ಚೀನಾದ ಚಕ್ರವ್ಯೂಹದಲ್ಲಿ ಸಿಲುಕಿ `ಡೆಡ್ಲಿ ಲ್ಯಾಬ್` ಆದ ಪಾಕಿಸ್ತಾನ
ಚೀನಾದ ಚಾಣಾಕ್ಷತೆ ಮತ್ತು ಮತ್ತೊಂದೆಡೆ ಪಾಕಿಸ್ತಾನದ ಅಸಹಾಯಕತೆ ಅಥವಾ ಅವಿವೇಕವು ಮತ್ತೊಮ್ಮೆ ಇಡೀ ಪ್ರಪಂಚದ ಮುಂದೆ ಸಾಬೀತಾಗಿದೆ.
ನವದೆಹಲಿ: ಕೊರೊನಾವೈರಸ್ (Coronavirus) ಯುಗದಲ್ಲೂ ಚೀನಾ ಪಾಕಿಸ್ತಾನವನ್ನು ಹೇಗೆ ತನ್ನ ಬಲೆಗೆ ಸಿಲುಕಿಸುತ್ತಿದೆ ಎಂದರೆ ಪಾಕಿಸ್ತಾನ ಅಕ್ಷರಶಃ ಚೀನಾದ ಪ್ರಯೋಗ ಪಶು ಆಗಿ ಮಾರ್ಪಟ್ಟಿದೆ. ಅಂದರೆ ಚೀನಾ ತಾನು ತಯಾರಿಸುತ್ತಿರುವ ಕರೋನಾ ಲಸಿಕೆಯನ್ನು ಪಾಕಿಸ್ತಾನದವರ ಮೇಲೆ ಪ್ರ್ಯೋಗಿಸುತ್ತಿದ್ದು ಒಂದೊಮ್ಮೆ ಲಸಿಕೆ ಯಶಸ್ವಿಯಾದರೆ ಅದರ ಖ್ಯಾತಿ ಚೀನಾಗೆ ಬರುತ್ತದೆ. ಅದೇ ಲಸಿಕೆ ವಿಫಲವಾದರೆ ಪಾಕಿಸ್ತಾನ ನಾಗರೀಕರು ಅದರ ಅಪಾಯವನ್ನು ಎದುರಿಸಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಚೀನಾ ಕರೋನಾ ಲಸಿಕೆ ಕಂಡುಹಿಡಿದಿದ್ದು ಲಸಿಕೆ ಪ್ರಯೋಗ ಮಾಡಲು ಪಾಕಿಸ್ತಾನದ ಜನರನ್ನು ಆಯ್ಕೆ ಮಾಡಿದೆ ಎಂದು ಪಾಕಿಸ್ತಾನ (Pakistan)ದ ಟಿವಿ ಚಾನೆಲ್ ಹೇಳಿಕೊಳ್ಳುತ್ತಿವೆ. ಚೀನಾವು ಕರೋನಾಗೆ ಪರಿಹಾರವನ್ನು ಕಂಡುಹಿಡಿದಿದೆ ಎಂದು ತಿಳಿದಾಗ ಜಗತ್ತೇ ನಿಟ್ಟುಸಿರು ಬಿಡುವಂತಾಯಿತು. ಆದರೆ ಅದು ಲಸಿಕೆಯ ಪ್ರಯೋಗಕ್ಕಾಗಿ ಚೀನಾದವರನ್ನು ಬಿಟ್ಟು ಪಾಕಿಸ್ತಾನಿಗರನ್ನು ಆಯ್ಕೆ ಮಾಡುತ್ತಿರುವುದು ಒಂದು ರೀತಿಯ ಅನುಮಾನದ ಜೊತೆ ಆತಂಕಕ್ಕೂ ಕಾರಣವಾಗಿದೆ.
