ಬಲೂಚಿಸ್ತಾನದ ಮಸೀದಿ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ: 52 ಜನ ಸಾವು, 50 ಮಂದಿಗೆ ಗಾಯ
Pakistan Blast News: ಬಲೂಚಿಸ್ತಾನದ ಮಸೀದಿ ಬಳಿ ಆತ್ಮಾಹುತಿ ಬಾಂಬ್ ಸ್ಫೋಟ ನಡೆದಿದ್ದು, ಸುಮಾರು 52 ಮಂದಿ ಗಾಯಗೊಂಡಿದ್ದಾರೆ.
Balochistan Blast News : ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯ ಮಸೀದಿಯೊಂದರ ಬಳಿ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಅಬ್ದುಲ್ ರಜಾಕ್ ಶಾಹಿ ಅವರು ಸಾವುನೋವುಗಳ ಸಂಖ್ಯೆಯನ್ನು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಶಾಹಿ ಸ್ಪಷ್ಟಪಡಿಸಿದ್ದಾರೆ. ಶೋಧ ಕಾರ್ಯಾಚರಣೆ ನಡೆದಿದ್ದು, ಈವರೆಗೆ 28 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಆರು ಮಂದಿ ಗಾಯಾಳುಗಳನ್ನು ಮಸ್ತುಂಗ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಸಿಇಒ ಡಾ.ಮಿರ್ವಾನಿ ಖಚಿತಪಡಿಸಿದ್ದಾರೆ. ಹತ್ತಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು 20 ಕ್ಕೂ ಹೆಚ್ಚು ಗಾಯಗೊಂಡವರನ್ನು ವೈದ್ಯಕೀಯ ಸಹಾಯಕ್ಕಾಗಿ ಕ್ವೆಟ್ಟಾಕ್ಕೆ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ, ಎಲ್ಲಿ ಗೊತ್ತಾ?
ಅಲ್ಫಲಾಹ್ ರಸ್ತೆಯಲ್ಲಿರುವ ಮದೀನಾ ಮಸೀದಿ ಬಳಿ ಈದ್ ಮಿಲಾದುನ್ ಮೆರವಣಿಗೆಗಾಗಿ ಜನರು ಸೇರುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ಮಸ್ತುಂಗ್ ಸಹಾಯಕ ಕಮಿಷನರ್ (AC) ಅತ್ತಾಹುಲ್ ಮುನಿಮ್ ಹೇಳಿದ್ದಾರೆ. ಮೆರವಣಿಗೆಯ ಬದಿಯಲ್ಲಿದ್ದ ಡಿಎಸ್ಪಿ ಗಿಷ್ಕೋರಿ ಅವರ ಕಾರಿನ ಬಳಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪಿಟಿಐ ನಾಯಕ ಇಮ್ರಾನ್ ಇಸ್ಮಾಯಿಲ್ ಅವರು ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದು, 'ಅಮಾಯಕ ಜನರನ್ನು ಕೊಲ್ಲುವವರು ದುರುಳರು ಮತ್ತು ಭಯೋತ್ಪಾದಕರು' ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಮುಖಂಡ ಹಫೀಜ್ ಹಮ್ದುಲ್ಲಾ ಸೇರಿದಂತೆ ಕನಿಷ್ಠ 11 ಜನರು ಅದೇ ಜಿಲ್ಲೆಯಲ್ಲಿ ಸ್ಫೋಟದಲ್ಲಿ ಗಾಯಗೊಂಡಿದ್ದರು.
ಇದನ್ನೂ ಓದಿ : ಜಗತ್ತಿನ ಅತ್ಯಂತ ದುಬಾರಿ ಕರೆನ್ಸಿ ಯಾವುದು ಗೊತ್ತಾ? ಒಂದು ಡಾಲರ್‌ಗಿಂತ ಹೆಚ್ಚು ಇದರ ಬೆಲೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.