ಈಗ ನಿಮ್ಮ ಸ್ಮಾರ್ಟ್ಫೋನ್ನಿಂದಲೇ Covid Test ಮಾಡಿ, ನಿಮಿಷಗಳಲ್ಲಿ ಪಡೆಯಿರಿ ರಿಪೋರ್ಟ್
ಇಲಿನಾಯ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಲೆಕ್ಟ್ರೋಕೆಮಿಕಲ್ ಸಂವೇದಕಗಳ ಆಧಾರದ ಮೇಲೆ ಪರೀಕ್ಷಾ ಕಿಟ್ ತಯಾರಿಸಿದ್ದಾರೆ. ಈ ಸಂವೇದಕದ ಸಹಾಯದಿಂದ ಕೋವಿಡ್ -19 ಪರೀಕ್ಷೆಯ ಫಲಿತಾಂಶವನ್ನು 5 ನಿಮಿಷಗಳಲ್ಲಿ ಪಡೆಯಲಾಗುತ್ತದೆ. ಇದನ್ನು ತಯಾರಿಸಿದ ವಿಜ್ಞಾನಿಗಳು ಈ ಸಂವೇದಕವನ್ನು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಿದರೆ ಕರೋನಾ ಪರೀಕ್ಷೆಯನ್ನು ಮನೆಯಿಂದಲೇ ಮಾಡಬಹುದು ಎಂದು ಹೇಳಿದ್ದಾರೆ.
ನವದೆಹಲಿ: ಕರೋನಾವೈರಸ್ ಪತ್ತೆಹಚ್ಚಲು ಇಲ್ಲಿಯವರೆಗೆ ಕೇವಲ ಎರಡು ಬಗೆಯ ಪರೀಕ್ಷೆಗಳನ್ನು (ಕರೋನಾ ಟೆಸ್ಟ್) ಬಳಸಲಾಗುತ್ತಿದೆ. ಮೊದಲನೆಯ ವಿಧಾನ ಆರ್ಟಿ-ಪಿಸಿಆರ್ (RT-PCR), ಇದರ ಫಲಿತಾಂಶ ಬರಲು ಕನಿಷ್ಠ 24 ಗಂಟೆಗಳು ಬೇಕಾಗುತ್ತದೆ. ಎರಡನೆಯದು ರಾಪಿಡ್ ಆಂಟಿಜೆನ್ ಟೆಸ್ಟ್, ಇದು ಸುಮಾರು 30 ನಿಮಿಷಗಳಲ್ಲಿ ಫಲಿತಾಂಶವನ್ನು ನೀಡುತ್ತದೆ. ಏತನ್ಮಧ್ಯೆ ಇಲಿನಾಯ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸ ಪರೀಕ್ಷಾ ಕಿಟ್ ಸಿದ್ಧಪಡಿಸಿದ್ದು ಇದು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಫಲಿತಾಂಶವನ್ನು ತಿಲಿಸುತ್ತಂತೆ.
ಎಲೆಕ್ಟ್ರೋಕೆಮಿಕಲ್ ಸಂವೇದಕಗಳ ಆಧಾರದ ಮೇಲೆ ಟೆಸ್ಟ್:
ಇಲಿನಾಯ್ಸ್ ವಿಶ್ವವಿದ್ಯಾಲಯದ ಗ್ರ್ಯಾಂಜರ್ ಕಾಲೇಜಿನ ಸಂಶೋಧಕರು ಕರೋನಾ ಪರೀಕ್ಷೆಗೆ ಅಲ್ಟ್ರಾ ಸೆನ್ಸಿಟಿವ್ ಪರೀಕ್ಷೆಯನ್ನು ಸಿದ್ಧಪಡಿಸಿದ್ದಾರೆ. ಈ ಪರೀಕ್ಷೆಯಲ್ಲಿ ಕಾಗದದ ಸಹಾಯದಿಂದ ಎಲೆಕ್ಟ್ರೋಕೆಮಿಕಲ್ ಸೆನ್ಸಾರ್ ತಯಾರಿಸಲಾಗಿದ್ದು ಇದರಿಂದ ಕೇವಲ 5 ನಿಮಿಷಗಳಲ್ಲಿ ಕರೋನವೈರಸ್ (Coronavirus) ಅನ್ನು ಕಂಡುಹಿಡಿಯಬಹುದು.
Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ
ಈ ಹಿಂದೆ ವಿಜ್ಞಾನಿಗಳು 2 ಡಿ ನ್ಯಾನೊಮೀಟರ್ ಸಹಾಯದಿಂದ ಗ್ರ್ಯಾಫೀನ್ ಪಾಯಿಂಟ್ ಆಫ್ ಕೇರ್ ನಂತಹ ಕೆಲವು ಬಯೋಸೆನ್ಸರ್‌ಗಳನ್ನು ಸಿದ್ಧಪಡಿಸಿದ್ದಾರೆ. ಇದರಿಂದ ರೋಗಗಳನ್ನು ಪತ್ತೆ ಹಚ್ಚಬಹುದು. ಗ್ರ್ಯಾಫೀನ್ ಬಯೋಸೆನ್ಸರ್‌ನ ವಿಶೇಷತೆಯೆಂದರೆ ಅದು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಅದನ್ನು ತಯಾರಿಸಲು ತಗುಲುವ ವೆಚ್ಚವೂ ಕಡಿಮೆ.
ಎಸಿಎಸ್ ನ್ಯಾನೋ ಎಂಬ ವೈಜ್ಞಾನಿಕ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಜೈವಿಕ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ 'ಮಹಾ ಅಲಾಫಿಫ್' ಎಂಬ ವಿದ್ಯಾರ್ಥಿಯು ಈ ಸಂಶೋಧನೆಯನ್ನು ಮಾಡಿದ್ದಾರೆ. ಇದರಲ್ಲಿ ವೈರಸ್ ಅನ್ನು ಪತ್ತೆಹಚ್ಚಲು ಗ್ರ್ಯಾಫೀನ್ ಬಯೋಸೆನ್ಸರ್ ಬಳಸಲಾಗಿದೆ. ಈ ಶತಮಾನದಲ್ಲಿ ಹಿಂದೆಂದೂ ಕಂಡರಿಯದಂತಹ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ ಎಂದು ಅಲಾಫಿಫ್ ಹೇಳುತ್ತಾರೆ. ಈ ಜಾಗತಿಕ ಅಗತ್ಯದ ದೃಷ್ಟಿಯಿಂದ ನಾವು SARS-CoV-2 ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದವರು ತಿಳಿಸಿದ್ದಾರೆ.
ಪ್ರಪಂಚದಲ್ಲಿ ಅತಿ ಹೆಚ್ಚು ಕೋವಿಡ್–19 ಲಸಿಕೆ ಖರೀದಿಸಿರುವ ರಾಷ್ಟ್ರ ಯಾವುದು ಗೊತ್ತಾ?
ಈ ಸಂಶೋಧನೆಯಲ್ಲಿ ತಂಡವು ಎಲೆಕ್ಟ್ರೋಕೆಮಿಕಲ್ ಸಂವೇದಕಗಳೊಂದಿಗೆ ಕೋವಿಡ್ -19 (Covid 19) ಧನಾತ್ಮಕ ಮತ್ತು ಋಣಾತ್ಮಕ ಮಾದರಿಗಳನ್ನು ತನಿಖೆ ಮಾಡಿತು. ಸಂವೇದಕವು ಕರೋನಾ ಫಲಿತಾಂಶವನ್ನು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನೀಡಿತು. ಪರಿಣಾಮವಾಗಿ ಋಣಾತ್ಮಕ ಮಾದರಿಯಲ್ಲಿ ವೋಲ್ಟೇಜ್ ಕಡಿಮೆ ಇದ್ದು, ಧನಾತ್ಮಕ ಮಾದರಿಯಲ್ಲಿನ ವೋಲ್ಟೇಜ್ ತುಂಬಾ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಇದರಲ್ಲಿ ವೈರಸ್ ಇರುವುದು ಸಹ ದೃಢಪಟ್ಟಿದೆ ಎಂದು ತಂಡವು ವಿವರಿಸಿದೆ.
ಸ್ಮಾರ್ಟ್‌ಫೋನ್‌ನಲ್ಲಿ ಕರೋನಾ ಟೆಸ್ಟ್:
ಈ ಸಂವೇದಕವನ್ನು ಮೈಕ್ರೊಕಂಟ್ರೋಲರ್, ಎಲ್‌ಇಡಿ ಸ್ಕ್ರೀನ್ ಮತ್ತು ಸ್ಮಾರ್ಟ್‌ಫೋನ್‌ಗೆ ಸೇರಿಸುವ ಮೂಲಕ ಮನೆಯಲ್ಲಿಯೇ ಇದ್ದು ಜನರು ಕರೋನಾ ಪರೀಕ್ಷೆ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.