Worlds Largest Hindu Temple: ಅಮೇರಿಕಾದಲ್ಲಿ ಆಧುನಿಕ ಯುಗದ ಅತಿದೊಡ್ಡ ಹಿಂದೂ ದೇವಾಲಯ ಉದ್ಘಾಟನೆಗೆ ಸಿದ್ಧವಾಗಿದೆ. ನ್ಯೂಜೆರ್ಸಿಯು ಭಾರತದ ಹೊರಗಿನ ಆಧುನಿಕ ಯುಗದ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾದ BAPS ಸ್ವಾಮಿನಾರಾಯಣ ಅಕ್ಷರಧಾಮವನ್ನು ಅಕ್ಟೋಬರ್ 08ರಂದು ಉದ್ಘಾಟಿಸಲು ಸಜ್ಜಾಗಿದೆ. BAPS ಆಧ್ಯಾತ್ಮಿಕ ಮುಖ್ಯಸ್ಥ ಮಹಂತ್ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 8 ರಂದು ಅಕ್ಷರಧಾಮವನ್ನು ಔಪಚಾರಿಕವಾಗಿ ಉದ್ಘಾಟಿಸಲಾಗುವುದು. ಅಕ್ಟೋಬರ್ 18 ರಿಂದ ದೇವಾಲಯವು ಪ್ರವಾಸಿಗರಿಗೆ ತೆರೆದಿರುತ್ತದೆ. ನ್ಯೂಜೆರ್ಸಿಯ ಸ್ವಾಮಿನಾಯಾರಾಯಣ ಅಕ್ಷರಧಾಮದ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
12ವರ್ಷಗಳಲ್ಲಿ ನಿರ್ಮಾಣ:
ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ನಿರ್ಮಾಣಕ್ಕೆ ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಳ್ಳಲಾಗಿದ್ದು ಈ ಬೃಹತ್ ದೇವಾಲಯವನ್ನು ಯುಎಸ್ಎಯ ಸುಮಾರು 12,500ಕ್ಕೂ ಸ್ವಯಂಸೇವಕರು ನಿರ್ಮಿಸಿದ್ದಾರೆ.
ದೇವಾಲಯವು 183 ಎಕರೆಗಳಷ್ಟು ವಿಸ್ತಾರವಾಗಿದೆ. ಈ ದೇವಾಲಯವು 255 ಅಡಿ ಉದ್ದ, 345 ಅಡಿ ಅಗಲ ಮತ್ತು 191 ಅಡಿಗಳಷ್ಟು ಎತ್ತರವಾಗಿದೆ. ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸ್ವಿಲ್ಲೆ ಟೌನ್ಶಿಪ್ನಲ್ಲಿದ್ದು, ಇದು ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನ ದಕ್ಷಿಣಕ್ಕೆ ಸುಮಾರು 90 ಕಿಲೋಮೀಟರ್ಗಳು ಮತ್ತು ವಾಷಿಂಗ್ಟನ್, ಡಿಸಿಯಿಂದ ಉತ್ತರಕ್ಕೆ 289 ಕಿಲೋಮೀಟರ್ ದೂರದಲ್ಲಿದೆ.
ಇದನ್ನೂ ಓದಿ- ಕೇವಲ 100 ರೂ.ಗೆ ಮಾರಾಟವಾದ 6.6 ಕೋಟಿ ಮೌಲ್ಯದ ಫ್ಲಾಟ್, ಕಾರಣ ತಿಳಿದರೆ ಶಾಕ್ ಆಗುತ್ತೀರಿ!
