Viral News: ಮಗುವಿಗೆ ಟಿಕೆಟ್ ಬೇಕು ಎಂದು ತಿಳಿದ ದಂಪತಿ ಮಗುವನ್ನು ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿ ಬಿಟ್ಟುಹೋಗಿದ್ದಾರೆ. ಈ ಸುದ್ದಿ ಇಸ್ರೇಲ್ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮೂಲಗಳಿಂದ ಬಂದಿದೆ. ವರದಿಯ ಪ್ರಕಾರ, ಈ ಘಟನೆಯು ಟೆಲ್ ಅವಿವ್ ಬೆನ್-ಗುರಿಯನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ: Joginder Sharma Retirement: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್!
ಸ್ಥಳೀಯ ಸುದ್ದಿವಾಹಿನಿಗಳ ಪ್ರಕಾರ ದಂಪತಿಗಳು ಬೆಲ್ಜಿಯಂ ಪಾಸ್‌ಪೋರ್ಟ್‌ನಲ್ಲಿ ಬ್ರಸೆಲ್ಸ್‌ಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಇದ್ದ ಮಗುವಿನ ಟಿಕೆಟ್‌ಗಾಗಿ ಹೆಚ್ಚುವರಿ ಹಣವನ್ನು ನೀಡಬೇಕೆಂದು ತಿಳಿದಬಂದಿದೆ. ದಂಪತಿ ಮಗುವಿನ ಟಿಕೆಟ್ ಅನ್ನು ಮುಂಚಿತವಾಗಿ ಖರೀದಿಸಿರಲಿಲ್ಲ ಎಂದು Ryanair Air ಹೇಳಿದೆ.
ಸಿಎನ್‌ಎನ್‌ಗೆ ಹೇಳಿಕೆ ನೀಡಿರುವ ಏರ್‌ಲೈನ್ಸ್, ಟೆಲ್ ಅವಿವ್‌ನಿಂದ ಬ್ರಸೆಲ್ಸ್‌ಗೆ ಪ್ರಯಾಣಿಸುತ್ತಿದ್ದ ಈ ಪ್ರಯಾಣಿಕರು ತಮ್ಮ ಮಗುವಿಗೆ ಟಿಕೆಟ್ ಬುಕಿಂಗ್ ಮಾಡದೆ ಚೆಕ್-ಇನ್ ಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಬೆನ್ ಗುರಿಯನ್ ಏರ್‌ಪೋರ್ಟ್‌ನಲ್ಲಿ ಚೆಕ್-ಇನ್ ಏಜೆಂಟ್ ಏರ್‌ಪೋರ್ಟ್ ಸೆಕ್ಯುರಿಟಿ ಅವರನ್ನು ತಡೆದಿದ್ದು, ಮುಂದೆ ಪ್ರಯಾಣಿಸಲು ಬಿಡಲಲ್ಲ. ಮಗುವಿಗೆ ಟಿಕೆಟ್ ಪಡೆಯಬೇಕು ಎಂದು ಸೂಚಿಸಿದ್ದಾರೆ. ಆದರೆ ಟಿಕೆಟ್ ಖರೀದಿಸದ ದಂಪತಿ ಮಗುವನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ಇದನ್ನು ಕಂಡುಕೊಂಡ ಪೊಲೀಸರು ತಕ್ಷಣವೇ ದಂಪತಿಯನ್ನು ತಡೆದು ಮಗುವನ್ನು ಅವರ ಕೈಗೆ ಒಪ್ಪಿಸಿ, ಪೋಷಕರನ್ನು ಪೊಲೀಸರ ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನ ನಿಲ್ದಾಣದಲ್ಲಿನ Ryanair ಸಿಬ್ಬಂದಿ ಮಾತನಾಡಿದ್ದು, “ಎಲ್ಲಾ ಕಾರ್ಮಿಕರು ಆಘಾತಕ್ಕೊಳಗಾಗಿದ್ದರು. ಇಂತಹ ಘಟನೆ ನಾವು ಇಲ್ಲಿವರೆಗೆ ನೋಡಿರಲಿಲ್ಲ. ನಂಬಲೂ ಸಹ ಅಸಾಧ್ಯವಾಗಿತ್ತು” ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.