OMG: 13 ವರ್ಷ ಕಿರಿಯನಿಗೆ 3ನೇ ಪತ್ನಿಯಾದ ಇಮ್ರಾನ್ ಖಾನ್ ಮಾಜಿ ಹೆಂಡತಿ ರೆಹಮ್ ಖಾನ್!

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ರೆಹಮ್ ಖಾನ್, ಬಿಲಾಲ್‍ನ ಪೋಷಕರು ಮತ್ತು ನನ್ನ ಪರ ವಕೀಲನಾಗಿ ನನ್ನ ಮಗ ಸಿಯಾಟಲ್‌ನಲ್ಲಿ ಸುಂದರ ಮದುವೆ ಸಮಾರಂಭ ನಡೆಸಿದರು’ ಅಂತಾ ಹೇಳಿದ್ದಾರೆ.

Written by - Puttaraj K Alur | Last Updated : Dec 23, 2022, 07:02 PM IST
  • 13 ವರ್ಷ ಕಿರಿಯನಿಗೆ 3ನೇ ಪತ್ನಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಹೆಂಡತಿ
  • ಇಮ್ರಾನ್ ಖಾನ್‍ಗೆ ತಲಾಖ್ ನೀಡಿದ ಬಳಿಕ 36 ವರ್ಷದ ಬಿಲಾಲ್‍ರನ್ನು ವರಿಸಿದ 49 ವರ್ಷದ ರೆಹಮ್ ಖಾನ್
  • ವಿಶೇಷ ಅಂದ್ರೆ ರೆಹಮ್ ಖಾನ್, ಇಮ್ರಾನ್ ಖಾನ್ ಮತ್ತು ಬಿಲಾಲ್‍ಗೂ ಇದು 3ನೇ ಮದುವೆ!
OMG: 13 ವರ್ಷ ಕಿರಿಯನಿಗೆ 3ನೇ ಪತ್ನಿಯಾದ ಇಮ್ರಾನ್ ಖಾನ್ ಮಾಜಿ ಹೆಂಡತಿ ರೆಹಮ್ ಖಾನ್! title=
3ನೇ ಮದುವೆಯಾದ ಇಮ್ರಾನ್ ಖಾನ್ ಪತ್ನಿ!

ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ 13 ವರ್ಷ ಕಿರಿಯನಿಗೆ 3ನೇ ಪತ್ನಿಯಾಗಿದ್ದಾರೆ. ಅಮೆರಿಕ ಮೂಲದ ಕಾರ್ಪೊರೇಟ್ ವೃತ್ತಿಪರ ಮತ್ತು ಮಾಜಿ ಮಾಡೆಲ್ ಮಿರ್ಜಾ ಬಿಲಾಲ್‍ರನ್ನು ರೆಹಮ್ ವರಿಸಿದ್ದಾರೆ.  

ಇಮ್ರಾನ್ ಖಾನ್‍ಗೆ ತಲಾಖ್ ನೀಡಿದ ಬಳಿಕ ಅಮೆರಿಕದಲ್ಲಿ ನೆಲೆಸಿರುವ 49 ವರ್ಷದ ರೆಹಮ್ ಖಾನ್ 36 ವರ್ಷದ ಬಿಲಾಲ್‍ರನ್ನು ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಸ್ಲಿಂ ವಿಧಿವಿಧಾನದಂತೆ ಮದುವೆಯಾಗಿದ್ದಾರೆ.

ಇದನ್ನೂ ಓದಿ: Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ರೆಹಮ್ ಖಾನ್, ಬಿಲಾಲ್‍ನ ಪೋಷಕರು ಮತ್ತು ನನ್ನ ಪರ ವಕೀಲನಾಗಿ ನನ್ನ ಮಗ ಸಿಯಾಟಲ್‌ನಲ್ಲಿ ಸುಂದರ ಮದುವೆ ಸಮಾರಂಭ ನಡೆಸಿದರು’ ಅಂತಾ ಹೇಳಿದ್ದಾರೆ. ‘ಕೊನೆಗೂ ನಾನು ಬಿಲಾಲ್‍ ಎಂಬ ನಂಬಿಕಸ್ತ ವ್ಯಕ್ತಿಯ ಜೊತೆಗೆ ಹೊಸ ಜೀವನ ಪ್ರಾರಂಭಿಸಿದೆ’ ಎಂದು ಮತ್ತೊಂದು ಪೋಸ್ಟ್‍ನಲ್ಲಿ ರೆಹಮ್ ಹೇಳಿದ್ದಾರೆ. ರೆಹಮ್ ಅವರು ಬಿಳಿ ಗೌನ್‌ನಲ್ಲಿ ಕಾಣಿಸಿಕೊಂಡಿದ್ದರೆ, ಅವರ ಪತಿ ಬಿಲಾಲ್ ಕಪ್ಪು ಬಣ್ಣದ ಸೂಟ್‌ ಧರಿಸಿದ್ದರು. ಬಿಲಾಲ್‍ಗೂ ಸಹ ಇದು 3ನೇ ಮದುವೆಯಾಗಿದೆ.

ಪಾಕಿಸ್ತಾನಿ-ಬ್ರಿಟಿಷ್ ದೂರದರ್ಶನ ಪತ್ರಕರ್ತೆ ರೆಹಾಮ್ ಮೊದಲು ಮನೋವೈದ್ಯ ಇಜಾಜ್ ರೆಹಮಾನ್‍ರನ್ನು 1993ರಲ್ಲಿ ವಿವಾಹವಾಗಿದ್ದರು. ಬಳಿಕ 2005ರಲ್ಲಿ ವಿಚ್ಛೇದನ ಪಡೆದು ದೂರವಾಗಿದ್ದರು. 2015ರಲ್ಲಿ ಇಮ್ರಾನ್ ಖಾನ್‍ರೊಂದಿಗೆ ರೆಹಮ್ ಮದುವೆಯಾಗಿದ್ದರು. 10 ತಿಂಗಳ ನಂತರ ಈ ಜೋಡಿ ವಿಚ್ಛೇದನದ ಮೂಲಕ ದೂರವಾಗಿದ್ದರು. ಬಳಿಕ ಬುಶ್ರಾ ವಟ್ಟೂರನ್ನು ಇಮ್ರಾನ್ ಖಾನ್ 3ನೇ ಮದುವೆಯಾಗಿದ್ದರು.

ಇದನ್ನೂ ಓದಿ: Trending News: ಅದ್ವಿತೀಯ ಶಕ್ತಿಯುಳ್ಳ ಈ ಜೀವ ದಿಢೀರ್ ಮಾಯವಾಗುತ್ತದೆ, ಹುಡುಕಾಡಿದ್ರು ಸಿಗಲ್ಲ !

1995ರಲ್ಲಿ ಇಮ್ರಾನ್‌ ಖಾನ್ ಜೆಮಿನಾ ಗೋಲ್ಡ್‌ಸ್ಮಿತ್ ಜೊತೆಗೆ ವಿವಾಹವಾಗಿದ್ದರು. ಆದರೆ 2004ರಲ್ಲಿ ಈ ಜೋಡಿ ವಿಚ್ಛೇದನದ ಮೂಲಕ ಪರಸ್ಪರ ಬೇರೆಯಾಗಿದ್ದರು. ಇಮ್ರಾನ್ ಖಾನ್‍ಗೆ ಡಿವೋರ್ಸ್ ನೀಡಿದ ಬಳಿಕ ರೆಹಮ್ ಆತ ‘ವಿಶ್ವಾಸದ್ರೋಹಿ’ ಎಂದು ಆರೋಪಿಸಿದ್ದರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News