ಲಾಹೋರ್: ಪಾಕಿಸ್ತಾನದ ವಿರೋಧ ಪಕ್ಷಗಳು ದೇಶದ ಗುಪ್ತಚರ ಸಂಸ್ಥೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (ISI chief Lieutenant General Faiz Hamid) ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ. ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ನಲ್ಲಿ ನಡೆದ ರ್ಯಾಲಿಯಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ ಈ ಬೇಡಿಕೆಯನ್ನು ಪ್ರಸ್ತಾಪಿಸಿತು. ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಕೈಗೊಂಬೆಯಾಗುವ ಮೂಲಕ ವಿರೋಧಿಗಳು, ವಿಶೇಷವಾಗಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಿಂದ 'ರಾಜಕೀಯ ಎಂಜಿನಿಯರಿಂಗ್' ಮಾಡಿದ ಆರೋಪ ಹೊತ್ತಿರುವ ಹಮೀದ್ ವಿರುದ್ಧ ರ್ಯಾಲಿಯಲ್ಲಿ ಘೋಷಣೆಗಳು ಕೂಡ ಎದ್ದವು.


COMMERCIAL BREAK
SCROLL TO CONTINUE READING

ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಮರಿಯಮ್ ಆರೋಪ:
ಐಎಸ್‌ಐ ಮುಖ್ಯಸ್ಥರ ನೇಮಕಾತಿಯಲ್ಲಿ ನಾಗರಿಕ ಮತ್ತು ಸೇನಾ ನಾಯಕತ್ವದ ನಡುವೆ ಭಿನ್ನಾಭಿಪ್ರಾಯವಿದೆ, ಏಕೆಂದರೆ ಫೈಜ್ ಹಮೀದ್ (Faiz Hamid) ಅವರನ್ನು ಬದಲಿಸಲು ಪ್ರಧಾನಿ ಇಮ್ರಾನ್ ಖಾನ್ ಬಯಸುವುದಿಲ್ಲ. ಇಮ್ರಾನ್ ಖಾನ್ ತನ್ನ 'ಸ್ವಾರ್ಥ' ಪೂರೈಸಲು ಸರ್ಕಾರದ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಮರಿಯಮ್ ಆರೋಪಿಸಿದ್ದರು. ಹಮೀದ್ ರಾಜೀನಾಮೆಗೆ ಒತ್ತಾಯಿಸಿದ ವಿಡಿಯೋ ತುಣುಕು ವೈರಲ್ ಆದ ನಂತರ ಗೃಹ ಸಚಿವ ಶೇಖ್ ರಶೀದ್ ಅವರು ಪಿಎಂಎಲ್-ಎನ್ ಉಪಾಧ್ಯಕ್ಷೆ ಮರಿಯಮ್  ನವಾಜ್ (Maryam Nawaz) ಅವರಿಗೆ "ಬೆಂಕಿಯೊಂದಿಗೆ ಆಟವಾಡಬೇಡಿ" ಎಂದು ಎಚ್ಚರಿಕೆ ನೀಡಿದರು. 


ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮಗಳು ಮರಿಯಮ್, ಇಮ್ರಾನ್ ಖಾನ್ ಚುನಾವಣೆಯಲ್ಲಿ ಮೋಸ ಮಾಡಿದ ತನ್ನ "ಗಾಡ್ ಫಾದರ್" (ಹಮೀದ್) ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ- Viral News: ಮನೆಯೊಳಗೆ ಇವುಗಳನ್ನು ನೋಡಿ ಹೌಹಾರಿದ ಮಹಿಳೆ, ಏನಿವು ನೋಡಿ


ವಿರೋಧಿಗಳ ಮೇಲಿನ ದೌರ್ಜನ್ಯದ ಆರೋಪ:
ಇಷ್ಟೇ ಅಲ್ಲದೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (ISI chief Lieutenant General Faiz Hamid) ವಿರುದ್ಧವೂ ವಾಗ್ಧಾಳಿ ನಡೆಸಿದ ಮರಿಯಮ್, ಹಮೀದ್ ತನ್ನ ವಿರೋಧಿಗಳನ್ನು ಹಿಂಸಿಸುತ್ತಿದ್ದಾರೆ ಮತ್ತು ನ್ಯಾಯಾಧೀಶರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಮತ್ತು ಪತ್ರಕರ್ತರನ್ನು ಅಪಹರಿಸುತ್ತಿದ್ದಾರೆ ಎಂದರು.