ಏಕೆಂದರೆ ಚೀನಾ (China) ತನ್ನ ಲಸಿಕೆಯ ಬಗ್ಗೆ ನಂಬಿಕೆಯನ್ನು ಹೊಂದಿದ್ದರೆ ಅದನ್ನು ಮೊದಲು ತನ್ನ ಜನರ ಮೇಲೆ ಪರೀಕ್ಷಿಸುತ್ತಿತ್ತು. ಆಗ ಮಾತ್ರ ಅದು ಪಾಕಿಸ್ತಾನ ಅಥವಾ ವಿಶ್ವದಾದ್ಯಂತ ತನ್ನ ಸ್ನೇಹಿತ ರಾಷ್ಟ್ರಗಳನ್ನು ತಲುಪುತ್ತದೆ. ಆದರೆ ಚೀನಾದ ಚಾಣಾಕ್ಷತೆ ಮತ್ತು ಮತ್ತೊಂದೆಡೆ ಪಾಕಿಸ್ತಾನದ ಅಸಹಾಯಕತೆ ಅಥವಾ ಅವಿವೇಕವು ಮತ್ತೊಮ್ಮೆ ಇಡೀ ಪ್ರಪಂಚದ ಮುಂದೆ ಸಾಬೀತಾಗಿದೆ.
ಕರೋನ ಸಾಂಕ್ರಾಮಿಕ ರೋಗದಿಂದ ಅನೇಕ ರೀತಿಯ ಬರ ಬರಬಹುದು: ವಿಶ್ವಸಂಸ್ಥೆ ಎಚ್ಚರಿಕೆ
ಪಾಕಿಸ್ತಾನವು ತನ್ನ ಜನರ ಜೀವ ಉಳಿಸಲು ಪ್ರಪಂಚದಾದ್ಯಂತ ಸಾವನ್ನು ವಿತರಿಸಿದ ದೇಶವನ್ನು ಅವಲಂಬಿಸಿರುವ ದೇಶವಾಗಿ ಕೈಕಟ್ಟಿ ಕುಳಿತಿದೆ.
ಆಶ್ಚರ್ಯಕರ ಸಂಗತಿಯೆಂದರೆ ಟಿವಿ ಮಾಧ್ಯಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಾದಿಯಾ ಅಫ್ಜಲ್ ಪಾಕಿಸ್ತಾನದ ಮಂತ್ರಿಯ ಪತ್ನಿ ಆಗಿದ್ದು ಪತ್ರದ ಪ್ರಕಾರ ಈ ಸಂಪೂರ್ಣ ಘಟನೆ ಸುಮಾರು 3 ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಆದರೆ ಈ ಲಸಿಕೆ ವಿಫಲವಾದರೆ ಮುಂದೇನು ಎಂಬ ಬಗ್ಗೆ ಅವರ ಬಳಿ ಉತ್ತರವಿಲ್ಲ.
ಕೊರೋನಾ ಮಟ್ಟ ಹಾಕಿದ ಬಳಿಕ ಜಗತ್ತು ಹೇಗಿರುತ್ತೆ ಎಂಬುದನ್ನು AEIOU ಆಧಾರದಲ್ಲಿ ಬಣ್ಣಿಸಿದ ಪ್ರಧಾನಿ ಮೋದಿ
ಲಸಿಕೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇಡೀ ಜಗತ್ತಿನಲ್ಲಿ ಸಾಕಷ್ಟು ಸಮಯವನ್ನು ಕಳೆಯಲಾಗುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಪ್ರಪಂಚದಾದ್ಯಂತದ ಹಲವು ವಿಜ್ಞಾನಿಗಳು ತಮ್ಮದೇ ಆದ ರೀತಿಯಲ್ಲಿ ಲಸಿಕೆ ಕಂಡು ಹಿಡಿಯುತ್ತಿದ್ದಾರೆ. ಹಲವು ವರ್ಷಗಳ ಕಾರ್ಯತಂತ್ರದ ನಂತರ ಅಂತಹ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯನ್ನು ಅನುಮತಿಸಲಾಗುತ್ತದೆ, ಆದರೆ ಚೀನಾದ ಆತುರದಿಂದ ಪಾಕಿಸ್ತಾನದಲ್ಲಿ ಜನರ ಜೀವವೇ ಅಪಾಯದಲ್ಲಿ ಸಿಲುಕುವ ಸಾಧ್ಯತೆ ಇದೆ. ಚೀನಾದ ಚಾಣಾಕ್ಷತೆ ಒಂದೆಡೆಯಾದರೆ ಪಾಕಿಸ್ತಾನದ ಅಸಹಾಯಕ ಪರಿಸ್ಥಿತಿ ಪಾಕಿಸ್ತಾನಿಗರ ಜೀವನವನ್ನು ಅಪಾಯದಲ್ಲಿ ಸಿಲುಕುವಂತೆ ಮಾಡಿದೆ.