ನವದೆಹಲಿ: ದುಬೈನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಭರ್ಜರಿ ಜಾಕ್‍ಪಾಟ್ ಹೊಡೆದಿದೆ. ಡ್ರೈವರ್ ಅಗಿ ಕೆಲಸ ಮಾಡುತ್ತಿದ್ದ ಅಜಯ್ ಒಗುಲಾ ಎಂಬಾತ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾನೆ. ಹೌದು, ದುಬೈನ ‘ಎಮಿರೇಟ್ಸ್‌ ಡ್ರಾ’ ಲಾಟರಿಯಲ್ಲಿ ಭಾರತೀಯ ಮೂಲದ ವ್ಯಕ್ತಿ ಬರೋಬ್ಬರಿ 33 ಕೋಟಿ ರೂ. ಗೆದ್ದಿದ್ದಾರೆ. 4 ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದ ಅಜಯ್‌, ಜ್ಯುವೆಲರಿ ಅಂಗಡಿಯೊಂದರ ವಾಹನ ಚಾಲಕನಾಗಿ ದುಡಿಯುತ್ತಿದ್ದರು.


COMMERCIAL BREAK
SCROLL TO CONTINUE READING

ತಿಂಗಳಿಗೆ 72 ಸಾವಿರ ರೂ. (3,200 ದಿರ್ಹಂ) ವೇತನ ಪಡೆಯುತ್ತಿದ್ದ ಈ ಅದೃಷ್ಟವಂತನಿಗೆ ದೊಡ್ಡ ಮೊತ್ತದ ಲಾಟರಿ ಜಾಕ್‍ಪಾಟ್ ಹೊಡೆದಿದೆ. ಅಜಯ್‍ಗೆ ಲಾಟರಿ ರೂಪದಲ್ಲಿ ದೊಡ್ಡಮೊತ್ತದ ಅದೃಷ್ಟಲಕ್ಷ್ಮಿ ಸಿಕ್ಕಿದ್ದಾಳೆ. ಸಾಮಾನ್ಯ ಡ್ರೈವರ್ ಆಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಅಜಯ್ ಇದೀಗ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.


ಇದನ್ನೂ ಓದಿ: Flood Video: ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೀರಲ್ಲಿ ಕೊಚ್ಚಿಹೋದ ನೂರಾರು ವಾಹನಗಳು, ವಿಡಿಯೋ ನೋಡಿ


ದೊಡ್ಡ ಮೊತ್ತದ ಹಣ ಗೆದ್ದಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಅಜಯ್, ‘ನಾನು 33 ಕೋಟಿ ರೂ. ಮೊತ್ತದ ಲಾಟರಿ ಗೆದ್ದಿದ್ದೇನೆ ಅನ್ನೋದನ್ನು ನಂಬಲು ಆಗುತ್ತಿಲ್ಲ. ಮನೆವರೊಂದಿಗೆ ಈ ವಿಚಾರವನ್ನು ಹೇಳಿದಾಗ ಅವರು ಸಹ ನಂಬಲಿಲ್ಲ. ನಾನು ಲಾಟರಿ ಗೆದ್ದಿರುವ ಸುದ್ದಿ ಮಾಧ್ಯಮಗಳಲ್ಲಿ ಬಂದಾಗಲೇ ಅವರು ನನ್ನನ್ನು ನಂಬಿದರು. ಅದೃಷ್ಟಲಕ್ಷ್ಮಿ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.


ನನಗೆ ಬರುವ ಲಾಟರಿ ಹಣದಿಂದ ನನ್ನ ಎಲ್ಲಾ ಕನಸುಗಳನ್ನು ಈಡೇರಿಸಿಕೊಳ್ಳುತ್ತೇನೆ. ಜೊತೆಗೆ ದತ್ತಿ ಸಂಸ್ಥೆ ಸ್ಥಾಪಿಸಿ ತನ್ನ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮದ ಬಡವರಿಗೆ ನೆರವಾಗುತ್ತೇನೆ. ನಮ್ಮ ಮನೆಗಳ ಆಸೆಗಳನ್ನು ಈಡೇರಿಸುತ್ತೇನೆ ಅಂತಾ ಅಜಯ್ ಹೇಳಿದ್ದಾರೆ. ಇನ್ನು ಇದೇ ಲಾಟರಿಯಲ್ಲಿ ಬ್ರಿಟಿಷ್ ಮೂಲದ ಪೌಲಾ ಲೀಚ್‌ ಎಂಬಾತ 17.5 ಲಕ್ಷ ರೂ.(77,777 ದಿರ್ಹಂ) ಗೆದ್ದಿದ್ದಾರೆ.


ಇದನ್ನೂ ಓದಿ: ರಷ್ಯಾದ ಆರೈಕೆ ಮನೆಯಲ್ಲಿ ಅಗ್ನಿ ಅವಘಡ, ಕನಿಷ್ಠ 22 ಜನರು ಸಾವು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.