BREAKING NEWS: ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ವಿಧಿವಶ
Pervez Musharraf No More: 1943ರ ಆಗಸ್ಟ್ 11ರಂದು ಹಳೆಯ ದೆಹಲಿಯಲ್ಲಿ ಜನಿಸಿದ್ದ ಪರ್ವೇಜ್ ಮುಷರಫ್ ಅವರು ಅಮಿಲೋಡೋಸಿಸ್‍ಗೆ ಬಲಿಯಾಗಿದ್ದಾರೆಂದು ಕುಟುಂಬ ಸದಸ್ಯರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನವದೆಹಲಿ: ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್(79) ದುಬೈನ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮುಷರಫ್‍ರನ್ನು ಯುಎಇಯ ಅಮೆರಿಕನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ(ಫೆ.5) ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: Viral News: ಹಲ್ಲಿನಿಂದ ಕಚ್ಚಿ ಹೆಬ್ಬಾವಿನ ತಲೆಯನ್ನು ಅದರ ದೇಹದಿಂದ ಬೇರ್ಪಡಿಸಿದ ವ್ಯಕ್ತಿ ..ಮುಂದೇನಾಯ್ತು ಗೊತ್ತಾ?
ಜನರಲ್ ಪರ್ವೇಜ್ ಮುಷರಫ್ ಅವರು 1999ರಲ್ಲಿ ಯಶಸ್ವಿ ಮಿಲಿಟರಿ ದಂಗೆಯ ನಂತರ ಪಾಕಿಸ್ತಾನದ 10ನೇ ಅಧ್ಯಕ್ಷರಾಗಿದ್ದರು. ಅವರು 1998ರಿಂದ 2001ರವರೆಗೆ ಪಾಕಿಸ್ತಾನದ 10ನೇ ಅಧ್ಯಕ್ಷರ ಜಂಟಿ ಮುಖ್ಯಸ್ಥರು ಮತ್ತು 1998 ರಿಂದ 2007ರವರೆಗೆ 7ನೇ ಉನ್ನತ ಜನರಲ್ ಆಗಿ ಸೇವೆ ಸಲ್ಲಿಸಿದರು.
https://twitter.com/ANI/status/1622113222533971968?ref_src=twsrc%5Etfw%7Ctwcamp%5Etweetembed%7Ctwterm%5E1622113222533971968%7Ctwgr%5Eb39ee4b24874645b085fd0ecc85007af0a5ef972%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fforyou%3Fmode%3Dpwaaction%3Dclicklaunch%3Dtrue
1943ರ ಆಗಸ್ಟ್ 11ರಂದು ಹಳೆಯ ದೆಹಲಿಯಲ್ಲಿ ಜನಿಸಿದ್ದ ಪರ್ವೇಜ್ ಮುಷರಫ್ ಅವರು ಅಮಿಲೋಡೋಸಿಸ್‍ಗೆ ಬಲಿಯಾಗಿದ್ದಾರೆಂದು ಕುಟುಂಬ ಸದಸ್ಯರ ಹೇಳಿಕೆ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Chinese Balloon: ಚೀನಾದ ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ..!
ಅನಾರೋಗ್ಯ ಸಮಸ್ಯೆಯಿಂದ ಮುಷರಫ್‍ರನ್ನು 1-2 ವಾರಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಷರಫ್ ಅವರು ಪತ್ನಿ ಸೆಹಬಾ ಮುಷರಫ್ ಮತ್ತು ಮಕ್ಕಳಾದ ಐಲಾ ಮುಷರಫ್ ಹಾಗೂ ಬಿಲಾಲ್ ಮುಷರಫ್ ರನ್ನು ಅಗಲಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.