2021 ರಲ್ಲಿ, ಬ್ರಿಟನ್‌ನಲ್ಲಿಯೂ ಇದೇ ರೀತಿಯ ಪ್ರಕರಣವು ಮುನ್ನೆಲೆಗೆ ಬಂದಿತ್ತು. ಇದೇ ಸಮಸ್ಯೆಯಿಂದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ತೆರಳಿದ್ದರು. ಎರಡನೇ ಮಹಾಯುದ್ಧದ ಬಾಂಬ್ ಅವರ ದೇಹದಲ್ಲಿ ಪತ್ತೆಯಾಗಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News