ಕಲಾತ್ಮಕ ಮಾರ್ವೆಲ್:
ನ್ಯೂಜೆರ್ಸಿಯಲ್ಲಿರುವ ಅಕ್ಷರಧಾಮ ದೇವಲಾಯವು ಪ್ರಾಚೀನ ಹಿಂದೂ ಧರ್ಮಗ್ರಂಥಗಳು ಮತ್ತು ಸಂಸ್ಕೃತಿಗೆ ಅನುಗುಣವಾಗಿಯೇ ಸಂಕೀರ್ಣವಾಗಿ ವಿನ್ಯಾಸಗೊಳಿಸಲಾದ 10,000 ಪ್ರತಿಮೆಗಳನ್ನು ಒಳಗೊಂಡಿದೆ. ಗಮನಾರ್ಹವಾಗಿ ಇದನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಹಿಂದೂ ಕಲಾತ್ಮಕತೆ ಮತ್ತು ವಾಸ್ತುಶಿಲ್ಪದ ಪ್ರದರ್ಶನವೆಂದು ಪರಿಗಣಿಸಲಾಗಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ದೇವಾಲಯವು ಕಾಂಬೋಡಿಯಾದಲ್ಲಿನ 12 ನೇ ಶತಮಾನದ ಹಿಂದೂ ದೇವಾಲಯದ ಅಂಕೋರ್ ವಾಟ್ ನಂತರ ಎರಡನೇ ಅತಿ ದೊಡ್ಡ ದೇವಾಲಯವಾಗಿದೆ. ಕಾಂಬೋಡಿಯಾದಲ್ಲಿನ ಹಿಂದೂ ದೇವಾಲಯವು 500 ಎಕರೆಗಳಲ್ಲಿ ಹರಡಿದೆ.
ಇದನ್ನೂ ಓದಿ- ಜಗತ್ತಿನ ಅತ್ಯಂತ ದುಬಾರಿ ಕರೆನ್ಸಿ ಯಾವುದು ಗೊತ್ತಾ? ಒಂದು ಡಾಲರ್ಗಿಂತ ಹೆಚ್ಚು ಇದರ ಬೆಲೆ
ದೇವಾಲಯದ ವಿಶೇಷತೆ ಏನು?
ಅಕ್ಷರಧಾಮದ ವಿಶಿಷ್ಟವಾದ ಹಿಂದೂ ದೇವಾಲಯ ವಿನ್ಯಾಸವು ಒಂದು ಮುಖ್ಯ ದೇವಾಲಯ, 12 ಉಪ-ದೇಗುಲಗಳು, ಒಂಬತ್ತು ಶಿಖರಗಳು (ಶಿಖರದಂತಹ ರಚನೆಗಳು) ಮತ್ತು ಒಂಬತ್ತು ಪಿರಮಿಡ್ ಶಿಖರ್ಗಳನ್ನು ಒಳಗೊಂಡಿದೆ. ದೇವಾಲಯವು ಇದುವರೆಗೆ ನಿರ್ಮಿಸಲಾದ ಸಾಂಪ್ರದಾಯಿಕ ಕಲ್ಲಿನ ವಾಸ್ತುಶಿಲ್ಪದ ಅತಿದೊಡ್ಡ ದೀರ್ಘವೃತ್ತದ ಗುಮ್ಮಟವನ್ನು ಹೊಂದಿದೆ.
ಇದಲ್ಲದೆ, ದೇವಾಲಯವು ಸಾಂಪ್ರದಾಯಿಕ ಭಾರತೀಯ ಮೆಟ್ಟಿಲು ಬಾವಿಯಾದ ಬ್ರಹ್ಮ ಕುಂಡವನ್ನು ಹೊಂದಿದೆ. ಇದು ಭಾರತದ ಪವಿತ್ರ ನದಿಗಳು ಮತ್ತು ಯುಎಸ್ನ ಎಲ್ಲಾ 50 ರಾಜ್ಯಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ 300 ಕ್ಕೂ ಹೆಚ್ಚು ಜಲಮೂಲಗಳಿಂದ ನೀರನ್ನು ಒಳಗೊಂಡಿದೆ. ದೇವಾಲಯದ ನಿರ್ಮಾಣಕ್ಕೆ ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತಶಿಲೆ ಮತ್ತು ಗ್ರಾನೈಟ್ ನಂತಹ ನಾಲ್ಕು ವಿಧದ ಕಲ್ಲುಗಳನ್ನು ಬಳಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.