ಅಫ್ಘಾನಿಸ್ತಾನದ ಸಮಸ್ಯೆಯ ಆಳವಾದ ಜ್ಞಾನ ಮತ್ತು ನಿರ್ವಹಣೆಯಿಂದಾಗಿ ಹಮೀದ್‌ನನ್ನು ಐಎಸ್‌ಐ ಮುಖ್ಯಸ್ಥರನ್ನಾಗಿ ಉಳಿಸಿಕೊಳ್ಳಲು ಇಮ್ರಾನ್ ಖಾನ್ (Imran Khan) ಇಚ್ಚಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇಮ್ರಾನ್ ತನ್ನ ಆಡಳಿತವನ್ನು ಮುಂದುವರಿಸಲು ಬಯಸುತ್ತಾರೆ. ತನ್ನ ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ಐಎಸ್‌ಐ ಮುಖ್ಯಸ್ಥರನ್ನು ಬದಲಿಸಲು ಅವರು ಇಚ್ಚಿಸುತ್ತಿಲ್ಲ.  ಐಎಸ್‌ಐ ಮುಖ್ಯಸ್ಥರನ್ನು ಬದಲಿಸಿದರೆ, ಇಮ್ರಾನ್ ಸರ್ಕಾರ ಪತನವಾಗುತ್ತದೆ ಎಂದು ಮರಿಯಮ್ ಹೇಳಿದರು.


ಇದನ್ನೂ ಓದಿ- Mystery Island: ಎಲ್ಲಿದೆ ಈ ಭಯಾನಕ ನಡುಗಡ್ಡೆ, Google Mapನಲ್ಲಿ ನೋಡಿದ ಜನರು ಭಯಬೀತರಾಗಿ ಹೇಳಿದ್ದೇನು ಗೊತ್ತಾ?


ಹೊಸ ಐಎಸ್‌ಐ ಮುಖ್ಯಸ್ಥರ ನೇಮಕವನ್ನು ಇಮ್ರಾನ್ ಅನುಮೋದಿಸಲಿಲ್ಲ:
ಐಎಸ್ಐ ಮುಖ್ಯಸ್ಥರ ನೇಮಕದ ಸಮಸ್ಯೆಯನ್ನು ಈ ವಾರ ಶುಕ್ರವಾರದೊಳಗೆ ಪರಿಹರಿಸಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಏಕೆಂದರೆ ನಾಗರಿಕ ಮತ್ತು ಸೇನಾ ನಾಯಕತ್ವವು ಈ ವಿಷಯದಲ್ಲಿ ಒಮ್ಮತವನ್ನು ತಲುಪಿದೆ. ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ, ಈ ತಿಂಗಳ ಆರಂಭದಲ್ಲಿ ಉನ್ನತ ಮಿಲಿಟರಿ ಶ್ರೇಣಿಯಲ್ಲಿನ ಪುನಾರಚನೆಯಲ್ಲಿ, ಐಎಸ್‌ಐ ಡೈರೆಕ್ಟರ್ ಜನರಲ್ ಲೆಫ್ಟಿನೆಂಟ್ ಜನರಲ್ ಹಮೀದ್ ಅವರನ್ನು ಪೇಶಾವರ್ ಕಾರ್ಪ್ಸ್ ಕಮಾಂಡರ್ ಹುದ್ದೆಗೆ ವರ್ಗಾಯಿಸಿದ್ದಾರೆ ಎಂದು ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಸಾರ್ವಜನಿಕ ಸಂಪರ್ಕ (ಐಎಸ್‌ಪಿಆರ್) ಹೇಳಿದೆ. ಕರಾಚಿ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ ಅವರನ್ನು ಹೊಸ ಐಎಸ್‌ಐ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಆದಾಗ್ಯೂ, ಸರ್ಕಾರವು ಹೊಸ ಐಎಸ್‌ಐ ಮುಖ್ಯಸ್ಥರ ನೇಮಕವನ್ನು ಅನುಮೋದಿಸಿಲ್ಲ, ಇದು ಮಿಲಿಟರಿ ಮತ್ತು ನಾಗರಿಕ ನಾಯಕತ್ವದ ನಡುವಿನ ಬಿರುಕು ಎಂದು ಪರಿಗಣಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